ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ದರೋಡೆ : ಆರೋಪಗಳನ್ನು ಪತ್ತೆ ಹಚ್ಚಿದ ಪೋಲಿಸರು, ನಾಲ್ವರು ಅಂದರ್!

ಅಡಿಕೆ ವ್ಯಾಪರಿ ಉಮೇಶ ಅವರ ಕಾರು‌ ಚಾಲಕನಿಗೆ ಹಣವನ್ನು ತರುವುದು ಒಯ್ಯುವುದು ಮೊದಲೆ ಗೊತ್ತಿದ್ದರಿಂದ ಅದರಲ್ಲೂ ಹಣವನ್ನು ಕಾರಿನಲ್ಲಿ ಎಲ್ಲಿ ಇಡುವುದು ಅನ್ನುವುದನ್ನು ತಿಳಿದಿದ್ದ ನಟೋರಿಯ ಚಾಲಕ ತನ್ನ ಪ್ರೆಯಸಿಗೆ ಕಾರಿನ ಡಿಕ್ಕಿಯ ನಕಲಿ ಕೀಯನ್ನು ಮಾಡಿಸಿ ಕೊಟ್ಟು ಹಣ ದರೋಡೆಗೆ‌ ಹೊಂಚುಹಾಕಿದ್ದ ಕಿರಾತಕ ತನ್ನ ಇಬ್ಬರು ಗೆಳೆಯರನ್ನು ಈ ಕೃತ್ಯಕ್ಕೆ‌ ಬಳಸಿಕೊಂಡಿದ್ದ. ಅಕ್ಟೋಬರ್ ಏಳರೊಂದು ತನ್ನ ಯಜಮಾನ ಅಡಿಕೆ ವ್ಯಾಪಾರಿ ಉಮೇಶ್ ಅವರ ಜೋತೆಗೆ ಅದಿಕ ಹಣವನ್ನು ತೆಗೆದುಕೊಂಡು ತುಮಕೂರಿಗೆ‌ ಹೋಗುವುದನ್ನು ಮೊದಲೇ ತಿಳಿದಿದ್ದ ಚಾಲಕ ಸ್ವಾಮಿ ಹಣ ದರೋಡೆ ಮಾಡಲು ಸ್ಕೆಚ್ ಹಾಕಿದ್ದ ಮಾಡಿಸಿದ್ದ ಕಾರಿನ ಡಿಕ್ಕಿಯ ನಕಲಿ ಕೀ ಅನ್ನು ತನ್ನ ಪ್ರೆಯಸಿಗೆ ಕೊಟ್ಟು ಇಬ್ಬರು ಸಹಚರರನ್ನಿ ಮೊದಲೆ ಕರೆಸಿಕೊಂಡು ಪ್ಲಾನ್ ಏನು ಎನ್ನುವುದನ್ನು ವಿವರಿಸಿದ್ದಾನೆ. ಅದರಂತೆ ಎಲ್ಲವು‌ ನೆಡೆದುಹೋಗಿ ಈಗ ಒಂದು ಕೋಟಿ ರೂಪಾಯಿ ಹಣ ದರೋಡೆ ಮಾಡಿದ ಹಿನ್ನಲೆಯಲ್ಲಿ ಪ್ರೆಯಸಿಯ ಜೊತೆಗೆ ಜೈಲುಪಾಲಾಗಿದ್ದಾರೆ ನಾಲ್ವರು ಖದೀಮರು

ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ದರೋಡೆ : ಆರೋಪಗಳನ್ನು ಪತ್ತೆ ಹಚ್ಚಿದ ಪೋಲಿಸರು, ನಾಲ್ವರು ಅಂದರ್!

ಬೆಂಗಳೂರು: ಮೊದಲೇ ಸ್ಕೆಚ್ ಹಾಕಿದ್ದ ಅಡಿಕೆ ವ್ಯಾಪಾರಿಯ ಕಾರು‌ ಚಾಲಕ ತನ್ನ ಯಜಮಾನನ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಒಂದು ಕೋಟಿ ರೂ ಹಣ ಕಳವು ಮಾಡಿಸಿದ್ದಾನೆ ಈ ಪ್ರಕರಣಕ್ಕೆ ಸಂಭಂದಿಸಿದಂತೆ ನಾಲ್ವರನ್ನು ಬೆಂಗಳೂರಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಸ್ವಾಮಿ (34), ಅನುಪಮಾ (38), ಪವನ್ (30) ಹಾಗೂ ಕಾರ್ತಿಕ್ (27) ಬಂಧಿತ ಆರೋಪಿಗಳಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮೂಲದ ಅಡಿಕೆ ವ್ಯಾಪರಿ ಉಮೇಶ್ ವಿವಿಧ ಜಿಲ್ಲೆಗಳ ರೈತರಿಂದ ಅಡಿಕೆ ಖರೀದಿಸಿ, ಹೊರ ರಾಜ್ಯಗಳಿಗೆ ರಫ್ತು ಮಾಡುವ ಕೆಲಸವನ್ನು ಮಾಡಿಕೊಂಡಿದ್ದರು‌. ಅಕ್ಟೋಬರ್ ಏಳರಂದು ಅಡಿಕೆ‌ ವ್ಯಾಪಾರದ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಉಮೇಶ್ ಅವರ ಕಾರಿನಲ್ಲಿದ್ದ ಒಂದು ಕೋಟಿ ರೂಪಾಯಿ ಕಳ್ಳತನವಾಗಿತ್ತು. ಈ ಸಂಬಂಧ ಕಾರು ಚಾಲಕ ಸ್ವಾಮಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು ಉಮೇಶ್!!

ಹಣ ಕಳ್ಳತನವಾದ ಕೂಡಲೆ ಅಕ್ಟೋಬರ್ 21ರಂದು ಉಪ್ಪಾರಪೇಟೆ ಠಾಣೆಗೆ ತೆರಳಿದ ಉಮೇಶ್ ದೂರು ದಾಖಲಿಸಿದ್ದರು.

ಅಂದು ನೆಡೆದದ್ದಾದರು ಏನು?

ಅಕ್ಟೋಬರ್ ಏಳರಂದು ಅಡಿಕೆ ಖರೀದಿಸಲು ಅಪಾರ ಪ್ರಮಾಣದ ಹಣದೊಂದಿಗೆ ಉಮೇಶ್ ತಮ್ಮ ಕಾರು ಚಾಲಕ ಸ್ವಾಮಿ ಜೊತೆ ಚಿತ್ರದುರ್ಗದಿಂದ ತುಮಕೂರಿಗೆ ಬಂದಿದ್ದರು. ಕಾರಿನ ಡಿಕ್ಕಿಯಲ್ಲಿ ಹಣದ ಬ್ಯಾಗ್ ಇರಿಸಿದ್ದರು. ತುಮಕೂರಿನಲ್ಲಿ ಅಡಿಕೆ ಸಿಕ್ಕಿರಲಿಲ್ಲ ಆದ್ದರಿಂದ ಬೆಂಗಳೂರಿನ ಚಂದ್ರಾಲೇಔಟ್‌ನ ಪಿಜಿಯಲ್ಲಿದ್ದು ಓದುತ್ತಿದ್ದ ಮಗಳನ್ನು ಮಾತನಾಡಿಸಿಕೊಂಡು ಹೋಗೋಣವೆಂದು ಬೆಂಗಳೂರಿಗೆ ಬಂದಿದ್ದರು.ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿರುವ ಗಿರಿಯಾಸ್ ಬಳಿ ಕಾರು ನಿಲ್ಲಿಸಿದ್ದ ಉಮೇಶ್ ಹಾಗೂ ಸ್ವಾಮಿ, ಸಮೀಪದಲ್ಲಿದ್ದ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಬಂದು ಚಂದ್ರಾಲೇಔಟ್‌ಗೆ ತೆರಳಿ ಮಗಳನ್ನು ಮಾತನಾಡಿಸಿಕೊಂಡು ಚಿತ್ರದುರ್ಗಕ್ಕೆ ಹೊರಟಿದ್ದರು. ನಂತರ ಚಹಾ ಕುಡಿಯಲು ಚಾಲಕ ಸ್ವಾಮಿ, ಡಾಬಸ್‌ಪೇಟೆ ಬಳಿ ಕೆಲ ನಿಮಿಷ ಕಾರು ನಿಲ್ಲಿಸಿದ್ದ. ಬಳಿಕ ಇಬ್ಬರೂ ಸಹ ಕಾರಿನಲ್ಲಿ ಭೀಮಸಮುದ್ರಕ್ಕೆ ಹೋಗಿ ಕಾರಿನ ಡಿಕ್ಕಿ ತೆರೆದು ನೋಡಿದಾಗ ಹಣದ ಬ್ಯಾಗ್ ನಾಪತ್ತೆಯಾಗಿತ್ತು. ಸಾಕಷ್ಟು ಹುಡುಕಾಟದ ನಂತರವೂ ಬ್ಯಾಗ್ ಸಿಗದಿದ್ದಾಗ ತಮ್ಮ ಸ್ನೇಹಿತನೊಂದಿಗೆ ಚರ್ಚಿಸಿದ ಬಳಿಕ ಉಪ್ಪಾರಪೇಟೆ ಠಾಣೆಗೆ ಬಂದು ಉಮೇಶ್ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು. ತಕ್ಷಣವೇ ಅಖಾಡಕ್ಕಿಳಿದು ಖದೀಮರ ಬೆನ್ನುಬಿದ್ದಿದ್ದಾರೆ ಕಾರ್ಯಚರಣೆಯ‌ ಆರಂಭದಲ್ಲೆ ಅಡಿಕೆ‌ ವ್ಯಾಪರಿ ಉಮೇಶ್ ಅವರ ಕಾರು ಚಾಲಕ ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಸಂಚು ರೂಪಿಸಿ ನಗರದ ಹೊರವಲಯದಲ್ಲಿ ಹಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ನಾಲ್ವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 90.19 ಲಕ್ಷ ರೂ ನಗದು, ಕದ್ದ ಹಣದಲ್ಲಿ ಖರೀದಿಸಿದ್ದ 6.49 ಲಕ್ಷ ಮೌಲ್ಯದ 2 ಆ್ಯಪಲ್ ಐಫೋನ್‌ಗಳು, 1 ಇಯರ್ ಫೋನ್, 2 ವಾಚುಗಳು, 1 ಸ್ಮಾರ್ಟ್ ವಾಚ್, 61.670 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು, 1 ಬೈಕ್, 4 ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಂಡಿರುವುದಾಗಿ ಉಪ್ಪಾರಪೇಟೆ ಪೊಲೀಸರು ತಿಳಿಸಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!