ಕೊರಗಜ್ಜ’ ಚಲನಚಿತ್ರದ ಚಿತ್ರಕರದ ಸಮಯ ಗೂಂಡಾಗಳ ಎಂಟ್ರಿ- ಚಿತ್ರೀಕರಣ ಸ್ಥಗಿತಗೊಳಿಸಿದ ಚಿತ್ರ ತಂಡ…!!
ಸುಧೀರ್ ಅತ್ತಾರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಚುತ್ರಕರಣದ ವೇಳೆ ಲಾಂಗ್ ಹಿಡಿದುಕೊಂಡು ಗೂಂಡಾಗಳು ಎಂಟ್ರಿ ಕೊಟ್ಟಿದ್ದಾರೆ ಇದು ಚಿತ್ರಕರಣದ ಭಾಗವಲ್ಲ ನಿಜವಾದ ಗೂಂಡಾಗಳು ಎಂಟ್ರಿ ಕೊಟ್ಟ ಚಿತ್ರ ತಂಡಕ್ಕೆ ದಮ್ ಹಾಕಿದ್ದಾರೆ. ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಮತ್ತು ಶುಭಾ ಪೂಂಜಾ ಸೇರಿದಂತೆ ಮೊದಲಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಹಾಡಿನ ಚಿತ್ರಕರಣ ನೆಡೆಯುತ್ತಿತ್ತು. ಈ ವೇಳೆ ತಲ್ವಾರ್ ಹಿಡಿದುಕೊಂಡು ನುಗ್ಗಿದ ಗೂಂಡಾಗಳ ಗ್ಯಾಂಗ್ ಚಿತ್ರ ತಂಡದವರನ್ನು ಹೆದರಿಸಿ ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದೆ.
ಕುದುರೆಮುಖ ಸಮೀಪದ ಕಳಸದಲ್ಲಿ ಶುಭಾ ಪುಂಜಾ ಅಭಿನಯದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಬಾಲಿವುಡ್ ನ ಗಣೇಶ್ ಆಚಾರ್ಯ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ತಲ್ವಾರ್ ಹಿಡಿದುಕೊಂಡು ಬಂದ ಗುಂಪು ಚಿತ್ರಕರಣದ ಮಧ್ಯೆ ನುಗ್ಗಿದೆ. ಈ ಸಿನಿಮಾ ಮಾಡದಂತೆ ತಡೆಯುವ ಪ್ರಯತ್ನ ಮಾಡಿದೆ. ಹೀಗೆ ಕೊರಗಜ್ಜನ ಹೆಸರಿನ ಚಿತ್ರಕರಣ ಆರಂಭವಾದ ದಿನದಿಂದ ಹಿಡಿದು ಇಲ್ಲಿಯ ತನಕ ಒಂದಲ್ಲ ಒಂದು ರೀತಿ ಅನೇಕ ಬಾರಿ ಚಿತ್ರಕರಣದ ಸಮಯದಲ್ಲಿ ಅಲ್ಲಲ್ಲಿ ಇಂತಹ ತೊಂದರೆಗಳನ್ನು ಸಿನಿಮಾ ತಂಡ ಎದುರಿಸುತ್ತಿದೆ.
ದೈವ ಆರಾಧನೆ ಮಾಡುವ ಸಮುದಾಯದಿಂದ ಈ ರೀತಿ ತೊಂದರೆ ಆಗಿದೆ ಎಂದು ನಿರ್ದೇಶಕ ಸುಧೀರ್ ಅವರು ಹೇಳಿದ್ದಾರೆ. ‘
ಅಕ್ಟೋಬರ್ 27ರಂದು ಶೂಟ್ ನಡೆಯುತ್ತಿತ್ತು. ಬೆಳಿಗ್ಗೆ ಚಿತ್ರಕರಣ ಮುಗಿಸಿದ್ದೇವು ಮಧ್ಯಾಹ್ನ ಊಟದ ನಂತರ ಕೆಲವರು ತಲ್ವಾರ್ ಹಿಡಿದು ಸೆಟ್ಗೆ ಬಂದರು. ಅವರು ಆವೇಶದಲ್ಲಿ ಇದ್ದರು. ನಂತರ ಮತ್ತೊಂದು ತಂಡದವರು ಶೂಟಿಂಗಿನ ಸ್ಥಳವನ್ನು ಪರಿಶೀಲಿಸಿದ್ದಾರೆ. ಆ ಬಳಿಕ ಮೂರನೇ ತಂಡ ಕೂಡ ಬಂತು. ಅಲ್ಲಿ ಬಿಜೆಪಿಯ ನಾಯಕನೊಬ್ಬ ಇದ್ದ ಎಂದು ಸುಧೀರ್ ಮಾಹಿತಿ ನೀಡಿದ್ದಾರೆ.
‘ನನಗೆ ನನ್ನ ಟೀಮ್ ಮುಖ್ಯವಾಗಿತ್ತು ಹೀಗಾಗಿ ತಂಡದ ಜೊತೆ ಹೊರಟೆ. ಮಂಗಳೂರಿನಲ್ಲಿ ಶೂಟ್ ಮಾಡುವಾಗಲೂ ಹೀಗೆಯೇ ಆಗಿತ್ತು. ಭೂತರಾಧನೆ ಕುರಿತು ಸಿನಿಮಾ ಮಾಡಬಾರದು ಎನ್ನುವ ಕಾರಣಕ್ಕೆ ಈ ರೀತಿ ತೊಂದರೆ ಕೊಡುತ್ತಿದ್ದಾರೆ ಅನಿಸುತ್ತದೆ. ಕೊರಗಜ್ಜನ ಬಗ್ಗೆ ಸಿನಿಮಾ ಮಾಡುತ್ತಿರುವ ಕಾರಣದಿಂದ ಈ ರೀತಿ ತೊಂದರೆಗಳನ್ನು ಎದುರಿಸಬೇಕಾಗಿದೆ. ಬಹುಶಃ ಎಲ್ಲರೂ ಈ ಚಿತ್ರವನ್ನು ಚಿತ್ರದ ಕಥೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನಿಸುತ್ತಿದೆ ಎಂದಿದ್ದಾರೆ.
ಸುಧೀರ್ ವಿಧಾತ ,ಶಿವಮೊಗ್ಗ