ಶಿವಮೊಗ್ಗ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರಾ ಹೆಚ್ ಎಸ್ ಸುಂದರೇಶ್ ?
News.Ashwasurya.in
► 2024ರ ಲೋಕಸಭಾ ಚುನಾವಣೆಗೆ ಕೈ ಟಿಕೆಟ್ ರೇಸ್’ನಲ್ಲಿ ಮುಂಚೂಣಿಯಲ್ಲಿರು ಸುಂದರೇಶ್ ಅವರಿಗೆ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆ ಇದೆ ಎನ್ನಾಲಾಗುತ್ತಿದೆ
ಶಿವಮೊಗ್ಗ : 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳು ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿವೆ. ಈ ಬಾರಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿರುವ ಆಡಳಿತ ಪಕ್ಷ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಮನ ಹರಿಸಿದ್ದು ಪ್ರತಿಯೊಂದು ಕ್ಷೇತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆಗೆ ಅಣಿಯಾಗುತ್ತಿದೆ. ಸದ್ಯದಲ್ಲಿಯೇ ರಾಜ್ಯದ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಿಗೂ ವೀಕ್ಷಕರನ್ನು ಕಳುಹಿಸಿ ಕೊಟ್ಟು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಯಾರೆ ವೀಕ್ಷಕರಾಗಿ ಬಂದರು ಸುಂದರೇಶ್ ಅವರ ಹೆಸರು ಪ್ರಬಲವಾಗಿ ಕೇಳಿ ಬರಲಿದೆ. ಈಗಾಗಲೇ ವರಿಷ್ಠರ ಮಟ್ಟದಲ್ಲಿ ಸುಂದರೇಶ್ ಅವರ ಹೆಸರು ಕೇಳಿ ಬಂದಿದೆ. ಇನ್ನು ವೀಕ್ಷಕರು ಬಂದು ಸಭೆ ನಡೆಸಿ ಜಿಲ್ಲಾ ಮಟ್ಟದ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಂತರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳು ಮತ್ತು ಬ್ಲಾಕ್ ಮಟ್ಟದ ನಾಯಕರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಲೋಕಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿ ಯಾರು ಎನ್ನುವುದನ್ನು ಕೆಪಿಸಿಸಿಗೆ ವರದಿ ಸಲ್ಲಿಸಲಿದ್ದಾರೆ.
ಸದ್ಯ ಕರ್ನಾಟಕದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಜನಪ್ರಿಯ ನಾಯಕ ಸಂಘಟನ ಚತುರ ಹೆಚ್ ಎಸ್ ಸುಂದರೇಶ್ ಹೆಸರು ಮುಂಚೂಣಿಯಲ್ಲಿದೆ. ಇದು ಪಕ್ಷಕ್ಕಾಗಿ ಕಳೆದ ಮೂವತ್ತೈದು ವರ್ಷದಿಂದ ದುಡಿದಂತಹ ಸುಂದರೇಶ್ ಅವರಿಗೆ ಸಿಗಬೇಕಾದ ಗೌರವವು ಹೌದು. ಈ ಬಾರಿ ಹಿಂದುಳಿದ ವರ್ಗದ ಒಕ್ಕಲಿಗ ಜನಾಂಗದವರಿಗೆ ಒಂದು ಅವಕಾಶ ನೀಡಬೇಕು ಎಂಬ ಆಗ್ರಹ ಜೋರಾಗಿ ಕೇಳಿಬರುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಮತಗಳು ಅಧಿಕ ಸಂಖ್ಯೆಯಲ್ಲಿದ್ದು ಜೋತೆಗೆ ಸುಮಾರು 1,70,000 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಆದರೆ ಈವರೆಗೆ ಒಮ್ಮೆಯೂ ಈ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಅವಕಾಶ ಸಿಕ್ಕಿಲ್ಲ. ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಸತತವಾಗಿ ಸೋಲುತ್ತಲೇ ಬಂದಿದ್ದು ಸಾಕಷ್ಟು ಮುಖ ಭಂಗ ಅನುಭವಿಸಿದೆ , ಈ ಕಾರಣಕ್ಕೆ ಈ ಬಾರಿ ಹಿಂದುಳಿದ ವರ್ಗದವರಿಗೆ ಅದರಲ್ಲೂ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಪ್ರಬಲ ನಾಯಕ ಹೆಚ್ ಎಸ್ ಸುಂದರೇಶ್ ಅವರಿಗೆ ಟಿಕೆಟ್ ಕೊಟ್ಟು ಮತ್ತೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು ಎಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ.
ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಸುಂದರೇಶ್ ಅವರಿಗೆ ಟಿಕೆಟ್ ನೀಡಬೇಕಿತ್ತು. ಏನಾದರು ಒಂದು ಕಾರಣವನ್ನು ಹೇಳಿ ಗೆಲ್ಲುವ ಶಕ್ತಿ ಇರುವಂತಹ ಸುಂದರೇಶ್ ಅವರಿಗೆ ಕಾಂಗ್ರೆಸ್ ಸಬೂಬು ಹೇಳಿ ಟಿಕೆಟ್ ವಂಚಿತರ ಸಾಲಿನಲ್ಲಿ ಕುರಿಸಿದೆ.ಕಳೆದ ವಿಧಾನಸಭಾ ಚುನಾವಣೆಯ ನಂತರದಲ್ಲಿ ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಸುಂದರೇಶ್ ಪ್ರಮುಖಪಾತ್ರ ವಹಿಸಿದ್ದಾರೆ. ಮಲೆನಾಡು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮವನ್ನು ಮಾಡವುದರ ಜೊತೆಗೆ ವಿರೋಧ ಪಕ್ಷಗಳ ವಿರುದ್ಧವಾಗಿ ಹೋರಾಟವನ್ನು ಮಾಡಿಕೊಂಡು ಬಂದಂತಹ ಸುಂದರೇಶ್ ಜಿಲ್ಲೆಯ ಯುವ ಸಮೂಹವನ್ನೆ ಬೆನ್ನಿಗಿಟ್ಟುಕೊಂಡು ಪಕ್ಷ ಸಂಘಟನೆಯ ಜೋತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲ ಪಕ್ಷವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.ಅದಕ್ಕೆ ಕಾರಣವು ಇದೆ ಸುಂದರೇಶ್ ತಮ್ಮ ವಿದ್ಯಾರ್ಥಿ ಜೀವನದಿಂದಲೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಂತವರು ಅದರಲ್ಲೂ ಪಕ್ಷ ಸಂಘಟಿಸುವುದರಲ್ಲಿ ಅವರ ಮುಂದೆ ಯಾವ ಕಾಂಗ್ರೆಸ್ ನಾಯಕನು ಇಲ್ಲ ಎಂದರೆ ತಪ್ಪಾಗಲಾರದು. ಸುಂದರೇಶ್ NSUIನ ಜಿಲ್ಲಾ ಅಧ್ಯಕ್ಷರಾಗಿ ನಂತರ ಯುವ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷರಾಗಿ ಕೆಪಿಸಿಸಿಯಲ್ಲು ಕೇಲವು ಹುದ್ದೆಗಳನ್ನು ನಿಭಾಯಿಸಿದ ಸುಂದರೇಶ್ ಕರ್ನಾಟಕವಲ್ಲದೆ ಕೇಲವು ರಾಜ್ಯಗಳ ಕ್ಷೇತ್ರಗಳಿಗೆ ವಿಕ್ಷಕರಾಗಿ ಪಕ್ಷಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬಿಜೆಪಿಯ ಪ್ರಬಲ ನಾಯಕರ ಎದುರು ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೇನು ಕಾಂಗ್ರೆಸ್ ಸರ್ವನಾಶದ ಹಾದಿಗೆ ತಲುಪಿದೆ ಎನ್ನುವ ಹೊತ್ತಿಗೆ ನರಸತ್ತು ಮಲಗಿದ್ದ ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲಾ ಅಧ್ಯಕ್ಷರಾಗಿ ಜವಬ್ದಾರಿ ಹೊತ್ತ ಸುಂದರೇಶ್ ಮತ್ತೆ ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ ಪಕ್ಷದಿಂದ ದೂರ ಉಳಿದಿದ್ದ ನಾಯಕರು ಮತ್ತು ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಕರೆ ತಂದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದ ಹಿರಿಮೆ ಸುಂದರೇಶ್ ಅವರದು. ಕಾಂಗ್ರೆಸ್ ಪಕ್ಷದ ಕಚೇರಿಗೆ ಬಾರದೆ ದೂರ ಉಳಿದಿದ್ದ ಕಾರ್ಯಕರ್ತರೆಲ್ಲ ಈಗ ಪಕ್ಷದ ಕಚೇರಿಯಲ್ಲಿ ಕಂಗೊಳಿಸುತ್ತಿದ್ದಾರೆ. ತಮ್ಮ ಪಕ್ಷದ ಸೇವೆ ಮತ್ತು ಕಾರ್ಯಗಳಿಂದ ಮತ್ತು ಎಲ್ಲರೊಂದಿಗೆ ಬೇರೆಯುವ ಕಾರಣದಿಂದ ಎಲ್ಲಾ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದಾರೆ.ಯಾವುದೇ ಒಂದು ಧರ್ಮಕ್ಕೆ ಸಮುದಾಯಕ್ಕೆ ಸೀಮಿತರಾಗದೆ ಎಲ್ಲಾ ವರ್ಗದ ಜನರ ಬೆಂಬಲ ಪಡೆಯುತ್ತಿರುವ ಸುಂದರೇಶ್ ಅವರ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಉತ್ತಮ ಅಭಿಪ್ರಾಯ ಇದೆ. ಈ ಕಾರಣಕ್ಕೆ ಹೆಚ್ ಎಸ್ ಸುಂದರೇಶ್ ಅವರಿಗೆ ಲೋಕಸಭಾ ಟಿಕೆಟ್ ಸಿಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಸುಂದರೇಶ್ ಅವರಿಗೆ ಹೈಕಮಾಂಡ್ ಮಟ್ಟದ ಉನ್ನತ ನಾಯಕರ ಜೊತೆ ಸಂಪರ್ಕ ಮತ್ತು ಉತ್ತಮ ಒಡನಾಟ ಇರುವುದರಿಂದ ಕಾಂಗ್ರೆಸ್ ಪಕ್ಷ ಈ ಬಾರಿ ಅವರಿಗೆ ಮಣೆ ಹಾಕುವ ಎಲ್ಲಾ ಸಾಧ್ಯತೆ ಇದ್ದು ಇದು ಸರಿಯಾದ ಆಯ್ಕೆಯು ಕೂಡ ಆಗಿರುತ್ತದೆ.
ಕಾಂಗ್ರೆಸ್ ಟಿಕೆಟ್ ರೇಸ್’ನಲ್ಲಿ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಸಚಿವ ಮಧು ಬಂಗಾರಪ್ಪ ನವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೆಸುರು ಕೇಳಿ ಬರುತ್ತಿದೆಯಾದರು ಪಕ್ಷ ನಿಷ್ಠೆಗೆ ಕಾಂಗ್ರೆಸ್ ಮಣೆ ಹಾಕುತ್ತದೆ ಎನ್ನುವುದು ಎಲ್ಲರ ವಾದವಾಗಿದೆ .ಇನ್ನೂ ಕೇಲವರ ಹೆಸರು ಅಲ್ಲಿ ಇಲ್ಲಿ ಕೇಳಿಬರುತ್ತಿದೆ. ಅದರೆ ಒಕ್ಕಲಿಗ ಸಮುದಾಯದ ಸಜ್ಜನ ರಾಜಕಾರಣಿ ಹೆಚ್ ಎಸ್ ಸುಂದರೇಶ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ಗೆಲ್ಲುವ ಅವಕಾಶ ಇದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವರಿಷ್ಠರು ಸರಿಯಾದ ತೀರ್ಮಾನವನ್ನು ಮಾಡುವುದು ಸೂಕ್ತವಾಗಿದೆ.
ಸುಂದರೇಶ್ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರೆ ಗೆಲ್ಲುವ ಅವಕಾಶ ಸಾಕಷ್ಟು ಇತ್ತು. ಟಿಕೆಟ್ ಸಿಗುವ ಎಲ್ಲಾ ಅರ್ಹತೆ ಅವಕಾಶ ಇದ್ದರು ಮತ್ತೆ ವಂಚಿತರ ಸಾಲಿನಲ್ಲಿ ಕೂರಬೇಕಾಯ್ತು ಸುಂದರೇಶ್. ತನಗೆ ಟಿಕೆಟ್ ಸಿಗದಿದ್ದರು ಕ್ಷೇತ್ರ ಮತ್ತು ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಪಕ್ಷವನ್ನು ಬಲಪಡಿಸುವಲ್ಲಿಯು ನಿರಂತರ ಹೋರಾಟ ಮಾಡುತ್ತಿರುವ ಸುಂದರೇಶ್ ಕಾಂಗ್ರೆಸ್’ನಿಂದ ದೂರವಾಗಿ ಬಿಜೆಪಿಗೆ ಬೆಂಬಲಿಸುತ್ತಿರುವ ಬಹುಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳ ಜೋತೆಗೆ ಮುಸ್ಲಿಂ ಹಾಗೂ ಎಲ್ಲಾ ವರ್ಗದ ಮತಗಳನ್ನು ಮರಳಿ ಕಾಂಗ್ರೆಸ್ ಕಡೆಗೆ ಸೆಳೆಯಲು ಹೆಚ್ ಎಸ್ ಸುಂದರೇಶ್ ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯಗಳು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿದೆ.
ಇನ್ನೊಂದೆಡೆ ಈ ಬಾರಿ ಹೊಸ ಮುಖಗಳಿಗೆ ಅದರಲ್ಲೂ ಪಕ್ಷ ನಿಷ್ಠೆ ಇರುವಂತಹ ನಾಯಕರಿಗೆ ಮಣೆ ಹಾಕಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಸುಂದರೇಶ್ ಮಲೆನಾಡು ಭಾಗದ ಪ್ರಬಲ ಮತ್ತು ಅನುಭವಿ ರಾಜಕಾರಣಿಯಾಗಿದ್ದು ಕಳೆದ ಮೂವತ್ತೈದು ವರ್ಷದಿಂದ ಪಕ್ಷ ವಹಿಸಿಕೊಟ್ಟ ಜವಾಬ್ದಾರಿಯನ್ನು ಮೆಚ್ಚುವಂತೆ ಮಾಡಿದ ಹಿರಿಮೆ ಇವರದು. ಹಾಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದು ಇವರ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮೂರು ಸ್ಥಾನವನ್ನು ಗೆಲ್ಲಿಸಿಕೊಂಡು ಬಂದ ಹಿರಿಮೆ ಇವರದು. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ, ಬ್ಲಾಕ್ ಮಟ್ಟದಲ್ಲಿ ಸುಂದರೇಶ್ ಅವರ ಬೆಂಬಲಿಗರಿದ್ದು, ಅವರ ಜೋತೆಗೆ ನಿರಂತರ ಸಂಪರ್ಕದಲ್ಲಿದ್ದು ಪಕ್ಷವನ್ನು ಬೆಳಸಲು ಸದೃಡಗೊಳಿಸಲು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ.
ಕಳೆದ ಎರಡು ದಶಕಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಆಗಿರುವುದರಿಂದ ಕಾಂಗ್ರೆಸ್ ಪಕ್ಷದ ಗೆಲುವು ಸುಲಭದ ಮಾತಲ್ಲ. ಒಟ್ಟಿನಲ್ಲಿ ಟಿಕೆಟ್ ಪಡೆಯಲು ತುಸು ಬಿರುಸಿನ ಪೈಪೋಟಿ ಇದ್ದರು. ಸುಂದರೇಶ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.ಇವರನ್ನೆ ಮಾಡಿ ಎನ್ನುವ ಆಗ್ರಹಗಳು ಕೇಳಿಬರುತ್ತಿದೆ.
ಒಂದಷ್ಟು ಲೆಕ್ಕಾಚಾರಗಳು ಓಡಾಡಲು ಆರಂಭಿಸಿವೆ. ಈ ಬಾರಿ ಪಕ್ಷದ ನಿಷ್ಠಾವಂತ ನಾಯಕ ಸುಂದರೇಶ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹಕ್ಕೆ ಹೈಕಮಾಂಡ್ ಮನ್ನಣೆ ನೀಡಿದರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಎಲ್ಲಾ ಸಾಧ್ಯತೆ ಸುಂದರೇಶ್ ಅವರಿಗೆ ಇದೆ.
ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿ ಯಾರೆಂಬ ತೀರ್ಮಾನ ತೆಗೆದುಕೊಳ್ಳಲಿದೆ. ಹೆಚ್ ಎಸ್ ಸುಂದರೇಶ್ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ ಎನ್ನಲಾಗುತ್ತಿದೆ.
ಸುಧೀರ್ ವಿಧಾತ , ಶಿವಮೊಗ್ಗ