ಪೊಲೀಸರನ್ನೇ ನಕ್ಸಲ್ ಎಂದು ಬಿಂಬಿಸಲು ಹೋದ ವಂಚಕ!! ಈಗ ಪೋಲಿಸರ ಅತಿಥಿ.
news.Ashwasurya.in
ಬೆಳ್ತಂಗಡಿ : ಪ್ರಕರಣವೊಂದಕ್ಕೆ ಸಂಭಂದಿಸಿದಂತೆ ತನಿಖೆಗೆ ಆಗಮಿಸಿದ ಪೊಲೀಸರಿಗೆ ನಕ್ಸಲ್ ಹಣೆಪಟ್ಟಿ ಕಟ್ಟಿದ ಭೂಪ. ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರು ನಿವಾಸಿ ಜೋಸಿ ಆಂಟೋನಿ ಎಂಬಾತನೆ ಈ ರೀತಿಯಾಗಿ ಗೊಂದಲ ಸೃಷ್ಟಿಸಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ.
ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಜೋಸಿ ಅಂಟೋನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲೆಂದು ಮೂಡಬಿದಿರೆ ಪೊಲೀಸರು ಕಳೆದ ಬುಧವಾರ ರಾತ್ರಿ 9.30ರ ಸುಮಾರಿಗೆ ಜೋಸಿಯ ಮನೆಗೆ ಆಗಮಿಸಿದ್ದರು.ಒಳಗಿನಿಂದಲೆ ಪೊಲೀಸರು ಬಂದಿರುವುದನ್ನು ಗಮನಿಸಿದ ವಂಚಕ ಮನೆಯ ಬಾಗಿಲನ್ನು ತೆರೆಯದೆ ಕುಳಿತಲ್ಲೆ ಪ್ಲಾನ್ ಒಂದನ್ನು ರೇಡಿಮಾಡಿದ ವಂಚಕ ಜೋಸಿ ಆಂಟೋನಿ ಮನೆಯ ಒಳಗಿನಿಂದಲೇ ಪೋಲಿಸ್ ಕಂಟ್ರೋಲ್ ರೂಂ ಗೆ ಫೋನ್ ಮಾಡಿ ಸಾರ್ ನನ್ನ ಮನೆಗೆ ನಕ್ಸಲ್ ಬಂದಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ.ಮನೆಗೆ ಇತನನ್ನು ಹುಡುಕಿಕೊಂಡು ಬಂದ ಪೋಲಿಸರಿಗೆ ನಕ್ಸಲ್ ಪಟ್ಟ ಕೊಟ್ಟಿದ್ದಾನೆ!! ಇದರಿಂದ ಜಾಗೃತಗೊಂಡ ಜೋಸಿ ಮನೆಗೆ ಧಾವಿಸಿದ್ದ ವೇಣೂರು ಮತ್ತು ಬೆಳ್ತಂಗಡಿ ಪೊಲೀಸರು ವಿಚಾರಣೆ ವೇಳೆಗೆ ಮನೆಗೆ ಬಂದಿರೋರು ಪೊಲೀಸರು ಎನ್ನುವ ವಿಚಾರ ಬಯಲು ಆಗಿದೆ. ಜೋಸಿ ಆಂಟೋನಿ
ಬೆಂಗಳೂರು ನಿವಾಸಿ ಶರತ್ ಕುಮಾರ್ ಎಂಬವರಿಗೆ ಜಮೀನು ಮಾರಾಟ ಮಾಡುವ ವಿಚಾರದಲ್ಲಿ ವಂಚನೆಯನ್ನು ಎಸಗಿದ್ದನಂತೆ. ಈ ಕಾರಣಕ್ಕೆ ಇವನ ಮೇಲೆ ಪ್ರಕರಣ ದಾಖಲಾಗಿದೆ. ಕಾಸರಗೋಡು ಭಾಗದಲ್ಲಿ ನಕ್ಸಲ್ ಕಾಣಿಸಿಕೊಂಡ ಬಗ್ಗೆ ವರದಿ ಹಿನ್ನಲೆಯಲ್ಲಿ ಅಲರ್ಟ್ ಆಗಿದ್ದ ನಕ್ಸಲ್ ನಿಗ್ರಹ ದಳದ ಪೊಲೀಸರು ಇದ್ದಾರೆ ಎಂದು ಅರಿತ್ತಿದ್ದ ಜೋಸಿ. ನನ್ನ ಮನೆಗೆ ನಕ್ಸಲ್ ಬಂದಿದ್ದಾರೆ ಎಂದು ಪೋಲಿಸರಿಗೆ ನಕ್ಸಲ್ ಪಟ್ಟಕಟ್ಟಿ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ್ದಾನೆ.
ಸುಧೀರ್ ವಿಧಾತ ,ಶಿವಮೊಗ್ಗ