2017 ಶಿಕಾರಿಪುರ ಗೋಣಿ ಮೂರ್ತಪ್ಪ ಕೊಲೆ ಪ್ರಕರಣ : ನಾಲ್ಕು ಮಂದಿ ಆರೋಪಿತರಿಗೆ ಜೀವಾವಧಿ ಶಿಕ್ಷೆ.
ಪ್ರಕರಣದ ವಿವರ
ಕಳೆದ ಸುಮಾರು ಆರು ವರ್ಷದ ಹಿಂದೆ ( 21-04-2017 ) ಶಿಕಾರಿಪುರ ನಗರದ ಚೌರಡೇರಕೇರಿಯ ವಾಸಿಗಳಾದ ಗೋಣಿ ಮೂರ್ತಪ್ಪ ಮತ್ತು ಪಕ್ಕದ ಮನೆಯರಾದ ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ಇವರುಗಳ ನಡುವೆ ಹುಣಸೇ ಮರದ ಕಸದ ವಿಚಾರವಾಗಿ ಜಗಳವಾಗಿದೆ ಜಗಳ ವಿಕೋಪಕ್ಕೆ ಹೋಗಿದ್ದು ವೈಮನಸ್ಯು ಹುಟ್ಟಿಕೊಂಡಿದೆ ಇದೇ ಕಾರಣಕ್ಕೆ ದ್ವೇಶದ ಹಿನ್ನೆಲೆಯಲ್ಲಿ ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ಇವರುಗಳು ಸೇರಿಕೊಂಡು 46 ವರ್ಷದ ಗೋಣಿ ಮೂರ್ತಪ್ಪನ ಮೇಲೆ ಕಂದಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆಂದು ಮೃತನ ಹೆಂಡತಿ ನೀಡಿದ ದೂರಿನ ಮೇರೆಗೆ ಶಿಕಾರಿಪು ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0062/2017 ಕಲಂ 143, 147, 148, 504, 323, 447, 506(2), 302, 307 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತು
ಈ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀ ಹರೀಶ್ ಕೆ ಪಟೇಲ್, ಸಿಪಿಐ, ಶಿಕಾರಿಪುರ ವೃತ್ತ ರವರು ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಹೇಮಂತ್ ಕುಮಾರ್, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ದಿನಾಂಕಃ 21-11-2023 ರಂದು ಆರೋಪಿತರ ವಿರುದ್ಧ ಕೊಲೆ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಆರೋಪಿ 1)ಅವಿನಾಶ್ @ ಅವಿ, 25 ವರ್ಷ, ಚೌರಡೇರಕೇರಿ, ಶಿಕಾರಿಪು ಟೌನ್, 2) ಪ್ರಶಾಂತ @ ಗುಂಡ, 26 ವರ್ಷ, ಕುಂಬಾರಗುಂಡಿ ಶಿಕಾರಿಪುರ ಟೌನ್, 3) ಪ್ರದೀಪ್ ಆರ್, 28 ವರ್ಷ, ಚನ್ನಕೇಶವ ನಗರ, ಶಿಕಾರಿಪುರ ಟೌನ್ ರವರಿಗೆ ಜೀವಾವದಿ ಶಿಕ್ಷೆ ಮತ್ತು ತಲಾ ರೂ 90,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ಹಾಗೂ 4) ಗುತ್ಯಪ್ಪ @ ಗೌತಮ್, 28 ವರ್ಷ, ಶಿಕಾರಿಪುರ ಟೌನ್ ಈತನಿಗೆ ಜೀವಾವದಿ ಶಿಕ್ಷೆ ಮತ್ತು ರೂ 80,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ಹಾಗೂ 5) ಅಕ್ಷಯ್, 24 ವರ್ಷ, ಮಾಯಪ್ಪನಕೇರಿ ಶಿಕಾರಿಪುರ ಟೌನ್ ಈತನ ವಿರುದ್ಧ ಕಲಂ 201 ಐಪಿಸಿ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 3 ವರ್ಷ ಕಾರಾವಾಸ ಶಿಕ್ಷೆ ಮತ್ತು ರೂ 10,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
ಸುಧೀರ್ ವಿಧಾತ , ಶಿವಮೊಗ್ಗ