ಹೊಸಮನೆ ಬಡಾವಣೆಯಲ್ಲಿ ನೂತನ ಸಭಾಂಗಣವನ್ನು ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್
ಹೊಸಮನೆ ಬಡಾವಣೆಯಲ್ಲಿ ನಿರ್ಮಿಸಿದ ನೂತನ ಡಾ.ಬಾಬು ಜಗಜೀವನ್ ರಾಮ್ ಸಭಾಂಗಣವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್ ಉದ್ಘಾಟಿಸಿದರು
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಹತ್ತಿರವಿರುವ ಅರಳಿಮರ ಶ್ರೀ ಮಾರಿಕಾಂಬ ದೇವಾಲಯದ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ. ಬಾಬು ಜಗಜೀವನ್ ರಾಮ್ ಸಭಾಂಗಣದ ಉದ್ಘಾಟನೆಯನ್ನು ಇಂದು ಬಡಾವಣೆ ಹಿರಿಯರು ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ನೆರವೇರಿಸಿದರು
ನಂತರ ಮಾತನಾಡಿದ ಆರ್ ಪ್ರಸನ್ ಕುಮಾರ್ ಅವರು ಈಗಾಗಲೇ ಹೊಸಮನೆ ಬಡಾವಣೆಯ ಹಲವು ಜ್ವಲಂತ ಸಮಸ್ಯೆಗಳಾದ ರಾಜಕಾಲುವೆ ದುರಸ್ತಿ ಕಾಮಗಾರಿ, ಕನ್ಸರ್ ವೆನ್ಸಿ ಅಭಿವೃದ್ಧಿ, ರಸ್ತೆ, ಬೀದಿ ದೀಪದ ಸೇರಿದಂತೆ ಹಲವು ಕಾಮಗಾರಿಗಳನ್ನು ಸ್ಥಳೀಯ ಪಾಲಿಕೆ ಸದಸ್ಯರಾದ ರೇಖಾರಂಗನಾಥ್ ರವರು ತಮ್ಮ ಪಾಲಿಕೆಯ ಆಡಳಿತ ಅವಧಿಯಲ್ಲಿ ಸಂಪೂರ್ಣಗೊಳಿಸುವ ಮುಖಾಂತರ ಹೊಸಮನೆ ಬಡಾವಣೆಯನ್ನು ಸ್ಮಾರ್ಟ್ ಬಡಾವಣೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದು. ಜೊತೆಗೆ ಬಡಾವಣೆಗೆ ಅವಶ್ಯಕತೆ ಇದ್ದಂತ ಡಾ. ಬಿ. ಆರ್ .ಅಂಬೇಡ್ಕರ್ ಸಮುದಾಯ ಭವನ ಸೇರಿದಂತೆ ಇಂದು ಉದ್ಘಾಟನೆಗೊಂಡ ಡಾ. ಬಾಬು ಜಗಜೀವನ್ ರಾಮ್ ಸಭಾಂಗಣ ಹೀಗೆ ಸಾಕಷ್ಟು ಕೇಲಸವನ್ನು ನಿರ್ಮಾಣ ವಾರ್ಡಿನ ಜನಪ್ರಿಯ ಸದಸ್ಯೆಯಾಗಿದ್ದಾರೆ ರೇಖಾ ರಂಗನಾಥ್. ಇನ್ನೂ ಇಂದು ಉದ್ಘಾಟನೆಗೊಂಡ ಸಭಾಂಗಣವನ್ನು ಬಡಾವಣೆಯ ನಾಗರಿಕರಿಗೆ ಕಾರ್ಯಕ್ರಮಗಳು ನೆರವೇರಿಸಲು ಅನುವು ಮಾಡಿಕೊಟ್ಟಿದ್ದಾರೆ. ಬಡಾವಣೆಯ ನಾಗರಿಕರು ಇದನ್ನು ಸದ್ಭಳಕೆ ಮಾಡಿಕೊಂಡು ಸ್ವಚ್ಛತೆಯನ್ನು ಕಾಪಾಡಬೇಕು.ಈ ವಾರ್ಡಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಪಾಲಿಕೆ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ವಹಿಸಿದ್ದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್, ಬಡಾವಣೆಯ ಪ್ರಮುಖರಾದ ನರಸಿಂಹ ಮೂರ್ತಿ,ರವಿ, ಆನಂದ ಮೂರ್ತಿ, ರಾಮ್ ಕುಮಾರ್, ಅನುಪ್ , ಸುನಿಲ್, ಚಂದ್ರು ಗೆಡ್ಡೆ , ನಾಗರಾಜ್ , ಚೌಡಪ್ಪ, ದೀಪು, ಮಧು ಅಪ್ಪಿ , ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಹೆಚ್.ಪಿ. ಗಿರೀಶ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನ ಅಧ್ಯಕ್ಷ ಬಿ ಲೋಕೇಶ್,ಗುತ್ತಿಗೆದಾರ ಸದಾನಂದ್ ಹಾಗೂ. ಡಾ. ಬಿ. ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ, ಡಾ. ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ಮತ್ತು ಶ್ರೀ ಮಾತೆಂಗಮ್ಮ ದೇವಾಲಯ ಸೇವಾ ಸಮಿತಿಯ ಪದಾಧಿಕಾರಿಗಳು – ಸದಸ್ಯರು, ಬಡಾವಣೆಯ ಮಹಿಳೆಯರು, ನಾಗರಿಕರು ಉಪಸ್ಥಿತರಿದ್ದರು
ಸುಧೀರ್ ವಿಧಾತ ,ಶಿವಮೊಗ್ಗ