ಕೊರೆವ ಚಳಿಯಲ್ಲೂ ಬೆವರಿಳಿದ ಭ್ರಷ್ಟರು;ರಾಜ್ಯದ್ಯಂತ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ..
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಮುಂಜಾನೆ ದಾಳಿ ನಡೆಸುವ ಮೂಲಕ ಕೊರೆವ ಚಳಿಯಲ್ಲೂ ಭ್ರಷ್ಟರ ಬೇವರಿಳಿಸಿದ ಲೋಕಾಯುಕ್ತ ಅಧಿಕಾರಿಗಳು. ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು. ಬೆಂಗಳೂರಿನಲ್ಲಿ ಒಟ್ಟು 11 ಕಡೆ ದಾಳಿ ನೆಡೆಸಿದ್ದರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಒಂದರಲ್ಲೇ 11 ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು. ಕೆಆರ್ ಪುರದಲ್ಲಿನ ಎಆರ್ ಓ ಚಂದ್ರಪ್ಪ ಬಿರಜ್ಜನವರ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು. ಎಆರ್‌ಒಗೆ ಸಂಬಂಧಪಟ್ಟ ಮೂರು ಕಡೆ ದಾಳಿ ಮಾಡಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. ಬಿಬಿಎಂಪಿ ಹೆಗ್ಗನಹಳ್ಳಿ ವಾರ್ಡ್ ನ ಆರ್.ಆರ್.ನಗರ ವಲಯಾಧಿಕಾರಿಯಾಗಿರುವ ಚಂದ್ರಪ್ಪನ ಕೆ.ಆರ್.ಪುರಂ ನಿವಾಸದಲ್ಲಿ ದಾಳಿ ನಡೆಸಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದೆ.
ಈ ಹಿಂದೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದ ಎಆರ್ ಓ ಚಂದ್ರಪ್ಪ ಲೋಕಾಯುಕ್ತ ಟ್ರ್ಯಾಪ್ ಗೆ ಒಳಗಾಗಿದ್ದ. ಅದರ ಮುಂದುವರಿದ ಭಾಗವಾಗಿ ಲೋಕಾಯುಕ್ತರು ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದಾರೆ ಅಧಿಕಾರಿಗಳು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಚಂದ್ರಪ್ಪ. ಕೆ.ಆರ್.ಪುರಂನಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದು ಇದರಲ್ಲಿ ನಾಲ್ಕು ಮನೆ ಬಾಡಿಗೆ ಕೊಟ್ಟಿದ್ದಾರೆ. ಚಂದ್ರಪ್ಪ. 2 ಮನೆ 5 ಸಾವಿರಕ್ಕೆ ಬಾಡಿಗೆ ,ಇನ್ನು ಎರಡು ಮನೆ 8 ಸಾವಿರಕ್ಕೆ ಬಾಡಿಗೆಗೆ ನೀಡಿರುವ ಮಾಹಿತಿ ಸಿಕ್ಕಿದೆ. ಬಾಡಿಗೆ ಕೊಟ್ಟಿರೋ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಿದ್ದಾರೆ ಲೋಕಾಯುಕ್ತ ಪೊಲೀಸರು.
ಸುಧೀರ್ ವಿಧಾತ ,ಶಿವಮೊಗ್ಗ