ಶಿವಮೊಗ್ಗ : ಹಿರಿಯ ಪತ್ರಕರ್ತ ಭದ್ರಾವತಿಯ ರವೀಂದ್ರನಾಥ್ (ಬ್ರದರ್) ಅವರ ಚಿಕಿತ್ಸೆಗಾಗಿ
ಆರ್ಥಿಕ ನೆರವು ನೀಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ, ಹಿರಿಯ ಪತ್ರಕರ್ತ, ಭದ್ರಾವತಿಯ ರವೀಂದ್ರನಾಥ್ (ಬ್ರದರ್ ) ಅವರ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ನೀಡಲಾಯಿತು..
ಈ ಸಂಬಂಧದ ಚೆಕ್ ನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್ ಅವರು, ರವೀಂದ್ರ ನಾಥ್ ಅವರಿಗೆ ಹಸ್ತಾಂತರಿಸಿದರು..
ಈ ನೆರವಿಗಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಭದ್ರಾವತಿ ತಾಲ್ಲೂಕು ಘಟಕವು ಮನವಿ ಮಾಡಿತ್ತು.

ಅವರ ಮನವಿಗೆ ಸ್ಪಂದಿಸಿದ ಜಿಲ್ಲಾ ಸಂಘವು ರಾಜ್ಯ ಸಂಘಕ್ಕೆ ಶಿಫಾರಸ್ಸು ಮಾಡಿತ್ತು. ಜೊತೆಗೆ ಜಿಲ್ಲಾ ಸಂಘದಿಂದಲೂ ಸಹ ಆರ್ಥಿಕ ನೆರವು ನೀಡಲಾಗಿತ್ತು..
ಈ ನೆರವಿಗಾಗಿ, ರವೀಂದ್ರ ನಾಥ್ ಅವರು, ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಅಧ್ಯಕ್ಷ ಕೆ. ವಿ. ಶಿವಕುಮಾರ್, ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಸಂಘದ ಎಲ್ಲ ಪಾದಾಧಿಕಾರಿಗಳು, ನಿರ್ದೇಶಕರು ಹಾಗೂ ಭದ್ರಾವತಿ ತಾಲೂಕು ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

