Headlines

ಮುಂಬಯಿ : ಧರ್ಮೇಂದ್ರ ಸಾವಿನ ವದಂತಿ: ‘ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ’: ಇಶಾ ಡಿಯೋಲ್ ಪೋಸ್ಟ್, ಮಾಧ್ಯಮ ವರದಿಗಳನ್ನು ಟೀಕಿಸಿದ ಮಡದಿ ಹೇಮಾ ಮಾಲಿನಿ.

ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿರುವ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ ಎಂಬ ವದಂತಿ ಸುದ್ದಿ ವಾಹಿನಿಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟಿ ಹಾಗೂ ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ಹಾಗೂ ಅವರ ಧರ್ಮಪತ್ನಿ ಹೇಮಾ ಮಾಲಿನಿ ಸಾಮಾಜಿಕ ಮಾಧ್ಯಮಗಳ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಮೊದಲಿಗೆ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಧರ್ಮೇಂದ್ರ ಪತ್ನಿ ಹಾಗೂ ಹಿರಿಯ ನಟಿ ಹೇಮಾ ಮಾಲಿನಿ, “ಇದನ್ನು ಕ್ಷಮಿಸಲಾಗುವುದಿಲ್ಲ! ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಬಹುದು.? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿತನ. ದಯವಿಟ್ಟು ಕುಟುಂಬಕ್ಕೆ ಅವರ ಗೌಪ್ಯತೆಗೆ ಸರಿಯಾದ ಗೌರವ ನೀಡಿ” ಎಂದು ಬರೆದಿದ್ದಾರೆ.
ಇದರ ಬೆನ್ನಲ್ಲೇ ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್, ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀತಿ ಬರೆದಿದ್ದಾರೆ. “ಮಾಧ್ಯಮಗಳು ಅತಿಕ್ರಮಣದ ಸುಳ್ಳು ಸುದ್ದಿಯನ್ನು ಹರಡುತ್ತಿವೆ ಎಂದು ತೋರುತ್ತಿದೆ. ನನ್ನ ತಂದೆ ಇನ್ನೂ ಜೀವಂತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದ ಗೌಪ್ಯತೆಗೆ ಎಲ್ಲರೂ ಗೌರವವನ್ನು ನೀಡಿ. ನನ್ನ ತಂದೆ ಶೀಘ್ರವಾಗಿ ಗುಣಮುಖರಾಗಲೆಂದು ಪ್ರಾರ್ಥಿಸುತ್ತಿರುವವರಿಗೆ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್‌ನಲ್ಲಿ ಧರ್ಮೇಂದ್ರ ಎಂತಲೇ ಪ್ರಸಿದ್ಧರಾಗಿರುವ ಧರ್ಮೇಂದ್ರ ಹಿಂದಿ ಚಿತ್ರರಂಗದ ಪ್ರಸಿದ್ದ ನಟರಲ್ಲಿ ಒಬ್ಬರು. ಬಹುಮುಖ ಪ್ರತಿಭೆಯಿಂದ ಹೆಸರುವಾಸಿಯಾಗಿರುವ ಇವರನ್ನು ಬಾಲಿವುಡ್ ಮಂದಿ ‘He-Man’ ಎಂತಲೇ ಕರಯುತ್ತಾರೆ. ಸುಮಾರು 60 ವರ್ಷಗಳಿಗೂ ಹೆಚ್ಚುಕಾಲ ಸಿನಿ ಪ್ರಿಯರನ್ನು ರಂಜಿಸಿರುವ ಧರ್ಮೇಂದ್ರ ಬರೋಬ್ಬರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
1973 ರಲ್ಲಿ ಎಂಟು ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡಿದ್ದ ನಟ ಧರ್ಮೇಂದ್ರ 1987 ರಲ್ಲಿ ಸತತ ಏಳು ಹಿಟ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ವಿಶೇಷ ದಾಖಲೆಯನ್ನೇ ಬರೆದಿದ್ದಾರೆ. ಧರ್ಮೇಂದ್ರ ಅವರಿಗೆ 2012ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಧರ್ಮೇಂದ್ರ ಸಾವಿನ ಸುದ್ದಿಗೆ ಇಶಾ ಡಿಯೋಲ್ ಪ್ರತಿಕ್ರಿಯೆ
ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಹಿರಿಯ ನಟರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಮಾಧ್ಯಮಗಳು ವ್ಯಕ್ತಪಡಿಸುತ್ತಿರುವ ಅತಿಯಾದ ಉತ್ಸಾಹವನ್ನು ಟೀಕಿಸಿದ್ದಾರೆ. “ಮಾಧ್ಯಮಗಳು ಅತಿರೇಕದಲ್ಲಿದ್ದು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ನನ್ನ ತಂದೆ ಸ್ಥಿರರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಅವರು ಬರೆದಿದ್ದಾರೆ. “ನಮ್ಮ ಕುಟುಂಬದವರಿಗೆ ಗೌಪ್ಯತೆಯನ್ನು ನೀಡಲು ನಾವು ಎಲ್ಲರಿಗೂ ವಿನಂತಿಸುತ್ತೇವೆ. ಅಪ್ಪನ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆಗಳಿಗೆ ಧನ್ಯವಾದಗಳು. ಇಶಾ ಡಿಯೋಲ್” ಎಂದು ಅವರು ಬರೆದಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!