ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಅಕ್ರಮ ಕಲ್ಲು ಗಣಿಗಾರಿಕೆ – ಭಾಗ – 1
ಕಲ್ಲು ಗಣಿಗಾರಿಕೆ ಎಂದ ತಕ್ಷಣ ಎಲ್ಲರ ದೃಷ್ಟಿ ತೀರ್ಥಹಳ್ಳಿಯ ಕಡೆಗೆ ಹರಿಯುತ್ತದೆ. ಅಸಲಿ ಹಕೀಕತ್ತೇನೆಂದರೆ ರಾಜ್ಯದ ಭಯಾನಕವಾದ ಗಣಿ ಮಾಫಿಯಾ ತೀರ್ಥಹಳ್ಳಿಯಲ್ಲಿದೆ. ಸರಿಯಾಗಿ ಗಮನಿಸಿದರೆ ರಾಜ್ಯದ ಇತರ ಅಕ್ರಮ ಕಲ್ಲು ಗಣಿಗಾರಿಕೆಯ ಧೂಳು ಅಬ್ಬರ ಇದರ ಮುಂದೆ ಏನೇನೂ ಅಲ್ಲ..! ಯಾಕೆಂದರೆ ಇಲ್ಲಿ ನಿತ್ಯ ಸಿಡಿಯುವ ಬಂಡೆಗಳಿಂದ ಬೃಹತ್ ಹೆಬ್ಬಂಡೆಯ ಒಡಲಲ್ಲಿ ಸಣ್ಣ ಸಣ್ಣ ಗಣಿ ಕಣಿವೆಗಳಿವೆಯಾದ್ದರಿಂದ ಇಲ್ಲಿ ಅಕ್ರಮ ನಿತ್ಯಸತ್ಯ. ಒಂದು ಕಾಲದಲ್ಲಿ ಸುಂದರವಾದ ಪರಿಸರ ಕಾಡು ಪ್ರಾಣಿಗಳ ಸಂಕುಲವಾಗಿದ್ದ ಹಸಿರುವನ ಸುಂದರ ಬೆಟ್ಟ ಗುಡ್ಡಗಳ ಸಾಲು ಸಾಲುಗಳ ನಡುವೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತೀರ್ಥಹಳ್ಳಿ ಪಟ್ಟಣ ಇಂದು ಅಕ್ರಮ ದಂಧೆ ಕೋರರನ್ನು ಕೈಬೀಸಿ ಕರೆಯುವ ಮಟ್ಟಕ್ಕೆ ಬೆಳೆದು ನಿಂತಿದೆ……
ತೀರ್ಥಹಳ್ಳಿ : ತೀರ್ಥಹಳ್ಳಿ ನಗರದ ಕೂಗಳತೆ ದೂರದಲ್ಲಿರುವ ಮೇಲಿನ ಕುರುವಳ್ಳಿ ಸರ್ವೆ ನಂಬರ್ 38 ರಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಸರ್ಕಾರದಿಂದ ಗುತ್ತಿಗೆ ಹಿಡಿದವರಿಂದ ದೂರು ದಾಖಲು!! ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನಿಮಗೆ ಕೆಲಸಕ್ಕೆ ಅವಕಾಶ ಕಲ್ಪಿಸಿ ಕೊಡುತ್ತೇವೆ ಎಂದಿದ್ದಾದರು ಯಾಕೆ ಗುತ್ತಿಗೆದಾರರು!? ಸಕ್ರಮದ ಹೆಸರಲ್ಲಿ ಓವರ್ ಲೂಪ್ ಮಾಡಿದ್ದಾರ ಅಧಿಕಾರಿಗಳು? ಇದರಲ್ಲಿ ಅಧಿಕಾರಿಗಳ ಪಾಲೇಷ್ಟು? ಓವರ್ ಲೂಪ್ ಮಾಡಿದ್ದೆ ಆದರೆ ಅಧಿಕಾರಿಗಳ ತಲೆದಂಡವಾಗುತ್ತಾ? ಈ ಭೂಮಿಯ ಸಂಪತ್ತನ್ನು ರಕ್ಷಿಸ ಬೇಕಾದ ಅಧಿಕಾರಿಗಳಿಗೆ ಯಾಕಿಷ್ಟು ಹಣದ ಹಸಿವು? ಇವರಿಗೆ ಸರ್ಕಾರ ಸಂಬಳ ಕೊಡುವುದಿಲ್ಲವಾ? ಮಾಡಿದ ಪಾಪಕ್ಕೆ ದಂಡ ತೆತ್ತುತ್ತಾರ….ಇದೇನು ಮೂವತ್ತು ವರ್ಷದ ಲೀಸ್!!
ತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಕುರುವಳ್ಳಿ ಗ್ರಾಮದ ಸರ್ವೆ ನಂಬರ್ 38ರಲ್ಲಿ ಅನೇಕ ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕೋಟ್ಯಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಹಣ ಅಕ್ರಮ ಗಣಿಗಾರಿಕೆ ಮಾಫಿಯಾದವರ ಕಿಸೆ ಸೇರಿದೆ. ಕೋಟ್ಯಂತರ ರೂಪಾಯಿ ಕಲ್ಲುಗಳು
ಹೊರ ಜಿಲ್ಲೆಗಳಿಗೆ ಸಾಗಾಟವಾಗಿದೆ. ರಾತ್ರಿ ಹಗಲೆನ್ನದೆ ಈ ಅಕ್ರಮ ಕಲ್ಲು ಗಣಿಗಾರಿಕೆ ನೆಡೆಯುತ್ತಿದ್ದು ಲೋಡ್ ಗಟ್ಟಲೆ ಕಲ್ಲು ಅಕ್ರಮ ದಂಧೆಕೋರರ ಪಾಲಾಗಿದೆ.ಈ ದಂಧೆ ಕೋರರನ್ನು ಮಟ್ಟಹಾಕಬೇಕಾದ ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಬಿಗಿ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ, ಇತ್ತೀಚಿಗೆ ಜಿಲ್ಲಾಡಳಿತ ಸರ್ವೆ ನಂಬರ್ 38ರಲ್ಲಿ 6 ಎಕರೆ ಪ್ರದೇಶಕ್ಕೆ ಕಾನೂನು ರೀತಿ ತಲಾ ಎರಡು ಎಕರೆಯಂತೆ ಪ್ರವೀಣ್, ವಸಂತ್ ಕುಮಾರ್,ಪ್ರವೀಣ್ ಎನ್ನುವ ಮೂವರು ಗುತ್ತಿಗೆ ದಾರರಿಗೆ 30 ವರ್ಷಕ್ಕೆ ಸರ್ಕಾರ ಅಧಿಕೃತವಾಗಿ ಗುತ್ತಿಗೆ ನೀಡಿದೆ!!
ಗುತ್ತಿಗೆ ಪಡೆದ ವಸಂತ್ ಕುಮಾರ್ ರವರು ಇದೀಗ ಈ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ರಾಜು, ನಿತೀಶ್ ಶೆಟ್ಟಿ, ರಾಮಸ್ವಾಮಿ ಹಾಗೂ ಇನ್ನಿತರದ ಮೇಲೆ ನಾವು ಗುತ್ತಿಗೆ ಪಡೆದ ಜಾಗದಲ್ಲಿ ಅನಾಧಿಕೃತವಾಗಿ ಕಲ್ಲು ಕ್ವಾರೇ ನಡೆಸುತ್ತಿದ್ದಾರೆ ಎಂದು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾಗದರೆ ರಾಜು,ನೀತಿಶ್ ಶೆಟ್ಟಿ, ರಾಮಸ್ವಾಮಿ ಹಾಗೂ ಇನ್ನಿತರರು ನೆಡೆಸುತ್ತಿರು ಕಲ್ಲು ಗಣಿಗಾರಿಕೆ ಅಕ್ರಮನಾ?
ಅಕ್ರಮ ಕಲ್ಲು ಗಣಿಗಾರಿಕೆಯನ್ನ ನಿಲ್ಲಿಸಿ ಗುತ್ತಿಗೆ ಪಡೆದ ಪ್ರದೇಶದಲ್ಲಿ ನನಗೆ ಸಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಗೆಯಲ್ಲಿ ದೂರು ನೀಡಿದ್ದಾರಂತೆ ಗುತ್ತಿಗೆದಾರ ವಸಂತ್ ಕುಮಾರ್
ನಾವು ಗುತ್ತಿಗೆ ಪಡೆದ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ನಮಗೆ ಸಕ್ರಮವಾಗಿ ಕಲ್ಲು ಗಣಿಗಾರಿಕೆ ನೆಡೆಸಲು ಅವಕಾಶ ಕಲ್ಪಿಸಿ ಕೊಡಬೇಕೆಂದು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗುತ್ತಿಗೆದಾರರು ಹೇಳುವ ಪ್ರಕಾರ ನಾವು ಗುತ್ತಿಗೆ ಹಿಡಿದ ಪ್ರದೇಶದಲ್ಲಿ ಕೆಲವರು ನಮ್ಮ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ನಾವು ನಿಯಮಾನುಸಾರ ಸರ್ವೆ ಮಾಡಿಸಿ ಅಧಿಕಾರಿಗಳ ಸಮ್ಮುಖದಲ್ಲಿ ನಾವು ಲಿಸ್ ಪಡೆದಂತಹ ಎರಡು ಎಕರೆ ಪ್ರದೇಶಕ್ಕೆ ಬೌಂಡರಿ ಹಾಕಿದ್ದೇವೆ, ಹಾಗೆಯೇ ಇಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ.ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮಧ್ಯವರ್ತಿಗಳ ಹಾವಳಿಯಿಂದ
ನಾವು ಕಾರ್ಮಿಕರಿಗೆ ರಕ್ಷಣೆ ನೀಡಲಿದ್ದು ನಾವು ಗುತ್ತಿಗೆ ಹಿಡಿದ ಪ್ರದೇಶದಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ನಿಯಮಾನುಸಾರ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿ ಕೊಡುತ್ತೇವೆ ಎಂಬುದಾಗಿ ಗುತ್ತಿಗೆ ದಾರರು ಹೇಳಿದ್ದಾರೆ.!?
ಹಾಗಾರೆ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ಭೂಗರ್ಭವನ್ನು ಅಕ್ರಮವಾಗಿ ಬಗೆದು ಬೃಹದಾಕಾರದ ಬಂಡೆಯನ್ನು ಸಂಪೂರ್ಣ ಬೆತ್ತಲೆ ಮಾಡಿರುವ ಖದೀಮರು ಯಾರು? ಇಲ್ಲಿ ಯಾರು ಸಕ್ರಮ? ಯಾರು ಅಕ್ರಮ? ಒಟ್ಟಿನಲ್ಲಿ ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿರುವ ಕುರುವಳ್ಳಿಯ ಹೆಬ್ಬಂಡೆ ಖದೀಮರ ಲೂಟಿಗೆ ಕರಗಿತ್ತಿದ್ದು ಇದನ್ನು ಮಟ್ಡಹಾಕ ಬೇಕಾದ ಭೂ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ಬದುಕಿದ್ದಾರ? ತೀರ್ಥಹಳ್ಳಿ ಭೂ ಮತ್ತು ಗಣಿಗಾರಿಕೆ ಇಲಾಖೆಯ ನವೀನ್ ತಿಂದುಂಡು ತೆಗಿದ್ದು ಏಷ್ಟು? ಎಲ್ಲವನ್ನೂ ನಿರೀಕ್ಷಿಸಿ ಮುಂದಿನ ಭಾಗದಲ್ಲಿ…..?
ಸುಧೀರ್ ವಿಧಾತ ,ಶಿವಮೊಗ್ಗ