Headlines

ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು.

ದತ್ತು ಪಡೆದ ಕುಟುಂಬಗಳು ಮತ್ತು ಜೀವಮಾನಿಕ ಪೋಷಕರಿಗೆ ಸಂಪನ್ಮೂಲಗಳು ಹಾಗೂ ಬೆಂಬಲ ಒದಗಿಸುವುದು.

ದತ್ತು ಪ್ರಕ್ರಿಯೆ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸಲು ಸಮುದಾಯ ಮಟ್ಟದ ಅಭಿಯಾನಗಳು ಹಮ್ಮಿಕೊಳ್ಳಲಾಗುತ್ತಿದೆ

ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿ, ಸಂವಾದ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಇದರ ಉದ್ದೇಶವಾಗಿದೆ.
ಮಕ್ಕಳು ದೇಶದ ಅತ್ಯಂತ ಪ್ರಮುಖ ಆಸ್ತಿ ಅದು ಗಂಡಾಗಲಿ ಹೆಣ್ಣಾಗಲಿ, ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳಾಗಿರಬಹುದು ವಿಶೇಷ ಚೇತನ, ಅಗತ್ಯಗಳುಳ್ಳ. ಅಥವಾ ಸಾಮಾನ್ಯ ಮಕ್ಕಳಾಗಿರಬಹುದು ದೇಶದಲ್ಲಿ ಜನಿಸಿದ ಪ್ರತಿಯೊಂದು ಮಗುವಿಗೂ ಕೂಡ ಸುರಕ್ಷಿತ, ಆರೋಗ್ಯಕರ, ಘನತೆಯುತವಾದ ಬದುಕನ್ನು ಕಲ್ಪಿಸಿಕೊಡುವುದು ಸರ್ಕಾರ ಹಾಗೂ ಸಮುದಾಯದ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಹುಟ್ಟಿದ ಯಾವುದೇ ಮಗುವು ಕೂಡ ಅನಾಥವಾಗಿ ಬದುಕದೆ ಒಂದು ಸುರಕ್ಷಿತವಾದ ಕೌಟುಂಬಿಕ ವಾತಾವರಣದಲ್ಲಿ ಮಗುವಿನ ಪೋಷಣೆ ಆಗಬೇಕಾಗಿದ್ದು ಅದನ್ನು ಕಲ್ಪಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಆ ನಿಟ್ಟಿನಲ್ಲಿ ನವೆಂಬರ್ ತಿಂಗಳ ಈ ದತ್ತು ಮಾಸವನ್ನು ಪ್ರತಿಯೊಬ್ಬ ನಾಗರಿಕರು ಕೂಡ ತಿಳಿದುಕೊಳ್ಳುವುದರ ಮೂಲಕ ಕಾನೂನುಬಾಹಿರ ದತ್ತು ಪ್ರಕ್ರಿಯೆಗಳನ್ನು ಹೋಗಲಾಡಿಸಿ ದತ್ತು ನಿಯಮಾವಳಿಗಳು- 2022. ಬಾಲ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣಾ) ಕಾಯ್ದೆ-2015.
ಹಿಂದೂ ದತ್ತಕ ಕಾಯ್ದೆ – 1956. ಈ ಕಾಯ್ದೆಗಳನ್ನುವಯ
ದತ್ತು ಪ್ರಕ್ರಿಯೆಗೆ ಉತ್ತೇಜನ ನೀಡೋಣ.
ರಾಜ್ಯದಲ್ಲಿ ಒಟ್ಟು 45 ದತ್ತು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಸ್ಥಳೀಯ ವಿಶೇಷ ದತ್ತು ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ. ಅಥವಾ ಮಕ್ಕಳ ಉಚಿತ ಸಹಾಯವಾಣಿ 1098 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು. ಸಂಭವನೀಯ ದತ್ತು ಪಡೆಯಲಿಚ್ಚಿಸಿರುವ ಪೋಷಕರು cara.wcd.gov.in ಪೋರ್ಟಲ್ ಭೇಟಿ ನೀಡುವುದರ ಮೂಲಕ ನೊಂದಾಯಿಸಿಕೊಳ್ಳಬಹುದು.

Leave a Reply

Your email address will not be published. Required fields are marked *

Optimized by Optimole
error: Content is protected !!