ಹೈದರಾಬಾದ್ : ನಾನು ಬಾಲ್ಯದಲ್ಲಿ ಕೇಳಿದ ದಂತ ಕಥೆಗಳನ್ನ ತೆರೆ ಮೇಲೆ ಕಟ್ಟಿಕೊಟ್ಟ ಡೈರೆಕ್ಟರ್! ರಿಷಭ್
ಕರಾವಳಿಯ ಪಂಜುರ್ಲಿ ಕಥೆ ಅಮ್ಮ ಹೇಳ್ತಿದ್ರು, ರಿಷಬ್ ಅದನ್ನು ತೆರೆ ಮೇಲೆ ತೋರಿಸಿದ್ರು! ಜೂನಿಯರ್ ಎನ್ಟಿಆರ್ ಹೊಗಳಿಕೆ ಮಾತುಗಳು..

ಅಶ್ವಸೂರ್ಯ/ಹೈದರಾಬಾದ್ : ನಾನು ಬಾಲ್ಯದಲ್ಲಿ ಕೇಳಿದದಂತಹ ಕಥೆಗಳನ್ನ ತೆರೆ ಮೇಲೆ ಕಟ್ಟಿಕೊಟ್ಟ ಡೈರೆಕ್ಟರ್! ಅಪರೂಪದ ವ್ಯಕ್ತಿ ರಿಷಬ್ ಶೆಟ್ಟಿ ,
ರಿಷಬ್ ಶೆಟ್ಟಿ ತುಂಬಾನೆ ಅಪರೂಪದ ವ್ಯಕ್ತಿ ಆಗಿದ್ದಾರೆ. ನಟ-ನಿರ್ದೇಶಕರಲ್ಲಿಯೇ ಇವರು ತುಂಬಾನೆ ರೇರ್ ಬ್ರೀಡ್ ಆಗಿದ್ದಾರೆ. ಇವರು ಇಲ್ಲದೆ ಇದ್ದರೆ ಕಾಂತಾರ ಆಗ್ತಾನೇ ಇರಲಿಲ್ಲ. ಬಾಲ್ಯದಲ್ಲಿ ನಮ್ಮ ಅಮ್ಮಮ್ಮ ಕಥೆ ಹೇಳುತ್ತಿದ್ದರು. ನಮ್ಮದು ಕುಂದಾಪುರ ಅಂತ ಊರು. ಅಲ್ಲಿ ಗುಳಿಗ ಅಂತ ದೈವ ಇದೆ.
ಕಾಂತಾರ ಒನ್ ಚಿತ್ರಕ್ಕೆ ರಿಷಬ್ ಶೆಟ್ಟಿ ಶ್ರಮದ ಜೊತೆಗೆ ಪಂಜುರ್ಲಿ ಅನ್ನೋ ದೈವವೂ ಇದೆ. ಅದರ ಶಕ್ತಿ ಹೇಗೆ ಇರುತ್ತೆ ಅಂತೆಲ್ಲ ಹೇಳುತ್ತಿದ್ದರು. ಆಗ ಅದನ್ನೆಲ್ಲ ಕಲ್ಪಿಸಿಕೊಂಡು ಖುಷಿ ಪಡ್ತಾ ಇದ್ದೆ. ಅದೆಲ್ಲ ನಿಜಕ್ಕೂ ಇರುತ್ತಾ ಅಂತ ಆಶ್ಚರ್ಯ ಪಡ್ತಾ ಇದ್ದೆ. ಆದರೆ ಕಾಂತಾರ ಚಿತ್ರ ನೋಡಿದಾಗ ನಾನು ಕೇಳಿದ ಆ ಕಥೆಗಳು ತೆರೆ ಮೇಲೆ ಬಂದವು. ಅಂತಹ ಈ ಚಿತ್ರವನ್ನ ರಿಷಬ್ ಶೆಟ್ಟಿ ಬಿಟ್ಟರೆ ಯಾರೂ ಮಾಡೋಕೆ ಆಗೋದಿಲ್ಲ.

ಕಾಂತಾರ ಒನ್ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಇಲ್ಲಿ ರಿಷಬ್ಗೆ ತುಂಬಾನೆ ಸಪೋರ್ಟ್ ಮಾಡಿದ್ದಾರೆ. ರಿಷಬ್ ಬೆನ್ನೆಲುಬಾಗಿ ನಿಂತುಕೊಂಡಿದ್ದಾರೆ. ಹಾಗಾಗಿಯೇ ರಿಷಬ್ ಶೆಟ್ಟಿ ಅವರಿಗೆ ಕಾಂತಾರ ಒನ್ ಚಿತ್ರ ಮಾಡೋಕೆ ಸಾಧ್ಯವಾಗಿದೆ.
ಕಾಂತಾರ ಚಿತ್ರದ ರಿಷಬ್ ಶೆಟ್ಟಿ ತಮ್ಮೂರಿನಲ್ಲಿರೋ ಒಂದು ದೇವಸ್ಥಾನಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅದು ತುಂಬಾನೆ ವಿಶೇಷವಾದ ದೇವಸ್ಥಾನವೇ ಆಗಿದೆ. ಮಂಡಿವರೆಗೂ ನೀರಿನಲ್ಲಿಯೇ ಹೋಗ್ಬೇಕು. ಆ ರೀತಿಯ ಈ ದೇವಸ್ಥಾನಕ್ಕೆ ಹೋಗಲು ದಾರಿನೇ ಇಲ್ಲ. ರಿಷಬ್ ಶೆಟ್ಟಿ ಅಪರೂದಪ ವ್ಯಕ್ತಿ ಎಂದ ಜೂನಿಯರ್ ಎನ್ಟಿಆರ್!
ಆದರೆ, ರಿಷಬ್ ಶೆಟ್ಟಿ ಅದನ್ನ ಸಾಧ್ಯವಾಗಿಸಿದರು. ನಮ್ಮನ್ನ ತಮ್ಮ ಫ್ಯಾಮಿಲಿ ರೀತಿನೇ ನೋಡಿಕೊಂಡರು. ನಮ್ಮ ಅಮ್ಮನ ಕನಸನ್ನ ಈಡೇರಿಸಿದ್ರು ಅಂತಲೇ ಜೂನಿಯರ್ ಎನ್ಟಿಆರ್ ಹೇಳಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ ಒನ್ ಚಿತ್ರ ಇದೇ ಅಕ್ಟೋಬರ್-2 ರಂದು ತೆರೆಗೆ ಬರ್ತಿದೆ. ಎಲ್ಲರೂ ಹೋಗಿ ಈ ಚಿತ್ರ ನೋಡಿ ಅಂತಲೇ ಜೂನಿಯರ್ ಎನ್ಟಿಆರ್ ಹೇಳಿಕೊಂಡಿದ್ದಾರೆ.
ಜೂನಿಯರ್ ಎನ್ಟಿಆರ್ ಅವರಿಗೆ ರಿಷಬ್ ಶೆಟ್ರು ಇಲ್ಲಿ ಶಿವನ ಮೂರ್ತಿ ಇರೋ ಒಂದು ವಿಶೇಷ ಗಿಫ್ಟ್ ಕೊಟ್ಟರು. ಈ ಮೂಲಕ ಹೈದ್ರಾಬಾದ್ ಅಲ್ಲಿ ನಡೆದ ತೆಲುಗು ಪ್ರೀ-ರಿಲೀಸ್ ಇವೆಂಟ್ಗೆ ಬಂದ ಜೂನಿಯರ್ ಎನ್ಟಿಆರ್ ಅವರಿಗೆ ಧನ್ಯವಾದಗಳನ್ನೂ ಹೇಳಿದರು.
ಒಟ್ಟಿನಲ್ಲಿ ಕರಾವಳಿ ಟು ಹೈದರಾಬಾದ್ ತೆಲುಗು ಕಾಂತಾರ 1 ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ಅದ್ದೂರಿಯಾಗಿ ನೆಡೆಯಿತು….


