ಜೆಡಿಎಸ್ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬೃಹತ್ ಪ್ರತಿಭಟನೆ

ಜೆಡಿಎಸ್ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬೃಹತ್ ಪ್ರತಿಭಟನೆ

ನಾಳೆ ಬೆಳಗ್ಗೆ 11:30 ಘಂಟೆಗೆ ಸರಿಯಾಗಿ ಶಿವಮೊಗ್ಗ ಜಿಲ್ಲಾ ಜೆಡಿಎಸ್ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಟನಾ ಮೆರವಣಿಗೆಯೂ ನೆಹರು ರಸ್ತೆಯಲ್ಲಿರುವ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಹೊರಟು ಗೋಪಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಲಿದೆ. ಪ್ರತಿಭಟನೆಯ ನೇತೃತ್ವವನ್ನು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಕಡಿದಾಳು ಗೋಪಾಲ್ ರವರು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯ್ಯ ನಾಯಕ್ ರವರು, ಶಿವಮೊಗ್ಗ ನಗರದ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು ವಹಿಸಲಿದ್ದು. ಸದರಿ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲಾ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ.ಜೆಡಿಎಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಮತ್ತು ಹಿತೈಷಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಯಾಗೊಳಿಸಿಕೊಡಬೇಕಾಗಿ ಪಕ್ಷದ ನಾಯಕರು ತಿಳಿಸಿದ್ದಾರೆ.

ತಾವುಗಳೆಲ್ಲರೂ ಈ ಒಂದು ಕಾರ್ಯಕ್ರಮಕ್ಕೆ ದಯಮಾಡಿ ಆಗಮಿಸಬೇಕಾಗಿ ತಮ್ಮಲ್ಲಿ ಈ ಮೂಲಕ ಕೂರುತ್ತೇವೆ

ದಿನಾಂಕ : 22-11-23 ಬುದುವಾರ
ಸಮಯ : ಬೆಳಗ್ಗೆ : 11:30 ಘಂಟೆಗೆ
ಸ್ಥಳ : ನೆಹರು ರಸ್ತೆ, ಜೆಡಿಎಸ್ ಕಚೇರಿ

ವಂದನೆಗಳೊಂದಿಗೆ:
ದೀಪಕ್ ಸಿಂಗ್
ಅಧ್ಯಕ್ಷರು, ಶಿವಮೊಗ್ಗ ನಗರ ಜೆಡಿಎಸ್.

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!