Headlines

ಬೆಂಗಳೂರು ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ. ದೃಶ್ಯ ಸೆರೆಹಿಡಿದ ವಿಕಾಸ್ ಗೌಡ ಎಂಬ ಧೈರ್ಯವಂತ ಹುಡುಗ..

ಮೆಜೆಸ್ಟಿಕ್ ಮಾಂಸದ ಅಡ್ಡೆ

ಬೆಂಗಳೂರು ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ !! ದೃಶ್ಯ ಸೆರೆಹಿಡಿದ ವಿಕಾಸ್ ಗೌಡ ಎಂಬ ಧೈರ್ಯವಂತ ಹುಡುಗ…

ಬೆಂಗಳೂರಿನ ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ ಹಗಲು ರಾತ್ರಿ ಎನ್ನದೆ ನಡೆಯುವ ವೇಶ್ಯಾವಾಟಿಕೆ ದಂಧೆಯ ಕುರಿತು ಯೂಟ್ಯೂಬರ್‌ ವಿಕಾಸ್‌ಗೌಡ ಎಂಬ ಧೈರ್ಯವಂತ ಹುಡುಗ ಕಷ್ಟ ಪಟ್ಟು ವಿಡಿಯೋ ಮಾಡಿದ್ದಾನೆ.

ಬೆಂಗಳೂರು : ಬೆಂಗಳೂರಿನ ಮಾಯಲೋಕವೆಂದೆ ಕುಖ್ಯಾತಿ ಪಡೆದಿರುವ ನಗರದ ಹೃದಯಭಾಗದಲ್ಲಿರುವ ಹಾಗೂ ನಿತ್ಯ ಲಕ್ಷಾಂತರ ಮಂದಿ ರಾಜ್ಯದ ನಾನಾ ಕಡೆಯಿಂದ ಬರುವಂತಹ ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್‌ ಏರಿಯಾದ ಅಂಡರ್‌ಪಾಸ್‌ನಲ್ಲಿ ನಿತ್ಯ ನಡೆಯುವ ವೇಶ್ಯಾವಾಟಿಕೆ ದಂಧೆಯ ಕುರಿತು ಯೂಟ್ಯೂಬರ್‌ ವಿಕಾಸ್‌ಗೌಡ ಎದೆಗಾರಿಕೆಯಿಂದ ವಿಡಿಯೋ ಮಾಡಿದ್ದಾನೆ. ವಿಡಿಯೋ ಮಾಡುವಾಗ ಸೆಕ್ಸ್ ವರ್ಕರ್ ಗಳ ಕೈಗೆ ಸಿಕ್ಕಿಬಿದ್ದ ಆತನ ಪಾಡು ನಿವೇ ನೋಡಿ…
ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ನಡೆಯತ್ತದೆ ಎಂದು ಹಲವು ಪ್ರಯಾಣಿಕರು ಹೇಳುತ್ತಾರೆ. ಇನ್ನೂ ಹಳ್ಳಿಗಳಿಂದ ಬಂದು ಬೆಂಗಳೂರಿನ ಮೆಜೆಸ್ಟಿಕ್‌ ಅಂಡರ್‌ಪಾಸ್‌ ಹಾದುಹೋದ ಎಲ್ಲರ ಬಾಯಲ್ಲಿಯೂ ಇದೇ ಸುದ್ದು ಹರಿದಾಡುತ್ತದೆ. ಇನ್ನೂ ಬೆಂಗಳೂರಿಗರು ಇದನ್ನು ನೋಡಿಯೂ ನೋಡದಂತೆ ದಿನನಿತ್ಯ ಓಡಾಡುತ್ತಿದ್ದಾರೆ. ಇದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಮಾಡಿದಾಗ ಪೊಲೀಸರು ಒಂದು ವಾರ ಸಿಬ್ಬಂದಿ ನಿಯೋಜನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ನಂತರ ಮತ್ತದೆ ದಂಧೆ ಗರಿಬಿಚ್ಚಿಕೊಳ್ಳುತ್ತದೆ

ಯೂಟ್ಯೂಬರ್ ವಿಕಾಸ್‌ಗೌಡ ಅವರು ಧೈರ್ಯದಿಂದ ತೆಗೆದಂತಹ ವಿಡಿಯೋ..

ಇಲ್ಲಿ ಯಾರಿಗೂ ಹೆದರದೆ ದಂಧೆಯಲ್ಲಿ ತೊಡಗಿಕೊಂಡ ಸೆಕ್ಸ್ ವರ್ಕರ್ ಗಳು ಗಿರಾಕಿಗಳನ್ನು ತಮ್ಮ ಖೆಡ್ಡಾಕೆ ಕೆಡವಿ‌ ಕೊಳ್ಳುತ್ತಾರೆ ನಿತ್ಯ ದಂಧೆ ಬಲು‌ ಜೋರು ಎನ್ನುವಂತೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಪುರುಷರನ್ನು ಅಡ್ಡಹಾಕಿ ಪುಸಲಾಯಿಸಿ ತಮ್ಮ ಜೋತೆಗೆ ಕರೆದುಕೊಂಡು ಹೋಗುವ ಘಟನೆಗಳು ನಿತ್ಯ ಕಂಡುಬರುತ್ತವೆ. ಈಗ ವಿಕಾಸ್‌ಗೌಡ ಎನ್ನುವ ಯೂಟ್ಯೂಬರ್‌ ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ನೆಡೆಯುವ ಅಷ್ಟೂ ಕರ್ಮಕಾಂಡವನ್ನು ವಿಡಿಯೋ ಮಾಡಿದ್ದಾನೆ!. ಈತ ಅಲ್ಲಿಯ ವಾತಾವರಣವನ್ನು ವಿಡಿಯೋ ಮಾಡುವುದನ್ನು ಗಮನಿಸಿದ ಸೆಕ್ಸ್ ವರ್ಕರ್ ಗಳು ಆತನಿಗೆ ಕೊಟ್ಟ ಕಿರುಕುಳವನ್ನು ನಿವೇ ಕಣ್ಣಾರೆ ನೋಡಬಹುದು.
ಪೊಲೀಸ್‌ ಇಲಾಖೆಯಿಂದ ರಾಜ್ಯಾದ್ಯಂತ ಎಲ್ಲೇ ವೇಶ್ಯಾವಾಟಿಕೆ ದಂಧೆ ನಡೆದರೂ ಅದನ್ನು ಮುಲಾಜಿಲ್ಲದೇ ಮಟ್ಟಹಾಕಿ ದಂಧೆಕೋರರನ್ನು ಬಂಧಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಇನ್ನೂ ಲೈಂಗಿಕ ಅಲ್ಪ ಸಂಖ್ಯಾತರು ಕೂಡ ದಂಧೆ ನಡೆಸದಂತೆ ಕಠಿಣ ಕ್ರಮಗಳನ್ನು ಸಾಕಷ್ಟು ಬಾರಿ ಕೈಗೊಂಡಿದ್ದಾರೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಯಾರಿಗೂ ಹೆದರದೆ ನಗರದ ಹೃದಯಭಾಗವಾದ ಮೆಜೆಸ್ಟಿಕ್ಕಿನ ಅಂಡರ್‌ಪಾಸ್‌ನಲ್ಲಿ (ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌ ) ವೇಶ್ಯಾವಾಟಿಕೆ ದಂಧೆ ನಿತ್ಯ ನೆಡೆಯುತ್ತಿದೆ ಎಂದರೆ ಇದು ನಾಚಿಕೆ ಗೇಡಿನ ವಿಷಯವಾಗಿದೆ.
ವಿಡಿಯೋ ಮಾಡುತ್ತಿದ್ದವನನ್ನು ತಡೆದು ಡಿಲೀಟ್‌ ಮಾಡಿಸಿಲು ಮುಂದಾಗಿದ್ದರು ಅಂದರೆ ಇವರ ತಾಕತ್ತನ್ನು ಮೆಚ್ಚಲೆಬೇಕು!
 ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ಯೂಟ್ಯೂಬರ್‌ ವಿಕಾಸ್‌ಗೌಡ ಸೆಲ್ಫಿ ವಿಡಿಯೋ ಮಾಡುತ್ತಾ ನಡೆದುಕೊಂಡು ಹೋಗುತ್ತಾನೆ. ಆಗ ಪಕ್ಕದಲ್ಲಿಯೇ ಇದ್ದ ಸೆಕ್ಸ್ ವರ್ಕರ್ ಒಬ್ಬಳು ಗಿರಾಕಿಯನ್ನು ನಿಲ್ಲಿಸಿಕೊಂಡು ವ್ಯವಹಾರ ಕುದುರಿಸುತ್ತಿರುವ ವಿಡಿಯೋ ಕೂಡ ಸೆರೆಯಾಗುತ್ತದೆ ಇದನ್ನು ಗಮನಿಸಿದ ವಿಕಾಸ್ ಗೌಡ ವಿಡಿಯೋ ಮಾಡುತ್ತಾ ಮುಂದಕ್ಕೆ ಹೋಗುತ್ತಿದ್ದಂತೆ ಅಲ್ಲೆ ಇದ್ದ ಸೆಕ್ಸ್ ವರ್ಕರ್ ಐದಾರು ಜನರ ಗ್ಯಾಂಗ್ ಯ್ಯೂಟೂಬರ್‌ನನ್ನು ನಿಲ್ಲಿಸಿ ಪ್ರಶ್ನೆ ಮಾಡಿ ವಿಡಿಯೋ ಮಾಡದಂತೆ ಹೇಳಿದ್ದಾರೆ. ನಂತರ, ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಎಲ್ಲ ವಿಡಿಯೋ ಡಿಲೀಟ್‌ ಮಾಡಲು ಹೇಳಿದ್ದಾರೆ ಸುಮಾರು15 ರಿಂದ 20 ನಿಮಿಷ ಆತನೊಂದಿಗೆ ಚರ್ಚಿಸಿದ ಸೆಕ್ಸ್ ವರ್ಕರ್ ಗಳು ನಂತರ ಆತನ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ವಿಕಾಸ್ ಗೌಡನನ್ನು ಬಿಟ್ಟು ಕಳಿಸಿದ್ದಾರೆ ಆದರೆ ಈ ಎಲ್ಲಾ ಚರ್ಚೆ ಮತ್ತು ಆ ಸಮಯದ ಎಲ್ಲಾ ಘಟನೆಗಳು ವಿಕಾಸ್ ಗೌಡರ ಇನ್ನೊಂದು ಕ್ಯಾಮರದಲ್ಲಿ ಯಾರಿಗೂ ಅರಿವಿಗೆ ಬಾರದ ರೀತಿ ರೆಕಾರ್ಡಿಂಗ್ ಆಗುತ್ತಲೆ ಇತ್ತು!! ಅಲ್ಲಿಂದ ಹೊರಬಂದ ವಿಕಾಸ್ ಅವರನ್ನು ಸೆಕ್ಸ್ ವರ್ಕರ್ ಒಬ್ಬಳು ತನ್ನ ಜೋತೆಗೆ‌ ಬರುವಂತೆ ಪುಸಲಾಯಿಸಿದ ಘಟನೆ ಕೂಡ ನಡೆದು ಹೋಗುತ್ತದೆ

ಮೆಜೆಸ್ಟಿಕ್ ಅಂಡರ್ ಪಾಸ್

ಕಾಲೇಜು ಹುಡುಗರು, ಅಂಕಲ್‌ಗಳು ಯಾರೇ ವ್ಯಕ್ತಿಗಳು ಇದ್ದರೂ  ಜನಸಾಮಾನ್ಯರನ್ನು ತಮ್ಮ ವೇಶ್ಯಾವಾಟಿಕೆಗೆ ಕರೆದು ಮುಜುಗರ ಆಗುವಂತೆ ಮಾಡುತ್ತಿದ್ದಾರೆ ಇಲ್ಲಿಯ ಸೆಕ್ಸ್ ವರ್ಕರ್ ಗಳು. ಇದನ್ನು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಮನಗಂಡು ಮೆಜೆಸ್ಟಿಕ್ ಅಂಡರ್ ಪಾಸ್ ಹಡಬೆ ದಂಧೆಗೆ ಬ್ರೇಕ್ ಹಾಕಬೇಕು . ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿರುವ ಹೆಮ್ಮೆಯ ಬೆಂಗಳೂರಿನ ನಗರದ ಹೃದಯ ಭಾಗದಲ್ಲಿಯೇ ಸೆಕ್ಸಿನ ಸೊಂಕು ತಗುಲಿಕೊಂಡಿದೆ ಈ ಸ್ಥಳದಲ್ಲಿ ನಿತ್ಯ ಓಡಾಡುವ ಸಾರ್ವಜನಿಕರ ಪಾಡು ಹೇಳತಿರದು. ಇಂತಹ ಘಟನೆಗಳು ಯಾರ ಭಯವಿಲ್ಲದೆ ನಿರಂತರವಾಗಿ ನಡೆಯುತತಿರುವುದರಿಂದ ಬೆಂಗಳೂರು ಸುರಕ್ಷಿತ ತಾಣವಲ್ಲ ಎಂಬ ಭಾವನೆಯೂ ಜನರಲ್ಲಿ ಬರುತ್ತದೆ. ಆದ್ದರಿಂದ ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ಪ್ರಯಾಣಿಕರಿಗೆ ಸುರಕ್ಷೆ ಒದಗಿಸುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಕ್ರಮವಹಿಸಬೇಕು ಎಂದು ಯ್ಯೂಟೂಬರ್‌ ಬ್ಲಾಗರ್‌ ಮನವಿ ಮಾಡಿಕೊಂಡಿದ್ದಾನೆ. ಪೋಲಿಸ್ ಇಲಾಖೆಯಿಂದ ಇದು ಸಾಧ್ಯಾವಾ ಎನ್ನುವುದನ್ನು ಕಾದು ನೋಡಬೇಕಿದೆ

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!