ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳ ಸುಳಿವು ನೀಡಿದವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಎನ್ಐಎ
ಮಂಗಳೂರು : ಬಿಜೆಪಿ ಯುವ ಮುಖಂಡ ಉತ್ಸಾಹಿ ಯುವಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಇವರಿಗಾಗಿ ಸಾಕಷ್ಟು ಶೋಧ ಕಾರ್ಯ ನೆಡೆಸಿದರು ಆರೋಪಿಗಳ ಸುಳಿವು ಮಾತ್ರ ಇದುವರೆಗೂ ಸಿಕ್ಕಿಲ್ಲ . ಆರೋಪಗಳನ್ನು ಬಂಧಿಸಲು ಬೇಕೆಂದು ಹೊರಟ ಎನ್ಐಎ ತಲೆಮರೆಸಿಕೊಂಡಿರುವ ಆರೋಪಿತರ ಸುಳಿವು ನೀಡಿದವರಿಗೆ ಎರಡಯ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿಯ ಮಾಲಿಕನಾಗಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಕರಾವಳಿ ಭಾಗದ ಕಟ್ಟಾ ಹಿಂದುತ್ವವಾದಿ ಪ್ರಬಲ ಯುವನಾಯಕ ಪ್ರವೀಣ್ ಕುಮಾರ್ ನೆಟ್ಟಾರು ಅವರನ್ನು ಕಳೆದ 2022ರ ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ನಿತ್ಯದಂತೆ ತನ್ನ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದ ವೇಳೆ ಮೊದಲೇ ಸ್ಕೆಚ್ ಹಾಕಿ ಪ್ರವೀಣ್ ಹತ್ಯೆಗೆ ಮೊಹರ್ತ ಫಿಕ್ಸ್ ಮಾಡಿಕೊಂಡು ಹೊಂಚುಹಾಕಿ ಕಾಯುತ್ತಿದ್ದ ಹಂತಕ ಹಂತಕರ ಗ್ಯಾಂಗ್ ಬೈಕಿನಲ್ಲಿ ಬಂದ ಮೂವರು ಹಂತಕರು ತಲ್ವಾರ್‌ನಿಂದ ಏಕಾಏಕಿ ಪ್ರವೀಣ್ ನೆಟ್ಟಾರು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅ ಬಳಿಕ ತಕ್ಷಣವೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ನೆಟ್ಟಾರು ಸಾವನಪ್ಪಿದ್ದರು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು ಹಂತಕರನ್ನು ಬಂದಿಸಿ ಎಂದು ರಾಷ್ಟ್ರಮಟ್ಟದಲ್ಲಿ ಹೋರಾಟ ಪ್ರತಿಭಟನೆಗಳು ನೆಡೆದಿದ್ದವು. ಸಂಪೂರ್ಣ ಕರಾವಳಿ ಪ್ರದೇಶದಲ್ಲಿ ಸೂತಕ ಆವರಿಸಿತ್ತು. ತಕ್ಷಣವೇ
ಈ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎನ್ಐಎಗೆ ವಹಿಸಿತ್ತು. ಈಗಾಗಲೇ ಹಲವರನ್ನು ಎನ್ಐಎ ಬಂಧಿಸಿ ವಿಚಾರಣೆ ನಡೆಸುತ್ತಿದ್ದೆ. ಇನ್ನೂ ಕೆಲವು ಆರೋಪಿಗಳ ಬಂಧನವಾಗದ ಹಿನ್ನಲೆ ಈ ಸಂಬಂಧ ಎನ್‌ಐಎ ರಿವಾರ್ಡ್ ವಾಂಟೆಡ್ ನೋಟಿಸ್ ಅನ್ನು ಬಿಡುಗಡೆ ಮಾಡಿದೆ. ಆರೋಪಿ ನಂ.23 ನೌಷಾದ್‌ನ ಸುಳಿವು ನೀಡಿದವರಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಲೂಕಿನ ಪಡಂಗಡಿ ಗ್ರಾಮದ ನೌಷಾದ್. ಈತ ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತನಾಗಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ ತಲೆಮರೆಸಿಕೊಂಡಿರುವ ಪಿಎಫ್ಐನ ಸದಸ್ಯರಾದ ಇನ್ನಿಬ್ಬರು ಆರೋಪಿಗಳಾದ ಅಬ್ದುಲ್ ನಾಸೀರ್ ಮತ್ತು ಅಬ್ದುಲ್ ರೆಹಮಾನ್ ಅವರ ಸುಳಿವು ನೀಡಿದವರಿಗೂ 2 ಲಕ್ಷ ಬಹುಮಾನ ಘೋಷಿಸಿದೆ.
ಈ ಪ್ರಕರಣ ನೆಡೆದು ವರ್ಷ ಉರುಳಿದರು ಹಂತಕರಲ್ಲಿ ಕೇಲವರು ತಲೆಮರೆಸಿಕೊಂಡಿರುವುದು ದುರಂತವೆ ಹೌದು
ಸುಧೀರ್ ವಿಧಾತ ,ಶಿವಮೊಗ್ಗ