Headlines

ಬೆಂಗಳೂರು : ಖಾಕಿ ಮೇಲೆ ಕೈ ಹಾಕಿ ಮಸಣ ಸೇರಿದ್ನಾ ದರ್ಶನ್.! ಲಾಕಪ್‌ನಲ್ಲಿ ಹೆಣವಾದ್ನಾ .!?

ಸೊಣ್ಣೇನಹಳ್ಳಿಯ ಯುವಕ ದರ್ಶನ್ (22) ಸಾವಿಗೆ ಸಂಭವಿಸಿದಂತೆ ನವೆಂಬರ್ 15ರಂದು ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ದರ್ಶನ್‌ಗೆ ಪೊಲೀಸರು ವಿಚಾರಣೆ ಮಾಡುವ ಸಂಧರ್ಭದಲ್ಲಿ ಆತ ಪೊಲೀಸರಿಗೆ ಮಚ್ಚು ತೋರಿಸಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಆತನನ್ನು ಪೊಲೀಸರು ಠಾಣೆಗೆ ಕರತಂದಿದ್ದರಂತೆ ಪೊಲೀಸರು,ಅ ನಂತರ
ರಿಹ್ಯಾಬಿಲಿಟೇಶನ್
ಸೆಂಟರ್‌ಗೆ ಸೇರಿಸಿದ್ದರು. ಆದರೆ, ಗಾಯದಿಂದ ನರಳುತ್ತಿದ್ದ ದರ್ಶನ್‌ಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ರಿಹ್ಯಾಬಿಲಿಟೇಶನ್
ಸೆಂಟರ್ ಮಾಲೀಕರ ಮೇಲೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೃತ ದರ್ಶನ್ ತಾಯಿ ಆಧಿಲಕ್ಷ್ಮಿ ಅವರು ಮಾಧ್ಯಮದವರ ಜೋತೆಗೆ ಮಾತನಾಡಿ, ನನ್ನ ಮಗ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಕುಡಿದು ಗಲಾಟೆ ಮಾಡಿದ್ದಾನೆ ಅಂತ ಕರೆದುಕೊಂಡು ಹೋಗಿದ್ದರು. ಆತನ ಮೇಲೆ ಎಫ್‌ಐಆರ್ ಮಾಡಿ ಜೈಲಿಗೆ ಕಳಿಸುತ್ತೇವೆ ಅಂತ 3 ದಿನ ಠಾಣೆಯಲ್ಲಿ ಇಟ್ಟು ಕೊಂಡಿದ್ದರು. ನಾನು ಠಾಣೆಗೆ ಹೋಗಿ ಜೈಲಿಗೆ ಕಳಿಸಬೇಡಿ ಅಂತ ಕೇಳಿಕೊಂಡು, ಆತನನ್ನು ರಿಹ್ಯಾಬಿಲಿಟೇಶನ್ ಸೆಂಟರ್‌ಗೆ ಹಾಕ್ತಿನಿ ಸಹಾಯ ಮಾಡಿ ಎಂದು ಪೊಲೀಸರಿಗೆ ಕೇಳಿಕೊಂಡಿದ್ದೆ. ಬಳಿಕ ಪೊಲೀಸರೇ ನನ್ನ ಮಗನನ್ನು ನೆಲಮಂಗಲ ಬಳಿಯ ರಿಹ್ಯಾಬಿಲಿಟೇಶನ್ ಸೆಂಟರ್ ‌ನವರು ಯಾರು ಇರಲಿಲ್ಲ.

ಡಾಕ್ಟರ್ ಇಲ್ಲಿ ಬರೋದಕ್ಕೂ ಮುನ್ನ ಸಾವನಪ್ಪಿದ್ದಾನೆ ಎಂದು ಹೇಳಿದರು. ಆತನಿಗೆ ಹೊಡೆದಿರೋ ಗಾಯಗಳು ಇದೆ. ಅವನಿಗೆ ಏನಾಗಿದೆ ಅಂತ ಗೊತ್ತಗಬೇಕಿದೆ.
ರಿಹ್ಯಾಬಿಲಿಟೇಶನ್
ಸೆಂಟರ್‌ಗೆ ಹೋಗುವಾಗ ಸ್ವಲ್ಪ ನಡಿಯೋಕೆ ಆಗ್ತಿರಲಿಲ್ಲ, ಆದರೆ ಸಾಯುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!