ಪ್ರೀತಿಸಿದವಳ ಕತ್ತನ್ನೆ ಕೊಯ್ದು ಕೊಲೆಮಾಡಿದ ಕಿರಾತಕ ಪ್ರೇಮಿ!! ಇದು ಪ್ರೀತಿಯೊ? ಪ್ರೇಮ ಮತ್ಸರವೊ?

ಪ್ರೀತಿಸಿದವಳ ಕತ್ತನ್ನೆ ಕೊಯ್ದ ಕೊಲೆಮಾಡಿದ ಕಿರಾತಕ ಪ್ರೇಮಿ!! ಇದು ಪ್ರೀತಿಯೊ ಪ್ರೇಮ ಮತ್ಸರವೊ?

news.Ashwasurya.in

voice of common man in words

ಓದೋಕೆ ಅಂತ ಹೆತ್ತವರು ಮಕ್ಕಳನ್ನು ಕಳಿಸಿದ್ರೆ ಪ್ರೀತಿ ಪ್ರೇಮ ಅಂತ ಎಲ್ಲೆಂದರಲ್ಲಿ ಸುತ್ತಾಡಿದ್ರು ಅದೇಕೊ ಪ್ರೀತಿ ಅಂತ ಸುತ್ತಿದ ಹುಡುಗಿಗೆ ದೀಡಿರ್ ಜ್ಞಾನೋದಯವಾಗಿದೆ ಈಗ ಪ್ರೀತಿ ಬೇಡ ನಾನು ಓದಬೇಕು ಎಂದವಳನ್ನು ಆಕೆಯ ಮಾಜಿ ಪ್ರೀಯತಮ ಮಾತನಾಡಬೇಕು ಎಂದು ಕುಂತಿ ಬೆಟ್ಟಕ್ಕೆ ಕರೆದುಕೊಂಡು ಹೋದವನು ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಹಾಸನದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಇಬ್ಬರು ಪ್ರೇಮಿಗಳು ಇಂಜಿನಿಯರಿಂಗ್‌ ಓದುತ್ತಿದ್ದರು. ಓದುವಾಗಲೇ ಪ್ರೀತಿಗೆ ಜಾರಿದ ಜೋಡಿ ಸಾಕಷ್ಟು ಸುತ್ತಾಡಿ ಪ್ರೀತಿಯ ಕಿಕ್ಕ್ ಏರಿಸಿಕೊಂಡಿದ್ದಾರೆ ಅವನಿಲ್ಲದೆ ಇವಳಿಲ್ಲ. ಇವಳಿಲ್ಲದೆ ಅವನಿಲ್ಲ ಎನ್ನುವ ಮಟ್ಟಕ್ಕೆ ಚಿಗುತುಕೊಂಡಿತ್ತು ಇಬ್ಬರ ಪ್ರೀತಿ. ಅದು ಯಾರ ದೃಷ್ಟಿ ಬಿತ್ತೊ ಗೊತ್ತಿಲ್ಲ! ಪ್ರೀತಿಸಿದವನೆ ತನ್ನ ಪ್ರೇಯಸಿಯನ್ನು ಸಮೀಪದ ಕುಂತಿಬೆಟ್ಟಕ್ಕೆ ಕರೆದೊಯ್ದು ಕುತ್ತಿಗೆ ಸಿಳಿ ಬರ್ಬರವಾಗಿ ಕೊಲೆ ಮಾಡಿರುವ ರ್ಘಟನೆಯೊಂದು ಹಾಸನದಲ್ಲಿ ನಡೆದು ಹೋಗಿದೆ.
ಪ್ರೀತಿಸಿದ ಯುವಕನೇ ಪ್ರೇಯಸಿಯನ್ನು ಕೊಂದು ಜೈಲು ಸೇರಿದ್ದಾನೆ.

ಹಾಸನದ ಅಗಿಲೆ ಬಳಿಯ ಕುಂತಿಬೆಟ್ಟದಲ್ಲಿ ಈ ಒಂದು ಪ್ರಕರಣ ನಡೆದಿದೆ.ಪ್ರೀಯತಮನಿಂದ ಕೊಲೆಯಾದ ಯುವತಿ ಇಪ್ಪತ್ತೊಂದು ವರ್ಷ ವಯಸ್ಸಿನ ಸುಚಿತ್ರಾ ಈಕೆಯ ಪ್ರೀಯತಮ ತೇಜಸ್ ಕೊಲೆ ಮಾಡಿದ ಪ್ರಿಯಕರನಾಗಿದ್ದಾನೆ. ಈ ಇಬ್ಬರೂ ಹಾಸನ ಸಮೀಪದ ಮೊಸಳೆ ಹೊಸಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಇಬ್ಬರ ನಡುವೆ ಮೊದ ಮೊದಲು ಎಲ್ಲವೂ ಚನ್ನಾಗಿಯೆ ಇತ್ತು ಆದರೆ ಅದೇಕೊ ಲವ್ ಬ್ರೇಕಪ್ ಆಗಿದೆ ಎಂದು ತಿಳಿದುಬಂದಿದೆ. ಹುಡುಗನಿಗೆ ಇಷ್ಟವಿದ್ದರು ಹುಡುಗಿ ಬೇಡ ಎನ್ನುತ್ತಿದ್ದಳಂತೆ ನಾನು ಓದಬೇಕು ನನ್ನನ್ನು ಮರೆತು ಬಿಡು ಅಂದಿರಲು ಸಾಧ್ಯ. ಇದಕ್ಕೆ ಮನನೊಂದ ಹುಡುಗ ಕೊನೆಯದಾಗಿ ನಿನ್ನೊಂದಿಗೆ ಮಾತನಾಡಬೇಕು ಎಂದು ಆಕೆಯನ್ನು ಹತ್ತಿರದಲ್ಲಿಯೇ ಇರುವ ಕುಂತಿ ಬೆಟ್ಟಕ್ಕೆ ಖುಷಿಯಿಂದಲೆ ಕರೆದುಕೊಂಡು ಹೋಗಿದ್ದಾನೆ.ಆಕೆಯು ನಂಬಿ ಹೋಗಿದ್ದಾಳೆ. ಅದರೆ ಬೆಟ್ಟದಲ್ಲಿ ನೆಡೆದಿದ್ದೆ ಬೇರೆ. ಮೊದಲೇ ಸಿದ್ಧನಾಗಿ ಬಂದಿದ್ದ ಪ್ರೀಯಕರ ತಕ್ಷಣವೇ ಆಕೆಯ ಮೇಲೆ ಅಟ್ಯಾಕ್ ಮಾಡಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಬಿಟ್ಟಿದ್ದಾನೆ.
ಸಾಕಷ್ಟು ಕನಸುಹೊತ್ತ ಹುಡುಗಿಯೊಬ್ಬಳು ಹಂತಕ ಪ್ರೇಮಿಯ ಇರಿತಕ್ಕೆ ಉಸಿರು ಚಲ್ಲಿದ್ದಾಳೆ. ಕೊಲೆಯಾದ ಹುಡುಗಿ ಸುಚಿತ್ರಾ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಗಿದ್ದಳು. ಇನ್ನೂ ಹತ್ಯೆಮಾಡಿದ ಆರೋಪಿ ತೇಜಸ್‌ ಕೊಲೆಯಾದ ಸುಚಿತ್ರಾಳಿಗಿಂತ ಸೀನಿಯರ್‌ ಬ್ಯಾಚ್‌ ಆಗಿದ್ದು ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ. ಮೊದ ಮೊದಲು ಪ್ರೀತಿಯನ್ನು ಒಪ್ಪಿಕೊಂಡಿದ್ದ ಸುಚಿತ್ರಾ ನಂತರ ಓದುವ ಸಲುವಾಗಿ ಪ್ರೀಯತಮ‌ ತೇಜಸ್ ನಿಂದ ದೂರವಿದ್ದಳಂತೆ!! ನಿನ್ನನ್ನು ಪ್ರೀತಿಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಳಂತೆ ಸುಚಿತ್ರಾ ಜೋತೆಗೆ ತೇಜಸ್ ನಿಂದ ಅಂತರವನ್ನು ಕಾಯ್ದು ಕೊಂಡಿದ್ದಳಂತೆ. ಹೀಗಾಗಿ ರೊಚ್ಚಿಗೆದ್ದ ಪಾಗಲ್ ಪ್ರೇಮಿ ಪ್ರೇಮ ವೈಫಲ್ಯದಿಂದ ಸಿಟ್ಟಿಗೆದ್ದು ಪ್ರಿಯತಮೆ ಸುಚಿತ್ರಾಳನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಮೂಲತಃ ಹಾಸನ ತಾಲ್ಲೂಕಿನ ಶಂಕರನಹಳ್ಳಿಯವನಾದ ತೇಜಸ್, ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈಗಾಗಲೇ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾನೆ. ಇನ್ನೂ ತಾನು ಓದಿದ ಕಾಲೇಜಿನಲ್ಲೆ ಜೂನಿಯರ್‌ ವಿದ್ಯಾರ್ಥಿನಿಯಾಗಿದ್ದ ಸುಚಿತ್ರಾ ಪ್ರೀತಿಸಿ ನಂತರ ಪ್ರೀತಿಸಲು ನಿರಾಕರಿಸಿದ್ದಕ್ಕೆ ಭಗ್ನ ಪ್ರೇಮಿ ತೇಜಸ್ ಅಗಿಲೆ ಬಳಿಯ ಕುಂತಿ ಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.!! 

ಸುಚಿತ್ರಾಳನ್ನು ಶುಕ್ರವಾರ ಮುಂಜಾನೆ ಕುಂತಿ ಬೆಟ್ಟಕ್ಕೆ ಕರೆದೊಯ್ದಿದ್ದ ತೇಜಸ್ ಅಲ್ಲಿ ಆಕೆಯನ್ನು ಕೊಲೆಗೈದು ತಿರುಗಿ ಬಂದಿದ್ದಾನೆ. ಬೆಟ್ಟಕ್ಕೆ ಹೋದ ಕೆಲವು ಮಂದಿ ರಕ್ತದ ಮಡುವಿನಲ್ಲಿ ಬಿದ್ದ ಯುವತಿಯ ಮೃತದೇಹವನ್ನು ನೋಡಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ತಕ್ಷಣವೇ ಯುವತಿಯ ಸಂಪೂರ್ಣ ಮಾಹಿತಿ ಕಲೆಹಾಕಿದಾಗ ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಎಂಬುದು ಗೊತ್ತಾಗಿದೆ. ನಂತರ ಕಾಲೇಜಿನಲ್ಲಿ ಆಕೆಯ ಸ್ನೇಹಿತರನ್ನು ವಿಚಾರಿಸಿದಾಗ ಬೆಳಿಗ್ಗೆಯೆ ತೇಜಸ್‌ ಎನ್ನುವ ಹುಡುಗ ಕರೆದುಕೊಂಡು ಹೋಗಿದ್ದನ್ನು ನೋಡಿರುವುದಾಗಿ ಮಾಹಿತಿ ನೀಡಿದ್ದಾರೆ. ಪೋಲಿಸರಿಗೆ ಆತನೆ ಹಂತಕ ಏನ್ನುವುದು ದೃಡವಾಗಿದೆ. ಕೂಡಲೇ ಆತನ ಮೊಬೈಲ್‌ ನಂಬರ್‌ ಟ್ರೇಸ್‌ ಮಾಡಿ ಆತನ ಇರುವಿಕೆಯನ್ನು ತಿಳಿದುಕೊಂಡು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತೇಜಸ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!