Headlines

ವಿಶೇಷ ಲೇಖನ : ನ.1 ರಿಂದ 30 ರವರೆಗೆ ದತ್ತು ಮಾಸಾಚರಣೆ ‘ದತ್ತು’ ಮಗುವಿನ ಜಗತ್ತಿಗೆ ವಿಶೇಷ ‘ಒತ್ತು’

2018-19 ರಿಂದೀಚೆಗೆ ದತ್ತು ಮಾಸಾಚರಣೆಗಳು, ಗ್ರಾ.ಪಂ ಆಶಾ, ಅಂಗನವಾಡಿ ಕಾರ್ಯಕರ್ತೆರಯರು ಮಕ್ಕಳ ರಕ್ಷಣಾ ಘಟಕ, ವಿವಿಧ ಇಲಾಖೆಗಳು, ದೃಶ್ಯ ಮತ್ತು ಸುದ್ದಿ ಮಾಧ್ಯಮಗಳ ಮೂಲಕ ಮೂಡಿಸಲಾದ ಜಾಗೃತಿಯಿಂದಾಗಿ ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಇಲಾಖೆಗೆ ಒಪ್ಪಿಸುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಜಾಗೃತಿಯ ಯಶಸ್ಸನ್ನು ಕಾಣಬಹುದಾಗಿದೆ.

ದತ್ತು ಪಡೆಯುವುದು ಹೇಗೆ :
ಅನಾಥ, ಪರಿತ್ಯಕ್ತ, ಸ್ವಇಚ್ಛೆಯಿಂದ ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ಪಡೆಯಬಹುದಾಗಿದ್ದು ದತ್ತು ಪಡೆಯಲು www.cara.wcd.gov.in ನಲ್ಲಿ ನೋಂದಣಿಯಾಗುವುದು ಕಡ್ಡಾಯವಾಗಿದೆ. ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣಕ್ಕೆ ಪೂರಕವಾದ ದಾಖಲೆಗಳು, ವೈದ್ಯಕೀಯ ತಪಾಸಣಾ ದಾಖಲೆಗಳು, ವಿವಾಹ ದೃಢೀಕರಣ ಪತ್ರ, ಆದಾಯ ದೃಢೀಕರಣಕ್ಕೆ ಸಂಬಧಿಸಿದ ದಾಖಲೆಗಳು, ಏಕಪೋಷಕರಾಗಿದ್ದಲ್ಲಿ ಸಂಬಂಧಿಸಿದ ದಾಖಲೆಗಳು, ಪಾನ್‌ಕಾರ್ಡ್ ಪೋಸ್ಟ್ ಕಾರ್ಡ್ ಭಾವಚಿತ್ರ ನೀಡಬೇಕು. ಕೇರಿಂಗ್ಸ್ನಲ್ಲಿ ನೋಂದಣಿಯಾದ ನಂತರ ಗೃಹ ಅಧ್ಯಯನ ವರದಿ ತಯಾರಿಸುವ ಸಂದರ್ಭದಲ್ಲಿ ನಿಗದಿತ ಮೊತ್ತ ಪಾವತಿಸಬೇಕು.
ಉತ್ತಮ ಆರೋಗ್ಯ, ಆರ್ಥಿಕ ಹಿನ್ನೆಲೆ ಹೊಂದಿದ ದಂಪತಿಗಳ ಒಟ್ಟಾರೆ ಸರಾಸರಿ 110ಕ್ಕೆ ಮೀರದ ಅನ್ಯೋನ್ಯತೆಯ ಜೀವನ ನಡೆಸುತ್ತಿರುವ ಜೈವಿಕ ಮಕ್ಕಳನ್ನು ಹೊಂದಿರುವ/ಹೊಂದಿಲ್ಲದ ದಂಪತಿಗಳು ದತ್ತು ಪಡೆಯಬಹುದು. ಇದಕ್ಕೆ ಕುಟುಂಬದ ಇತರೆ ಸದಸ್ಯರ ಅನುಮತಿ ಇರಬೇಕು.
ದತ್ತು ಪಡೆಯುವ ಪೋಷಕರು ಹಾಗೂ ಮಗುವಿನ ನಡುವೆ 25 ವರ್ಷಗಳ ಅಂತರವಿರಬೇಕು. ಏಕಪೋಷಕ ಪುರುಷ/ಮಹಿಳೆ ಸಂದರ್ಭದಲ್ಲಿ ಕನಿಷ್ಠ 40 ಮತ್ತು ಗರಿಷ್ಠ 55 ವರ್ಷ ವಯೋಮಿತಿಯೊಳಗಿನ ವ್ಯಕ್ತಿಗಳು ದೈಹಿಕ, ಮಾನಸಿಕವಾಗಿ ಆರೋಗ್ಯವಂತರಾಗಿದ್ದು ಆರ್ಥಿಕ ಹಿನ್ನೆಲೆಯುಳ್ಳ ಬಂಧು ಬಾಂಧವರ ಉತ್ತಮ ಸಹಕಾರ ಇರುವವರು ಪಡೆಯಬಹುದು. ಆದರೆ ಅವಿವಾಹಿತ ಅಥವಾ ಏಕಪೋಷಕ ಪುರುಷರು ಹೆಣ್ಣು ಮಗುವನ್ನು ದತ್ತು ಪಡೆಯಲು ಅವಕಾಶವಿಲ್ಲ.
ಜೈವಿಕ ಮಕ್ಕಳನ್ನು ಹೊಂದಿರುವ ದಂಪತಿಗಳು ಮಕ್ಕಳನ್ನು ದತ್ತು ಪಡೆಯಬಹುದಾಗಿದ್ದು ಎರಡು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ದಂಪತಿಗಳು ದತ್ತು ಪಡೆಯುವ ಸಂದರ್ಭದಲ್ಲಿ ಅವರಿಗೆ ವಿಶೇಷ ಅಗತ್ಯವಿರುವ ಮಕ್ಕಳಿಗೆ ಮಾತ್ರ ಪರಿಗಣಿಸಲಾಗುತ್ತದೆ.
ದತ್ತು ಪಡೆಯಲು ನಿರೀಕ್ಷಿಸುವ ದಂಪತಿಗಳ ವರಮಾನವು ಮಗುವನ್ನು ಉತ್ತಮವಾಗಿ ಬೆಳೆಸಲು ಪೂರಕವಾದ ಉತ್ತಮವಾದ ಆದಾಯದ ಮೂಲಗಳನ್ನು ಹೊಂದಿರಬೇಕು.
ದತ್ತು ಪಡೆಯುವ ಸಂಭವನೀಯ ದತ್ತು ಪೋಷಕರು ದತ್ತು ಪಡೆಯಲು ನೋಂದಣಿಯಾಗುವ ಸಂದರ್ಭದಲ್ಲಿ ಮಗುವಿನ ಲಿಂಗ ಆಯ್ಕೆ ಮಾಡುವ ಅವಕಾಶವಿದ್ದು ಎರಡು ಅವಳಿ ಮಕ್ಕಳು, ಸೋದರಿ/ಸೋದರರಿದ್ದಾಗ ಮೂರು ಮಕ್ಕಳನ್ನು ದತ್ತು ಪಡೆಯಬಹುದು.
ಮೊದಲನೇ ಹಂತದ ಸಂಬಂಧಿಕರ ಮಕ್ಕಳನ್ನು ಸಹ ಪರಸ್ಪರ ಒಪ್ಪಿಗೆಯನುಸಾರ ದತ್ತು ಪಡೆಯಲು ಅವಕಾಶವಿದ್ದು, ಸದರಿ ಸಂಬಂಧಿತ ಪೋಷಕರು ಮಕ್ಕಳ ಕಲ್ಯಾಣ ಸಮಿತಿಯ ಅನುಮೋದನೆ ಪಡೆದು ಕೇರಿಂಗ್ಸ್ನಲ್ಲಿ ನೋಂದಣಿ ಮಾಡಿಕೊಂಡು ದತ್ತು ಪಡೆಯಬಹುದಾಗಿದೆ. ಹಾಗೂ ವಿಕಲಚೇತನ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪೋಷಕರು ಮುಂದೆ ಬಂದರೆ ಅಂತಹ ಮಕ್ಕಳನ್ನು ಸ್ವದೇಶಿ/ವಿದೇಶಿ ದತ್ತು ಸಂಸ್ಥೆಗಳ ಮೂಲಕ ದತ್ತು ನೀಡಲು ಅವಕಾಶವಿದೆ.
ಮಕ್ಕಳು ಬೇಡವಾದಲ್ಲಿ ತೊಟ್ಟಿಲಿಗೆ ಹಾಕಿ :
ನವಜಾತ ಶಿಶುಗಳು ಬೇಡವಾದಲ್ಲಿ ನಿರ್ಜನ ಪ್ರದೇಶಗಳ ಪೊದೆಗಳು, ಚರಂಡಿ ಮತ್ತಿತರೆಡೆ ಎಸೆಯುವ ಬದಲು ಜಿಲ್ಲೆಯ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಸರ್ಕಾರಿ ಬಾಲಕಿಯರ, ಬಾಲಕರ ಬಾಲಮಂದಿರ, ದ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಆವರಣದಲ್ಲಿರುವ ವಿಶೇಷ ಸರ್ಕಾರಿ ದತ್ತು ಕೇಂದ್ರ ಇಲ್ಲಿ ಅಳವಡಿಸಲಾಗಿರುವ ಮಮತೆಯ ತೊಟ್ಟಿಲುಗಳಿಗೆ ಹಾಕಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿದೆ.
151 ಮಕ್ಕಳ ಕಾನೂನುಬದ್ದ ದತ್ತು : 2015 ರಿಂದ 2025 ನೇ ಸಾಲಿನವರೆಗೆ ಇಲಾಖೆಗೆ 174 ಪರಿತ್ಯಕ್ತ, ಅನಾಥ, ಒಪ್ಪಿಸಲ್ಪಟ್ಟ ಮಕ್ಕಳು ದಾಖಲಾಗಿದ್ದು 151 ಮಕ್ಕಳನ್ನು ಕಾನೂನುಬದ್ದವಾಗಿ ದತ್ತು ನೀಡಲಾಗಿದೆ.

– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು, ಶಿವಮೊಗ್ಗ

  • ಮಂಜುನಾಥ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!