BREAKING NEWS : ಕರೂರ್ ಕಾಲ್ತುಳಿತ ಪ್ರಕರಣ ಟಿವಿಕೆ ಜಿಲ್ಲಾ ಕಾರ್ಯದರ್ಶಿ ಮತಿಯಾಳಗನ್ ಬಂಧನ.! ಟಿವಿಕೆ ಪಕ್ಷದ ವಿರ್ಪಟ್ಟು ಗ್ರಾಮದ ಕಾರ್ಯದರ್ಶಿ ಅಯ್ಯಪ್ಪನ್ ಆತ್ಮಹತ್ಯೆಗೆ ಶರಣು.!
news.ashwasurya.in
ಅಶ್ವಸೂರ್ಯ/ ಕರೂರು(ತಮಿಳುನಾಡು): ಟಿವಿಕೆ ಪಕ್ಷದ ಅಧ್ಯಕ್ಷರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂನ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ ರಾತ್ರಿ ವರದಿಯಾಗಿದೆ.

ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿ 60 ಜನರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ಹೆಸರಿಸಲಾದ ಮೂವರು ಟಿವಿಕೆ ಪದಾಧಿಕಾರಿಗಳಲ್ಲಿ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ವಿ.ಪಿ. ಮತಿಯಾಳಗನ್ ಕೂಡ ಒಬ್ಬರಾಗಿದ್ದರು.
ಟಿವಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಮತ್ತು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಎಫ್ಐಆರ್ನಲ್ಲಿ ಹೆಸರಿಸಲಾದ ಇತರ ಇಬ್ಬರು ಪಕ್ಷದ ಪದಾಧಿಕಾರಿಗಳಾಗಿದ್ದಾರೆ.
ಕರೂರು ಕಾಲ್ತುಳಿತ ದುರಂತದಿಂದ ಮನನೊಂದು ನಟ ವಿಜಯ್ ಪಕ್ಷದ ಮುಖಂಡ ಆತ್ಮಹತ್ಯೆಗೆ ಶರಣು.!

ಕರೂರು ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತಕ್ಕೆ 41 ಮಂದಿ ಉಸಿರು ಚಲ್ಲಿದ ಘಟನೆಯಿಂದ ಮನನೊಂದು ನಟ ವಿಜಯ್ ಪಕ್ಷದ ಮುಖಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಟಿವಿಕೆ ಪಕ್ಷದ ವಿರ್ಪಟ್ಟು ಗ್ರಾಮದ ಕಾರ್ಯದರ್ಶಿ ಅಯ್ಯಪ್ಪನ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.!
ಕರೂರು ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು ಕಾಲ್ತುಳಿತದ ದುರಂತದಿಂದ ಮನನೊಂದು ನೇಣಿಗೆ ಶರಣಾಗುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕರೂರಿನಲ್ಲಿ ನಟ ವಿಜಯ್ ರ್ಯಾಲಿಯ
ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು…


