ರಾಜ್ಯ ಬಿಜೆಪಿಯ ನೂತನ ಸಾರಥಿ ಬಿ.ವೈ.ವಿಜಯೇಂದ್ರ
ರಾಜ್ಯ ಬಿಜೆಪಿ ಪಕ್ಷದ ಸಾರಥಿ ವಿಜಯೇಂದ್ರ! ಶಿವಮೊಗ್ಗ ಜಿಲ್ಲೆಗೆ ಮೂರನೇ ಬಾರಿಗೆ ಒಲಿದು ಬಂದ ರಾಜ್ಯ BJP ಅಧ್ಯಕ್ಷ ಸ್ಥಾನ
ಬಿ.ವೈ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ಬಿಜೆಪಿಯ ವರಿಷ್ಠರು ನೇಮಕ ಮಾಡಿದ್ದಾರೆ.
ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನದ ಗದ್ದುಗೆ ಮೂರನೇ ಬಾರಿಗೆ ಒಲಿದಿದೆ ಬಿ.ವೈ.ವಿಜಯೇಂದ್ರ ಮೂಲಕ ಶಿವಮೊಗ್ಗ ಜಿಲ್ಲೆಗೆ ಮೂರನೇ ಬಾರಿಗೆ ಒಲಿದಿರುವುದು ಶಿವಮೊಗ್ಗ ಜಿಲ್ಲಾ ಬಿಜೆಪಿ ವಲಯದಲ್ಲಿ ಸಂತಸ ತುಂಬಿದೆ.
ಈ ಮೊದಲು ಬಿ.ಎಸ್. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ರಾಜ್ಯಾಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದ ಶಿವಮೊಗ್ಗ ಜಿಲ್ಲೆಯ ನಾಯಕರು ಈಗ ಅತ್ಯಂತ ಕಿರಿಯ ವಯಸ್ಸಿನ ಯುವ ಪ್ರಬಲ ನಾಯಕರಾದ ಬಿ. ವೈ.ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನದ ಜವಬ್ದಾರಿ ಹೆಗಲ ಮೇಲಿದೆ. ಕಳೆದ
ಮೂರುನಾಲ್ಕು ವರ್ಷಗಳ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಬಿ.ವೈ.ವಿಜಯೇಂದ್ರ ಶಿರಾ ಹಾಗೂ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ತಮ್ಮ ಸಂಘಟನಾ ಶಕ್ತಿಯಿಂದಲೆ ಜೆಡಿಎಸ್-ಕಾಂಗ್ರೆಸ್ಸಿನ ಭದ್ರಕೋಟೆಯಲ್ಲೆ ಬಿಜೆಪಿಗೆ ಗೆಲುವು ತಂದು ಯಡಿಯೂರಪ್ಪನವರಿಗೆ ತಕ್ಕ ಮಗನಾಗಿ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದರು.
ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ..!ಮತ್ತೆ ಕರ್ನಾಟಕದಲ್ಲಿ ಕಮಲ ಅರಳೊತ್ತ?
ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಬಿಜೆಪಿಯ ಹೈ ಕಮಾಂಡ್ ಆದೇಶ ಹೊರಡಿಸಿದೆ ಈ ಸ್ಥಾನಕ್ಕೆ ಸಾಲು ಸಾಲು ಹೆಸರುಗಳು ಕೇಳಿಬಂದಿದ್ದರು ಅಂತಿಮವಾಗಿ ವರಿಷ್ಠರು ರಾಜ್ಯಾಧ್ಯಕ್ಷನ ಜವಾಬ್ದಾರಿಗಳನ್ನು ಯಡಿಯೂರಪ್ಪ ನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಗಲಿಗೆ ಹೊರಿಸಿದ್ದಾರೆ.ಯಡಿಯೂರಪ್ಪ ನವರು ರಾಜಕಾರಣದಿಂದ ದೂರ ಉಳಿದಿದ್ದರೂ ಸಹ ತಮ್ಮ ಪುತ್ರನನ್ನು ಅಂದುಕೊಂಡಂತೆ ರಾಜ್ಯ ಕಮಲ ಪಾಳಯದ ಸಾರಥಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ರಾಜಾ ಹುಲಿಯ ತಾಕತ್ತು ಎನ್ನುವುದನ್ನು ಮೊತ್ತಮ್ಮೆ ಹೇಳಬೇಕಾಗಿಲ್ಲ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನವರನ್ನು ಬಿಜೆಪಿ ದೂರವಿಟ್ಟು ಹೀನಾಯವಾಗಿ ಸೋತು ಮನೆ ದಾರಿ ಹಿಡಿಯುವಂತಾಗಿತ್ತು.ಪ್ರಮುಖವಾಗಿ ಬಿಜೆಪಿಯ ಸಾಕಷ್ಟು ಹಿರಿಯ ನಾಯಕರನ್ನು ದೂರವಿಟ್ಟಿದ್ದು ಬಿಜೆಪಿ ಸೋಲಿಗೆ ಕಾರಣವಾಗಿತ್ತು. ಪಕ್ಷದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಸವದಿ ʼಕೈʼ ಸೇರಿ ಬಿಜೆಪಿ ವಿರುದ್ಧವೇ ತೋಡೆತಟ್ಟಿದ್ದರು. ಪಕ್ಷದ ಸೋಲಿನ ಹೊಣೆ ಹೊತ್ತ ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ್ದರು ಜೋತೆಗೆ ಅವರ ಅವಧಿಯು ಮುಗಿದಿತ್ತು. ಬಳಿಕ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಬಿದ್ದಿತ್ತು. ಇದೇ ವಿಚಾರವಾಗಿ ಕಾಂಗ್ರೆಸ್ ಕಮಲಪಾಳಯದ ವಿರುದ್ಧ ಆಗಾಗ ವ್ಯಂಗ್ಯವಾಗಿ ಮಾತಾಡುವಂತಾಗಿತ್ತು.
ಈಗ ಬಿಜೆಪಿಯ ವರಿಷ್ಠರ ತಿರ್ಮಾನದಂತೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋಲಿನ ಕಹಿ ಉಂಡ ಬಿಜೆಪಿಗೆ ಮುಂದಿನ ದಿನಗಳಲ್ಲಿ ಗೆಲುವಿನ ಸಿಹಿ ಸಿಗಬಹುದೆ? ಅಧ್ಯಕ್ಷರಾಗಿರುವ ವಿಜಯೇಂದ್ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುವಂತೆ ಮಾಡುವ ಬಹು ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ ಸಿಹಿನೊ ಕಹಿನೊ ಕಾದು ನೋಡಬೇಕಿದೆ.
ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದರೂ ಸಹ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಅವರ ತಾಕತ್ತನ್ನು ಅರಿತುಕೊಂಡ ಬಿಜೆಪಿ ಹೈಕಮಾಂಡ್ ಅವರ ಪುತ್ರನಿಗೆ ಮಣೆ ಹಾಕಿದೆ. ರಾಜ್ಯ ರಾಜಕೀಯದಲ್ಲಿ ಲಿಂಗಾಯತ ಪ್ರಬಲ ನಾಯಕರೆಂದರೆ ಬಿಎಸ್ ಯಡಿಯೂರಪ್ಪ ಅನ್ನುವುದು ಕೊನೆಗೂ ಬಿಜೆಪಿ ವರಿಷ್ಠರಿಗೆ ಅರ್ಥವಾದಂತಿದೆ.
ಇದನ್ನು ಅರಿತ ಬಿಜೆಪಿ ವರಿಷ್ಠರು ಅಳೆದು ತೂಗಿ ಕೊನೆಗೂ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿಯ ನೂತನ ಸಾರಥಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಮತ ಬ್ಯಾಂಕಿನತ್ತ ಗಮನಹರಿಸಿದೆ ಬಿಜೆಪಿ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಸ್ಥಾನಕ್ಕೆ ಈ ಮೊದಲು ಸಾಲು ಸಾಲು ಹೆಸರು ಕೇಳಿ ಬಂದಿತ್ತು. ಆದರೆ ಎಲ್ಲವನ್ನೂ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಬಿಜೆಪಿ ವರಿಷ್ಠರು ಅಂತಿಮವಾಗಿ ಬಿಎಸ್‌ವೈ ಪುತ್ರರಾದ ಬಿ.ವೈ.ವಿಜಯೇಂದ್ರ ಮಣೆ ಹಾಕಿದೆ ಇನ್ನೂ ಕರ್ನಾಟಕದ ಪ್ರಬಲ ಹಿರಿಯ ಪಕ್ಷದ ನಾಯಕರಲ್ಲಿ ಯಾವ ರೀತಿಯ ಭಾವನೆ ಮೂಡಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಸುದೀರ್ ವಿಧಾತ ,ಶಿವಮೊಗ್ಗ
94831659999