ಭದ್ರಾವತಿ : ಹಳೆ ವೈಷಮ್ಯ ಹಿನ್ನೆಲೆ ಭದ್ರಾವತಿ ಶಾರೂಖ್ನನ್ನು ಕೊಲೆ ಮಾಡಿದ ಹಂದಿ ರಮೇಶ ಮತ್ತು ಸಹಚರರಿಗೆ ಅಜೀವ ಸೆರೆವಾಸ ಶಿಕ್ಷೆ ನೀಡಿದ ನ್ಯಾಯಾಲಯ.
ಹಂದಿ ರಮೇಶ ಮತ್ತು ಆತನ ಸಹಚರರು ಸೇರಿ ಹಳೆಯ ವೈಷಮ್ಯದಿಂದ ಶಾರೂಖ್ನನ್ನು ಕೊಲೆ ಮಾಡಿರುತ್ತಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಮೃತನ ತಂದೆ ನೀಡಿದ ದೂರಿನ ಮೇರೆಗೆ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0100/2020 ಕಲಂ 302, 201,120(b), 143,147, 144, 148 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತದೆ…..

news.ashwasurya.in
ಅಶ್ವಸೂರ್ಯ/ಭದ್ರಾವತಿ : ಭದ್ರಾವತಿಯ ಹನುಮಂತನಗರದ ವಾಸಿ 26 ವರ್ಷದ ಶಾರುಖ್ ಖಾನ್ ಹಾಗೂ ಅದೇ ಏರಿಯಾದ ವಾಸಿಯಾದ ಹಂದಿ ರಮೇಶ ಮತ್ತಿತರರಿಗೂ ಹಣದ ವಿಚಾರವಾಗಿ ಗಲಾಟೆಯಾಗಿದ್ದು ಸೆ,30 30,2020 ರಂದು ರಾತ್ರಿ ರಮೇಶ ಅಲಿಯಾಸ್ ಹಂದಿ ರಮೇಶ ಮತ್ತಿತರರು ಶಾರೂಖ್ ನ ಮನೆಯ ಬಳಿ ಬಂದು ಶಾರೂಕ್ ಅನ್ನು ಬಿಡುವುದಿಲ್ಲ ಸಾಯಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿದ್ದು,


ನಂತರ ಹಂದಿ ರಮೇಶ ಮತ್ತು ಆತನ ಸಹಚರರು ಸೇರಿ ಹಳೆಯ ವೈಷಮ್ಯದಿಂದ ಶಾರೂಖ್ನನ್ನು ಕೊಲೆ ಮಾಡಿರುತ್ತಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಮೃತನ ತಂದೆ ನೀಡಿದ ದೂರಿನ ಮೇರೆಗೆ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0100/2020 ಕಲಂ 302, 201,120(b), 143,147, 144, 148 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತದೆ.

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ರಾಘವೇಂದ್ರ ಕಾಂಡಿಕೆ ಸಿಪಿಐ ಭದ್ರಾವತಿ ನಗರ ವೃತ್ತ ರವರು..
ತನಿಖಾಧಿಕಾರಿ ರಾಘವೇಂದ್ರ ಕಾಂಡಿಕೆ ಸಿಪಿಐ

ತನಿಖೆ ಕೈಗೊಂಡು ಆರೋಪಿತರಾದ A1 ರಮೇಶ @ ಹಂದಿ ರಮೇಶ 44 ವರ್ಷ, ಹೊಸಮನೆ ಭದ್ರಾವತಿ, A2.ವೆಂಕಟರಾಮ 35 ವರ್ಷ ಹನುಮಂತನಗರ ಭದ್ರಾವತಿ, A3. ಚಂದ್ರ 37 ವರ್ಷ, ಹನುಮಂತನಗರ ಭದ್ರಾವತಿ, A4. ಕಾರ್ತಿಕ್ 24 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, A5. ಮಧುಸೂದನ್ 28 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, A6. ರಮೇಶ 37 ವರ್ಷ ಸತ್ಯ ಸಾಯಿ ನಗರ ಭದ್ರಾವತಿ, A7. ನಾಗರಾಜ 25 ವರ್ಷ, ಹೊಸಮನೆ ಭದ್ರಾವತಿ, A8. ಸಿದ್ದಪ್ಪ 48 ವರ್ಷ ಸತ್ಯ ಸಾಯಿ ನಗರ ಭದ್ರಾವತಿ,ಇವರುಗಳ
ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಕೆ ಮಾಡಿರುತ್ತಾರೆ.


ಘನ ನ್ಯಾಯಾಲಯದಲ್ಲಿ ಸರ್ಕಾರದ ಪರಾ ಶ್ರೀಮತಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರವರು,ಪ್ರಕರಣದ ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಸೆ, 29,2025 ರಂದು ಎಲ್ಲಾ 8 ಜನ ಆರೋಪಿಗಳಿಗೆ ಅಜೀವ ಸೆರೆವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.




