ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರ ಜೋತೆ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್
ಷಡಾಕ್ಷರಿ ಅವರು ಮೊದಲು ಸರ್ಕಾರಿ ಆದೇಶವನ್ನು ಪಾಲಿಸಲಿ-ಕಾಂಗ್ರೆಸ್ ಜಿಲ್ಲಾ ಅದ್ಯಕ್ಷ ಹೆಚ್ ಎಸ್ ಸುಂದರೇಶ್
ಶಿವಮೊಗ್ಗ
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಸರ್ಕಾರಿ ಆದೇಶದಂತೆ ವರ್ಗಾವಣೆ ಆದರೂ ಅದನ್ನು ಕಡೆಗಣಿಸಿ ಶಿವಮೊಗ್ಗದಲ್ಲೆ ಇರುವುದು ಖಂಡನೀಯ. ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಕಾಂಗ್ರೆಸ್ ಬೀದಿಗಿಳಿದು ಅದರ ವಿರುದ್ಧ ಪ್ರತಿಭಟಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಇಂದು ಸುದ್ದಿ ಗೋಷ್ಟಿಯಲ್ಲಿ ಎಚ್ಚರಿಸಿದರು. .
ಅವರು ಮಾದ್ಯಮದವರ ಮುಂದೆ ಮಾತನಾಡಿ ಸರ್ಕಾರದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಲ್ಲಿಗೆ ವರ್ಗಾವಣೆ ಆಗಿದೆಯೋ ಅಲ್ಲಿಗೆ ಹೋಗಿ ಕೆಲಸಮಾಡಿ ಎಂದು ತಾಕೀತು ಮಾಡಿದರು.
ಅವರು ವರ್ಗಾವಣೆಗೆ ಸಂಭಂದಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮಾತನಾಡಿರುವುದು ತಿಳಿದುಬಂದಿದೆ. ಅವರ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿದೆ ಅದನ್ನು ಕೆಣಕುವುದು ಬೇಡ. ಸರ್ಕಾರದ ನಿರ್ಧಾರದಂತೆ ವರ್ಗಾವಣೆ ಆಗಿ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಬರ ಪರಿಹಾರಕ್ಕೆ ಸಂಭಂದಿಸಿದಂತೆ ರಾಜ್ಯ ಸರ್ಕಾರ 34 ಸಾವಿರ ಕೋಟಿ ಬೆಳೆ ಹಾನಿ ಎಂದಿದೆ ಇದು ಇನ್ನೂ ಹೆಚ್ಚಿಗೆ ಆಗುವನಿರೀಕ್ಷೆ ಇದೆ. ಕೇಂದ್ರ ಬಳಿ 17 ಸಾವಿರ ಕೋಟಿ ರೂ ಹಣ ನಮ್ಮ ಸರ್ಕಾರ ಕೇಳಿದೆ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50/50 ಅನುಪಾತದಲ್ಲಿ ಕೆಲಸ ಆಗಬೇಕಿದೆ. ಆದರೆ ಕೇಂದ್ರ ಇದುವರೆಗೂ ಒಂದು ರೂಪಾಯಿ ಕೂಡ ನೀಡಿಲ್ಲ. ರಾಜ್ಯದಲ್ಲಿರುವ ಎಲ್ಲಾ ಸಂಸದರು ಕೇಂದ್ರ ಸರ್ಕಾರದೊಂದಿಗೆ ಮಾತನಾಡುವಂತೆ ಆಗ್ರಹಿಸಿದರು.
ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ಕೇಂದ್ರದ ಬಳಿಹೋಗಿ ಪ್ರಸ್ತಾವನೆ ಸಲ್ಲಿಸಿ ಬಂದಿದ್ದಾರೆ ಒಂದು ತಿಂಗಳು ಕಳೆದಿದೆ. ಆದರೆ ಒಂದು ರೂಪಾಯಿ ಕೂಡ. ಬಂದಿಲ್ಲ. ಜಲ ಜೀವನ್ ಮಿಷನ್ ಯೋಜನೆಗೆ ರಾಜ್ಯಕ್ಕೆ 15 ಸಾವಿರ ಕೋಟಿ ವ್ಯಯಮಾಡಿದೆ. ಆದರೆ ಒಂದು ಮನೆಯಲ್ಲೂ ನೀರು ಬರುತ್ತಿಲ್ಲ. ಪ್ರತಿ ಮನೆಗಳಿಗೂ ಪೈಪ್ ಲೈನ್ ಹಾಕಲಾಗಿದೆ ಆದರೆ ಪೈಪಿನಲ್ಲಿ ಒಂದು ಹನಿ ನೀರು ಮಾತ್ರ ಬರುತ್ತಿಲ್ಲ. ಇದನ್ನೂ ತನಿಖೆ ಮಾಡಿಸಲು ಸರ್ಕಾರ ಮುಂದಾಗಿದೆ ಎಂದರು.
ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರದು ಕುಟುಂಬ ರಾಜಕಾರಣ ಎಂದು ಹೇಳಿಕೊಂಡು ಬೊಗಳೆ ಬಿಡುತ್ತಿದ್ದ ಬಿಜೆಪಿಯದು ಈಗ ಏನು. ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ಬಿಜೆಪಿ ವಿಜೇಂದ್ರರಿಗೆ ರಾಜ್ಯಾಧ್ಯಕ್ಷನ ಪಟ್ಟಾಭಿಷೇಕ ಮಾಡಿದೆ.
ಕೆಲವು ಮುಖಂಡರು ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬೆಂಗಳೂರಿಗೆ ಹೋಗಿದ್ದಾರೆ. ಪಕ್ಷ ಎಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯವಿರುತ್ತದೆ. ಬಿಜೆಪಿಯಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪ ನವರ ನಡುವೆಯೂ ಭಿನ್ನಾಭಿಪ್ರಾಯವಿತ್ತು ಹಾಗೆ ಎಲ್ಲಾ ಪಕ್ಷಗಳಲ್ಲು ಇರುತ್ತೆ ಎಲ್ಲವನ್ನೂ ಕುಳಿತು ಸರಿಪಡಿಸಿಕೊಳ್ಳಲಾಗುವುದು ಎಂದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್
ಇನ್ನೂ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಯಾನುರು ಮಂಜುನಾಥ್
ಇನ್ನೂ ಸುದ್ಧಿ ಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಮಾತನಾಡಿ ಷಡಾಕ್ಷರಿ ತಮ್ಮ ವರ್ಗಾವಣೆಯನ್ನು ಸೇಡಿನ ವರ್ಗಾವಣೆ ಎಂದಿದ್ದಾರೆ ಅದು ಸರಿಯಲ್ಲ. ರಾಜ್ಯಾಧ್ಯಕ್ಷರ ವರ್ಗಾವಣೆ ಆಗಿಲ್ಲ ಅಗಿರುವುದು ಒಬ್ಬ ಸರ್ಕಾರಿ ನೌಕರನ ವರ್ಗಾವಣೆ. ಇನ್ನೂ ಇವರ ಬಗ್ಗೆ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚೆಗೆ ಬಂದಿದೆ ತಪ್ಪಾಗಿದೆ ಎನ್ನುವುದು ವರದಿ ಇದೆ. ಅದರಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಷಡಾಕ್ಷರಿಯವರೆ ತನಿಖೆಯನ್ನು ಸ್ವಾಗತಿಸಿದ್ದಾರೆ ಎಂದರು.
ಸಚಿವರಾಗಿರವ ಮಧು ಬಂಗಾರಪ್ಪ ಅವರಿಗೆ ಸರ್ಕಾರಿ ನೌಕರರ ಬಗ್ಗೆ ಕಾಳಜಿ ಇದೆ. ಒಪಿಎಸ್ ತರಲು ಹೇಳಿದ ಮೊಟ್ಟ ಮೊದಲ ನಾಯಕ ಮಧು ಬಂಗಾರಪ್ಪನವರು. ಸರ್ಕಾರಿ ನೌಕರನ ವಿರುದ್ಧ ಆಪಾದನೆ ಬಂದಾಗ ತನಿಖೆಗೆ ಅನುಕೂಲವಾಗಲಿ ಎಂದು ವರ್ಗಾವಣೆ ಆಗಿದೆ. ಅವರು ಕೆಎಟಿಗೆ ಹೋಗಿದ್ದಾರೆ ಎಂದು ಹೇಳಿದರು.
ಬಿಜೆಪಿ ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೆದರಿ ನೇಮಕವಾಗಿದೆ.ಇನ್ನೂ ವಿಪಕ್ಷ ಸ್ಥಾನ ತುಂಬಬೇಕಿದೆ. ಬಿಎಸ್ ವೈ ಅವರನ್ನು ವಯಸ್ಸಾಯ್ತು ಎಂದು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈಗ ತೇಪೆಹಚ್ಚಲು ಬಿ ಎಸ್ ವಿಜಯೇಂದ್ರರನ್ನು ನೇಮಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ, ಎಸ್ ಕೆ ಮರಿಯಪ್ಪ, ಮಾಜಿ ಎಂ ಎಲ್ ಸಿ ಪ್ರಸನ್ನ ಕುಮಾರ್ ವೈ.ಹೆಚ್.ನಾಗರಾಜ್.ಶಿ ಜು ಪಾಶ ಮೊದಲಾದವರು ಉಪಸ್ಥಿತರಿದ್ದರು
ಸುಧೀರ್ ವಿಧಾತ ,ಶಿವಮೊಗ್ಗ