ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕನಕಮಜಲು ಮೂಲದ ಮಹಿಳೆ ಐಶ್ವರ್ಯ ಬೆಂಗಳೂರಿನಲ್ಲಿ ತಂದೆಯ ಮನೆಯಲ್ಲಿ ಸಾವಿಗೆ ಶರಣಾಗಿದ್ದಾಳೆ.ಈ ಪ್ರಕರಣದ ಬೆನ್ನು ಹತ್ತಿದ ಪೋಲಿಸರು ಐಶ್ವರ್ಯ ಳಾ ಗಂಡ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಐಶ್ವರ್ಯ ಸಾವಿಗೀಡಾಗಿ ಒಂದು ವಾರದ ಬಳಿಕ ಈ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ.
ಗಂಡನ ಮನೆಯವರಿಗೆ ನಿತ್ಯ ಇಲ್ಲಸಲ್ಲದನ್ನು ಹೇಳಿ ಕಿರುಕುಳ ಕೊಡುವಂತೆ ಪ್ರಚೋದಿಸಿದ ಮನೆಹಾಳ ಬಂಧು ಒಬ್ಬನಿಂದ ಗಂಡನ ಮನೆಯವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಸಹಿಸಿಕೊಳ್ಳಲಾಗದ ಸ್ಥಿತಿ ತಲುಪಿದ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಐಶ್ವರ್ಯ ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು ಆತ್ಮಹತ್ಯೆಗೆ ಕಾರಣವನ್ನು ಎಳೆ ಎಳೆಯಾಗಿ ಬರೆದಿದ್ದಾಳೆ ಈ ಹಿನ್ನೆಲೆಯಲ್ಲಿ ಐವರನ್ನು ಬಂಧಿಸಲಾಗಿದೆ. ಈಕೆಯನ್ನು ವರನೋಡಿ ಮುಂದೆ ನಿಂತು ಮದುವೆ ಮಾಡಿಸಿದ ತಂದೆಯ ತಂಗಿಯ ಗಂಡನೆ ಕೊನೆಗೂ ಮುದ್ದಾದ ಸಂಸಾರಕ್ಕೆ ಹುಳಿ ಹಿಂಡಿರುವುದು ಪತ್ತೆಯಾಗಿದೆ. ಬಿರಿಕುಬಿಟ್ಟ ಸಂಸಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಐಶ್ವರ್ಯ
ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡನಾದ ರವೀಂದ್ರ ಎಂಬಾತ ಇದೇ ಕಂಪನಿಯಲ್ಲಿ ಆಡಿಟರ್ ಆಗಿದ್ದು, ಆತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಕೆಲಕಾಲ ನಂತರ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬಕ್ಕೆ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದರು.
ಗಂಡನಿಗೆ ಹೆಂಡತಿಯ ಮೇಲೆ ಅನುಮಾನ! ಮಾವನಿಗೆ ವರದಕ್ಷಿಣೆ ಹಣದ ದುರಾಸೆ – ಸಿಕ್ಕ ಫಲಿತಾಂಶ ಆತ್ಮಹತ್ಯೆ!!
ಬೆಂಗಳೂರು: ಶ್ರೀಮಂತರ ಕೋಟೆಯಲ್ಲಿ ಸಂಶಯದ ಜ್ವಾಲೆ! ಸಾವಿನಮನೆ ಸೇರಿದ ಮುದ್ದಾದ ಯುವತಿ!! ಇವರಲ್ಲಿ ಯಾರಿಗೂ ಹಣಕಾಸಿಗೇನು ಕೊರತೆಯು ಇರಲಿಲ್ಲ. ತಮ್ಮ ಬಳಿಯಲ್ಲಿ ಕೋಟಿ ಕೋಟಿಯಷ್ಟು ಹಣ ಇದ್ದರೂ ಹಣದ ದಾಹ ಮಾತ್ರ ಈ ಕುಟುಂಬಕ್ಕೆ ಕಡಿಮೆಯಾಗಿರಲಿಲ್ಲ. ಇದರ ಬೆನ್ನಿಗೆ ಮನೆಯ ಮೂಲೆಯಲ್ಲಿ ಕುಳಿತ್ತಿತ್ತು ಸಂಶಯದ ಭೂತ? ಇಲ್ಲಿ ಹಣದ ದಾಹದ ಜೊತೆಗೆ ಗಂಡನಿಗೆ ಹೆಂಡತಿ ಮೇಲೆ ಇನ್ನಿಲ್ಲದ ಸಂಶಯ. ಮಾನವನಿಗೂ ಕೂಡ ಸೊಸೆಯ ಮೇಲೆ ಅನುಮಾನ ಪಡುತ್ತಲಿದ್ದ! ಇದರ ಪರಿಣಾಮ ಕೊನೆಗೆ ಸಿಕ್ಕ ಫಲಿತಾಂಶ ಮಾತ್ರ ಮುದ್ದಾದ ಮಡದಿ ಮನೆಯನ್ನು ಬೆಳಗಬೇಕಾದ ಸೊಸೆಯ ಸಾವು!
ಹೆತ್ತವರ ಇಚ್ಛೆಯಂತೆ ಅಮೇರಿಕಾದಲ್ಲಿ ಚೆನ್ನಾಗಿ ಓದಿ ಉನ್ನತ ವ್ಯಾಸಂಗ ಮಾಡಿದ್ದ ಐಶ್ವರ್ಯಾ ಎನ್ನುವ ಯುವತಿ ಚಂದ್ರಲೇಔಟಿನ ನಿವಾಸಿ ಸುಬ್ರಮಣಿಯವರ ಏಕೈಕ ಪುತ್ರಿ. ಸುಬ್ರಮಣಿಯೂ ಆಸ್ತಿ ಅಂತಸ್ತಿನಲ್ಲಿ ಚೆನ್ನಾಗಿಯೇ ಇದ್ದಂತ ವ್ಯಕ್ತಿ. ತನ್ನ ಮುದ್ದಾದ ಮಗಳನ್ನು ತನಗಿಂತ ಸ್ಥಿತಿವಂತರ ಮನೆಗೆ ಕೊಟ್ಟು ಮದುವೆ ಮಾಡಿಕೊಡಬೇಕು ಅನ್ನುವ ಬಹುದೊಡ್ಡ ಆಸೆ ಇಟ್ಟುಕೊಂಡಿದ್ದರಂತೆ
ಎಲ್ಲವು ಅಂದುಕೊಂಡಂತೆ ಹೆಸರಾಂತ ಡೈರಿ ರೀಚಿ ಐಸ್ ಕ್ರೀಂ ಕಂಪನಿಯ ಮಾಲೀಕರಾದ ಗಿರಿಯಪ್ಪ ಅವರ ಮಗ ರಾಜೇಶ್‍ಗೆ ಐದು ವರ್ಷದ ಹಿಂದೆ ಮಗಳು ಐಶ್ವರ್ಯಳನ್ನು ಮದುವೆ ಮಾಡಿಕೊಟ್ಟಿದ್ದರು ಸುಬ್ರಮಣ್ಯ ಅವರು. ಮದುವೆಯಾದ ನಂತರದಲ್ಲಿ ಎಲ್ಲವೂ ಸರಿಯಾಗೆ ಇತ್ತು ಗಂಡ ಹೆಂಡತಿ ಜೀವನ ಸುಖಮಯವಾಗಿತ್ತು ಅದರೆ ಕೆಲವು ಸಮಯದ ನಂತರ ಸಂಸಾರದಲ್ಲಿ ಬಿರುಗಾಳಿಯೆ ಎದ್ದಿದೆ ಅದರಲ್ಲೂ ಹಣದ ವ್ಯಾಮೋಹದ ಜೋತೆಗೆ ಅನುಮಾದ ನಂಜು ಐಶ್ವರ್ಯ ಪತಿ ಮತ್ತು ಆತನ ಮನೆಯವರ ನೆತ್ತಿಗೆರಿ ಕುಳಿತಿತ್ತು.
ಐಶ್ವರ್ಯ ಬಾಳಲ್ಲಿ ವಿಲನ್ ಆದ ಸೋದರ ಅತ್ತೆಯ ಗಂಡ ರವೀಂದ್ರ ಮತ್ತು ಮಾವ ಗಿರಿಯಪ್ಪ!?
ಈ ಮದುವೆಗೆ ಸಂಬಂಧ ಕುದಿರಿಸಿದ್ದು ಐಶ್ವರ್ಯಾ ಮಾವ ಸುಬ್ರಮಣಿಯವರ ತಂಗಿಯ ಗಂಡ ರವೀಂದ್ರ ಹೆಂಡತಿ ಅಣ್ಣನ ಮಗಳಿಗೆ ( ಸೋದರ ಸೊಸೆ ) ಒಳ್ಳೆಯ ಸಂಬಂಧ ನೋಡಿದ್ದ ರವೀಂದ್ರ ಸ್ರುಬ್ರಮಣಿಯ ಜೊತೆ ಆಸ್ತಿ ವಿಷಯಕ್ಕೆ ಸಂಭಂದಿಸಿದಂತೆ ಗಲಾಟೆ ಮಾಡಿಕೊಂಡಿದ್ದ. ಇದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಸೇಡು ತೀರಿಸಿಕೊಳ್ಳಲು ರವೀಂದ್ರ ಮುಂದಾಗಿದ್ದ.ತನ್ನ ಸಂಭಂದಿ ಮಗಳ ಗಂಡ ರಾಜೇಶ ಮತ್ತು ಮಾವ ಗಿರಿಯಪ್ಪ ನವರಿಗೆ ಐಶ್ವರ್ಯನ ವಿರುದ್ಧ ಇಲ್ಲಸಲ್ಲದ ಚಾಡಿ ಹೇಳಿಕೊಡಲು ಶುರು ಮಾಡಿದ್ದನಂತೆ.
ಇಲ್ಲ ಸಲ್ಲದ ಕಟ್ಟುಕಥೆಯನ್ನ ಹೇಳಿ ಐಶ್ವರ್ಯ ಗಂಡ ಮತ್ತು ಮಾವ ನಂಬುವಂತೆ ಮಾಡಿ ಐಶ್ವರ್ಯಾ ಮೇಲೆ ಸಂಶಯ ಬರುವ ಹಾಗೇ ಮಾಡಿದ್ದಾನೆ. ಐಶ್ವರ್ಯ ಸೋದರ ಮಾವ ರವೀಂದ್ರ ಹೇಳಿದ ಎಲ್ಲವೂ ಸತ್ಯ ಎಂದು ತಿಳಿದ ಮನೆಯ ಹಿತ್ತಾಳೆ ಕಿವಿಗಳು ಬಳಿಕ ಇನ್ನಿಲ್ಲದಂತೆ ಐಶ್ವರ್ಯಳನ್ನು ಪಿಡಿಸಿದ್ದಾರೆ.ಐಶ್ವರ್ಯ ಅಪ್ಪನ ಬಳಿ ಸಾಕಷ್ಟು ದುಡ್ಡಿದೆ ವರದಕ್ಷಿಣೆಗೆ ಪೀಡಿಸುವಂತೆ ಕಿವಿ ಊದಿದ್ದಾನೆ ರವೀಂದ್ರ. ಇವನ ಮಾತು ಕೇಳಿದ ಗಿರಿಯಪ್ಪ, ರಾಜೇಶ್, ಸೀತಾ ಮತ್ತು ಮನೆಯವರೆಲ್ಲ ಐಶ್ವರ್ಯಗೆ ಮಾನಸಿಕ ಹಿಂಸೆ ಕೊಡಲು ಶುರುಮಾಡಿದ್ದಾರೆ.
ಯಾವಾಗ ಅತ್ತೆ ಮಾವ, ಗಂಡ ನಾದಿನಿ ಎಲ್ಲರೂ ಸೇರಿಕೊಂಡು ನಿತ್ಯ ಬಿಟ್ಟು ಬಿಡದೆ ಹಿಂಸೆ ಕೊಡಲು ಶುರುಮಾಡಿದ್ದರಿಂದ ಐಶ್ವರ್ಯ ನರಕ ಕೂಪದಿಂದ ಗಂಡನ ಮನೆ ತೊರೆಯುವ ನಿರ್ಧಾರ ಮಾಡಿ ತಂದೆಯ ಮನೆಗೆ ಐಶ್ವರ್ಯಾ ಹೋಗಿದ್ದಾಳೆ ಆದರೆ ಅಲ್ಲೂ ನೆಮ್ಮದಿಯಾಗಿ ಇರೋದಕ್ಕೆ ಬಿಡದ ಗಂಡ ರಾಜೇಶ್ ಮತ್ತೆ ಮತ್ತೆ ಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ಐಶ್ವರ್ಯಾ ಎಳೆ ಎಳೆಯಾಗಿ ಗಂಡನ ಮನೆಯಲ್ಲಿ ತನಗಾದ ಅನ್ಯಾಯದ ವಿರುದ್ಧ ಪಟ್ಟ ಚಿತ್ರಹಿಂಸೆಯನ್ನು ಎಳೆ ಎಳೆಯಾಗಿ ವಿವರವಾಗಿ ಬರೆದಿಟ್ಟು ಈ ಬದುಕಿಗೆ ಅಂತ್ಯ ಹೇಳಿ ಮುದ್ದಾದ ಯುವತಿ ಐಶ್ವರ್ಯ ನೇಣಿನ ಕುಣಿಕೆಗೆ ಕೊರಳೊಡ್ಡಿ ಆತ್ಮಹತ್ಯೆ ಶರಣಾಗಿದ್ದಾಳೆ!!.
ಸಾವಿಗೆ ಶರಣಾದ ಐಶ್ವರ್ಯ
ಪ್ರಕರಣದ ತನಿಖೆ ನಡೆಸಿದ ಗೋವಿಂದರಾಜ್ ನಗರ ಪೊಲೀಸರು ಐಶ್ವರ್ಯ ಬರೆದಿಟ್ಟ ಡೇತ್ ನೋಟ್ ಅಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆಗರ್ಭ ಶ್ರೀಮಂತ ಗಿರಿಯಪ್ಪ , ಸೀತಾ, ಐಶ್ವರ್ಯ ಪತಿ ರಾಜೇಶನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತಾನು ತಪ್ಪು ಮಾಡದೆ ಹಿಂಸೆ ಅನುಭವಿಸಿದ ಐಶ್ವರ್ಯಾ ಇಹಲೋಕ ತ್ಯಜಿಸಿದ್ದಾಳೆ.
ಹಣವಂತರ ಮನೆ ಹಣವಂತರ ಮನೆ ಎಂದು ಮುದ್ದಾದ ಮಗಳು ಐಶ್ವರ್ಯಳನ್ನು ಮದುವೆ ಮಾಡಿಕೊಟ್ಟ ಸುಬ್ರಮಣಿಯವರು ಇಂದು ಮಗಳನ್ನು ಕಳೆದುಕೊಂಡಿದ್ದಾರೆ ಎನ್ನುವುದು ಮಾತ್ರ ಸತ್ಯ!
ಸುಧೀರ್ ವಿಧಾತ ,ಶಿವಮೊಗ್ಗ