ಭ್ರೂಣ ಪತ್ತೆ ಮತ್ತು ಹತ್ಯೆ ಗ್ಯಾಂಗ್ ಜೈಲಿಗೆ! ಒಂದು ವರ್ಷದಲ್ಲಿ 900 ಭ್ರೂಣ ಹತ್ಯೆಮಾಡಿದ ಹಂತಕರು!!

ಭ್ರೂಣ ಪತ್ತೆ ಮತ್ತು ಹತ್ಯೆ ಗ್ಯಾಂಗ್ ಜೈಲಿಗೆ! ಒಂದು ವರ್ಷದಲ್ಲಿ 900 ಭ್ರೂಣ ಹತ್ಯೆಮಾಡಿದ ಹಂತಕರು!!

𝓃𝑒𝓌𝓈.𝒶𝓈𝒽𝓌𝒶𝓈𝓊𝓇𝓎𝒶.𝒾𝓃

𝒮𝓊𝒹𝒽𝒾𝓇 𝓋𝒾𝒹𝒽𝒶𝓉𝒶

ಭ್ರೂಣಲಿಂಗ ಪತ್ತೆಮಾಡುವುದಲ್ಲದೆ ಭ್ರೂಣ ಹತ್ಯೆಯನ್ನು ಮಾಡಿಸುತ್ತಿದ್ದ ಪಾತಕಿಗಳ ತಂಡವೊಂದನ್ನು ಬೈಯಪ್ಪನಹಳ್ಳಿ ಪೊಲೀಸರು ಬಯಲಿಗೆಳೆದು ಹೆಡೆಮುರಿಕಟ್ಟಿದ್ದಾರೆ. ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 900ಕ್ಕೂ ಹೆಚ್ಚು ಭ್ರೂಣಲಿಂಗ ಹತ್ಯೆ ಮಾಡಿರುವ ನಟೋರಿಯಸ್ ಗಳನ್ನು ಕಂಡು ಪೊಲೀಸರೆ ಒಮ್ಮೆ ಅದರಿ ಹೋಗಿದ್ದಾರೆ.?

ಬೆಂಗಳೂರು :  ಸಿಲಿಕಾನ್ ಸಿಟಿ ಬೆಂಗಳೂರು ಸಾಕಷ್ಟು ಅಕ್ರಮ ದಂಗೆಗಳನ್ನು ಅವಚಿಗೊಂಡಿದೆ. ಕ್ಷಣ ಕ್ಷಣಕ್ಕೂ ಕ್ರೈಮ್ ಗಳು ನೆಡೆದು ಹೋಗುತ್ತಿರುತ್ತವೆ. ಒಂದಷ್ಟು ಪ್ರಕರಣಗಳು ಬೆಳಕಿಗೆ ಬಂದರೆ ಅದೆಷ್ಟೋ ಪ್ರಕರಣಗಳು ಸಿಲಿಕಾನ್ ಸಿಟಿಯ ಗರ್ಭದಲ್ಲೆ ಬೇರು ಬಿಟ್ಟಿದೆ!! ಇಂತಹ ದಂಧೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಮಾಡುತ್ತಿದ್ದ ದಂಧೆಕೋರರ ಜಾಲವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಪತ್ತೆಹಚ್ಚಿ ಭೇದಿಸಿದ್ದಾರೆ. ಈ ಖತರ್ನಾಕ್ ಗ್ಯಾಂಗ್ ಮೊದಲಿಗೆ ಗರ್ಭಿಣಿಯರನ್ನು ಹುಡುಕಿ ಬಳಿಕ  ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ ಹಚ್ಚಿದ ನಂತರ ಹೆಣ್ಣು ಮಗುವೆಂದು ಗೊತ್ತಾದರೆ ಸಾಕು ಗರ್ಭಪಾತ ಮಾಡಿಸಲು ಸ್ಕೆಚ್‌ ಹಾಕುತ್ತಿದ್ದರಂತೆ ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಆರೋಪಿಗಳ ಹೇಳಿಕೆ ಅಧಾರದ ಮೇಲೆ ಇನ್ನಷ್ಟು ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಭ್ರೂಣ ಹತ್ಯೆ ತಂಡದಲ್ಲಿ ವೈದ್ಯರೂ ಭಾಗಿ

ಇಂತದೊಂದು ನಟ್ ವರ್ಕ್ ನೆಡೆಯುತ್ತಿದೆ ಎಂದು ಅರಿತ ಪೋಲಿಸರು ಕಾರ್ಯಚರಣೆಗೆ ಮುಂದಾಗಿದ್ದಾರೆ. ಭ್ರೂಣ ಲಿಂಗ ಪತ್ತೆ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಆರಂಭದಲ್ಲೇ  ಶಿವನಂಜೇಗೌಡ. ವೀರೇಶ್ ,ನವೀನ್ ಮತ್ತು ನಯನ್ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಬಂಧಿತ ಖತರ್ನಾಕ್ ಗ್ಯಾಂಗಿನ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ ಬಳಿಕ ಈ ಒಂದು ಪ್ರಕರಣದಲ್ಲಿ ವೈದ್ಯರೂ ಸಹ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಚನ್ನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ (ಮೈಸೂರಿನ ಮಾತಾ ಅಸ್ಪತ್ರೆಯ ಮಾಲಿಕ) ಡಾ‌‌.ಚಂದನ್ ಬಲ್ಲಾಳ್ ಪತ್ನಿ ಮೀನಾ, ಲ್ಯಾಬ್ ಟೆಕ್ನೀ಼ಶಿಯನ್ ನಿಸ್ಸಾರ್ ಅವರನ್ನು ಬಂಧಿಸಲಾಗಿದೆ!
ಈ ಒಂದು ತಂಡದಲ್ಲಿ ಒಟ್ಟು ಒಂಬತ್ತು ಜನ ಸೇರಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವ್ಯವಸ್ಥಿತವಾಗಿ ಈ ಕೃತ್ಯ ಎಸಗುತಿದ್ದರಂತೆ!?
ಈ ಖತರ್ನಾಕ್ ಗಳ ತಂಡ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಈ ಕೃತ್ಯವನ್ನು ಎಸಗುತಿದ್ದರೆನ್ನುವುದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ ಬಂದಿದೆ. ಅರಮನೆಗಳ ನಗರಿ ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ ಮತ್ತು ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ ಗಳ ಮೇಲೆ ಮಾಹಿತಿ ಅಧಾರದ ಸೀಜ್ ಮಾಡಿದ ಪೊಲೀಸರು ಸ್ಥಳ ಪರಿಶೀಲನೆಮಾಡಿ ಹೆಣ್ಣು ಭ್ರೂಣ ಹತ್ಯೆಯನ್ನು ಇದೇ ಡೇ ಕೇರ್‌ನಲ್ಲಿ ಮಾಡುತ್ತಿದ್ದರು ಎನ್ನುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಈ ಖತರ್ನಾಕ್ ಗಳ ಗ್ಯಾಂಗ್
ಎರಡು ವರ್ಷಗಳಲ್ಲಿ ಸುಮಾರು 900 ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದ್ದು ಹೆಚ್ಚಿನ ತನಿಖೆಯನ್ನು ಮುಂದುರೆಸಿದ್ದಾರೆ ಬೈಯಪ್ಪನಹಳ್ಳಿ ಪೊಲೀಸರು.
ಕಳೆದ ಅಕ್ಟೋಬರ್ ನಲ್ಲಿ ಈ ಪ್ರಕರಣ ಸಂಬಂಧ ಮೊದಲ ಕೇಸ್ ದಾಖಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದಾರೆ ಈ ಸಂಧರ್ಭದಲ್ಲಿ ಪೊಲೀಸರಿಗೆ ಸಿಕ್ಕ  ಒಂದು ಮಾಹಿತಿ ಆಧರಿಸಿ ಕಾರ್ಯಚರಣೆಗೆ ಇಳಿದ ಪೊಲೀಸರು ಪ್ರಥಮ ಹಂತದಲ್ಲೆ ನಾಲ್ವರು  ಆರೋಪಿಗಳ ಸಹಿತ ಸ್ಕ್ಯಾನಿಂಗ್ ಮಿಷಿನ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಈ ತಂಡ ಒಂದು ಭ್ರೂಣ ಪತ್ತೆ ಮಾಡಲು 20 ರಿಂದ 25  ಸಾವಿರ ಹಣ ಪಡೆಯುತ್ತಿದ್ದ ಖದೀಮರು. ಒಟ್ಟು ಐವತ್ತು ಸಾವಿರಕ್ಕೆ ಒಂದು ಭ್ರೂಣ ಹತ್ಯೆ ಮಾಡ್ತಿದ್ದರಂತೆ!! ಈ ತಂಡದಲ್ಲಿ ಎರಡು ಗ್ರೂಪ್‌ ಮಾಡಿಕೊಂಡಿದ್ದರು. ಮೊದಲನೆ ಗ್ಯಾಂಗ್ ಭ್ರೂಣ ಪತ್ತೆ ಮಾಡಿಸುತ್ತಿದ್ದರೆ ಇನ್ನೊಂದು ತಂಡ ಭ್ರೂಣ ಹತ್ಯೆಯನ್ನು ಮಾಡುತ್ತಿದ್ದರಂತೆ!! ಈ ಪ್ರಕರಣದಲ್ಲಿ ಎರಡು ತಂಡಗಳಾಗಿ ಕೆಲಸ ಮಾಡುತ್ತಿದ್ದ ಅರೋಪಿಗಳು ಎರಡು ವರ್ಷದಿಂದ ಈ ದಂಧೆಯನ್ನು ನಿರಂತರವಾಗಿ ಮಾಡುತ್ತಿದ್ದರಂತೆ.ಮೊದಲ ಹಂತದಲ್ಲಿ ನಾಲ್ವರನ್ನು ಬಂಧಿಸಿದ ಪೋಲಿಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮುಂದಿನ ತನಿಖೆ ಕೈಗೊಂಡ ಪೋಲಿಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಒಂಬತ್ತು ಜನ ಆರೋಪಿಗಳ ಖತರ್ನಾಕ್ ಗ್ಯಾಂಗಿನಲ್ಲಿ ಇಬ್ಬರು ವೈದ್ಯರೂ ಸೇರಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಡಿಸಿಪಿ ದೇವರಾಜ್‌ ಹೇಳಿದ್ದು…

ಈ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹದಿನೈದು ದಿನಗಳ ಹಿಂದೆ ಬೈಯಪ್ಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಮಂಡ್ಯ ಮೂಲದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಗಳಿಗೆ ಭ್ರೂಣ ಪತ್ತೆ ಗೆ ಬರುವವರ ಗರ್ಭಿಣಿಯರ ಮಾಹಿತಿ ಕಲೆಹಾಕುತ್ತಿದ್ದರು ದಾಖಲಾದ ಪ್ರಕರಣದ ಮಾಹಿತಿ ಅಧಾರದ ಮೇಲೆ ಪೊಲೀಸರು ನಾಲ್ವರನ್ನು  ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಭ್ರೂಣ ಪತ್ತೆಗೆ ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಶೀಟ್ ಮನೆ ಮಾಡಿಕೊಂಡು ಅದರಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು.ನಮ್ಮ ಪೊಲೀಸರು ದಾಳಿ ನಡೆಸಿ ಸ್ನ್ಕಾನಿಂಗ್ ಮೆಷಿನ್ ಸೇರಿದಂತೆ ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ವೇಳೆ ಕೆಲ ಆಸ್ಪತ್ರೆಗಳು ಮತ್ತು ವೈದ್ಯರು ಈ ಭ್ರೂಣಹತ್ಯೆ ತಂಡದಲ್ಲಿ ಇದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಭ್ರೂಣ ಪತ್ತೆಯ ಜೊತೆಗೆ ಹತ್ಯೆಯನ್ನು ಮಾಡಿಸುತ್ತಿದ್ದದ್ದು ಬೆಳಕಿಗೆ ಬಂದಿದ್ದು. ಮೈಸೂರು ಮಾತಾ ಆಸ್ಪತ್ರೆಯ ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ ಬಲ್ಲಾಳ್,  ಮತ್ತೊಬ್ಬ ವೈದ್ಯ ಡಾ, ತುಳಸಿರಾಮ್ , ಮಧ್ಯವರ್ತಿ ರಿಸ್ಜ್ಮಾ  ಭ್ರೂಣ ಪತ್ತೆಯ ಜೋತೆಗೆ ಹತ್ಯೆಯನ್ನು ಮಾಡುತ್ತಿದ್ದರಂತೆ. ಕಳೆದ ಎರಡು ಮೂರು ವರ್ಷಗಳಿಂದ ಈ ಗ್ಯಾಂಗ್ ಈ ರೀತಿ ಕೃತ್ಯ ವೆಸಗಿರೋದು ಪೋಲಿಸರ ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದೇವೆ ಬೇರೆ ಆಸ್ಪತ್ರೆಗಳು ಭಾಗಿಯಾಗಿದ್ದಾವ ಅನ್ನೋ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!