ಡಾ.ಆರತಿ ಕೃಷ್ಣ ಅವರು ನೊಂದ ಕುಟುಂಬಸ್ಥರನ್ನು ಭೇಟಿಯಾದ ಕ್ಷಣ
ನೇಜಾರು ನಾಲ್ವರ ಹತ್ಯೆ ಪ್ರಕರಣ: ನೊಂದ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಡಾಕ್ಟರ್ ಆರತಿ ಕೃಷ್ಣ.
𝒮𝓊𝒹𝒽𝒾𝓇 𝓋𝒾𝒹𝒽𝒶𝓉𝒶
news.ashwasurya.in
ಉಡುಪಿ: ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷೆ ಆಗಿರುವ ಡಾ.ಆರತಿ ಕೃಷ್ಣ ಅವರು ತಾಯಿ ಹಾಗೂ ಮೂವರು ಮಕ್ಕಳು ಹತ್ಯೆಯಾದ ನೇಜಾರುವಿನ ಮನೆಗೆ ಭಾನುವಾರ ಭೇಟಿ ನೀಡಿ ಮೃತ ಹಸೀನಾ ಅವರ ಪತಿ ನೂರ್ ಮೊಹಮ್ಮದ್ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಆರೋಪಿತನಿಗೆ ಕಠಿಣ ಶಿಕ್ಷೆ ವಿಧಿಸಿಬೇಕು ಜೋತೆಗೆ ಈ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮಾಡಬೇಕು ಹಾಗೂ ವಕೀಲ ಶಿವಪ್ರಸಾದ್ ಆಳ್ವ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸುವಂತೆ ಕುಟುಂಬದ ಸದಸ್ಯರು ಆರತಿ ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಡಾಕ್ಟರ್ ಆರತಿ ಕೃಷ್ಣ
ಮನವಿ ಸ್ವೀಕರಿಸಿ ಮಾತನಾಡಿದ ಆರತಿ ಕೃಷ್ಣ ಅವರು ಕುಟುಂಬದವರು ಸಲ್ಲಿಸಿದ ಮನವಿಯನ್ನು ನಾನು ಮುಖ್ಯಮಂತ್ರಿಯವರೊಂದಿಗೆ ಕೂಡಲೇ ಚರ್ಚಿಸುತ್ತೇನೆ ಮತ್ತು ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಕೂಡ ಹೋರಾಟ ಮಾಡುತ್ತೇನೆ ಎಂದರು.
ಆರತಿ ಕೃಷ್ಣ ಅವರ ಜೊತೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಎಂಎ ಗಫೂರ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ವಿಶ್ವಾಸ್ ಅಮೀನ್, ಯು.ಟಿ ಇಫ್ತಿಕರ್ ಅಲಿ ಹಾಜರಿದ್ದರು.
ಸುಧೀರ್ ವಿಧಾತ ,ಶಿವಮೊಗ್ಗ