ರೋಹಿತ್ ಶರ್ಮಾ ಫೈನಲ್ ಪಂದ್ಯದಲ್ಲಿ ಇಂಥಾ ನಿರ್ಧಾರ ತೆಗೆದುಕೊಳ್ಳಬಾರದಿತ್ತು!? ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್.
News.Ashwasurya.in
ಭಾರತದಲ್ಲಿ ಐಸಿಸಿ ವಿಶ್ವಕಪ್ 2023ರ ಅಂತಿಮ ಪಂದ್ಯವು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದು. ಈ ಟೂರ್ನಿಯಲ್ಲಿ ಎಲ್ಲಾ ಹತ್ತು ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದ ಭಾರತ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಡಲು ಅವಕಾಶ ಪಡೆದ ಭಾರತೀಯರು ಬ್ಯಾಟಿಂಗ್ ನಲ್ಲಿ ಆಸ್ಟ್ರೇಲಿಯಾ ಬೌಲರುಗಳ ದಾಳಿಗೆ ತತ್ತರಿಸಿ ಹೋಗಿ ಎದುರಾಳಿ ತಂಡದ ಗೆಲುವಿಗೆ ಕೇವಲ 241 ರನ್ನುಗಳ ಗುರಿ ನೀಡಲು ಶಕ್ತವಾಯಿತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಹೋಯಿತು ಭಾರತ. ಈ ಒಂದು ಫೈನಲ್ ಪಂದ್ಯದ ಭಾರತೀಯರ ಬ್ಯಾಟಿಂಗ್ ಬಗ್ಗೆ ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾದ ಭಾರತದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಭಾರತ ತಂಡದ ಬ್ಯಾಟಿಂಗ್ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿದ್ದೇನು?
ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಡಿಮೆ ಸ್ಕೋರಿನ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾದ ನಿಯಮಿತವಲ್ಲದ ಬೌಲರ್’ಗಳ ಮೇಲೆ ದಾಳಿ ಮಾಡಲು ರೋಹಿತ್ ಮತ್ತು ಅವರ ತಂಡ ಸಂಪೂರ್ಣ ವಿಫಲವಾಗಿದೆ” ಎಂದು ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಅವರ ಜೊತೆಗೆ ಮಾತನಾಡಿದ ಅವರು, “ರೋಹಿತ್ ಶರ್ಮಾ ಈ ರೀತಿಯ ತಪ್ಪು ಶಾಟ್ ( ಕಾಫ ಬುಕ್ ಸ್ಟೈಲ್) ಹೊಡೆದು ಔಟಾಗುವುದು ಎದುರಾಳಿಗೆ ಒಂದು ಮಹತ್ವದ ತಿರುವು ಸಿಕ್ಕಂತೆ. ರೋಹಿತ್ ಶರ್ಮಾ ತುಂಬಾ ಚೆನ್ನಾಗಿ ಆಡುತ್ತಿದ್ದರು ಅ ಪಿಚ್ಚಿಗೆ ಹೊಂದಿಕೊಳ್ಳಲು ಲಯ ಕೂಡ ಸಿಕ್ಕಿತ್ತು ಅವರು ಔಟಾದ ಓವರ್‌ನಲ್ಲಿ ಅದಾಗಲೇ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ 10 ರನ್ ಬಂದಿತ್ತು. ಬಹುಶಃ ಮುಂದಿನ ಎಸೆತಕ್ಕೆ ಆ ರೀತಿ ಬ್ಯಾಟಿಂಗ್ ಬಿಸಬಾರದಿತ್ತು” ಎಂದರು.
“ಅವರು ಅದನ್ನು ಕನೆಕ್ಟ್ ಮಾಡಿ ಸಿಕ್ಸರ್ ಬಾರಿಸಿದ್ದರೆ ನಾವೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತ್ತಿದ್ದೆವು. ಭಾರತ ತಂಡದ ಸ್ಕೋರ್ 260 ರನ್’ಗಳಿಗಿಂತ ಹೆಚ್ಚಿರಬೇಕಿತ್ತು. ಆದರೆ ಕೇವಲ 241 ರನ್’ಗಳಾಗಿ ಉಳಿಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು ಅದರಲ್ಲೂ ಟೂರ್ನಿಯಲ್ಲಿ ಆಡಿದ ಅಷ್ಟು ಹತ್ತು ಪಂದ್ಯಗಳನ್ನು ಗೆದ್ದು ಬಿಗಿದ್ದ ಭಾರತ ಆಸ್ಟ್ರೇಲಿಯಾ ಎದುರು ತವರು ನೆಲದಲ್ಲೆ ಮಂಡಿ ಉರಿದ್ದು ಮಾತ್ರ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನು ನಿರಾಸೆಗೆ ದೂಡಿತ್ತು
ಸುಧೀರ್ ವಿಧಾತ , ಶಿವಮೊಗ್ಗ