ಶಿವಮೊಗ್ಗ ಈದ್ ಗಲಾಟೆಗೆ ಸಂಬಂದಿಸಿದಂತೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕರಾದ ಅಭಯ್ ಪ್ರಕಾಶ್ ಸೋಮನಾಳ್ ಮತ್ತು ಮೂವರು ಪೋಲಿಸ್ ಕಾನ್ಸ್ಟೇಬಲ್ ಅಮಾನತು
ಶಿವಮೊಗ್ಗ: ಇದೇ ಅಕ್ಟೋಬರ್ ಒಂದರೊಂದು ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮಿಲಾದ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ ಗಲಾಟೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಕೆಲ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದರು ದುಷ್ಕರ್ಮಿಗಳು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಕೂಡಲೇ ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದರು. ಈ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕಾನ್ಸ್ಟೇಬಲ್ಗಳ ಜೋತೆಗೆ ವೃತ್ತ ನಿರೀಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಶಿವಮೊಗ್ಗ ಎಸ್ಪಿ ಜಿ.ಕೆ ಮಿಥುನ್ ಕುಮಾರ್ ಸಲ್ಲಿಸಿದ ವರದಿ ಆಧರಿಸಿ, ರಾಗಿಗುಡ್ಡ ಗಲಾಟೆ ನಿಭಾಯಿಸಲು ವಿಫಲವಾದ ಹಿನ್ನಲೆಯಲ್ಲಿ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅವರು ಪೋಲಿಸ್ ಠಾಣಾಧಿಕಾರಿ ( ವೃತ್ತ ನಿರೀಕ್ಷಕರು ) ಅಭಯ ಪ್ರಕಾಶ್ ಸೇರಿದಂತೆ ಕಾನ್ಸ್ಟೇಬಲ್ಗಳಾದ ಕಾಶಿನಾಥ್, ರಂಗನಾಥ್ ಹಾಗೂ ಶಿವರಾಜ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯಂತೆ! ಈ ಗಾದೆ ಮಾತಿಗೆ ಪುಷ್ಠಿ ಸಿಕ್ಕಿದ್ದು ಶಿವಮೊಗ್ಗದ ಪೋಲಿಸ್ ಇಲಾಖೆಯಲ್ಲಿ!! ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯೊಬ್ಬರ ತಲೆ ದಂಡವಾಗಿದೆ. ಮಾಡದ ತಪ್ಪಿಗೆ ಶಿಕ್ಷೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟು ದಿನ ಇಲಾಖೆ ಇಲಾಖೆ ಎಂದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಕ್ರಿಮಿನಲ್ ಗಳಿಗೆ ಸಿಂಹಸ್ವಪ್ನವಾಗಿದ್ದ ಅಭಯ್ ಪ್ರಕಾಶ್ ಸೋಮನಾಳ್ ಮಾಡದ ತಪ್ಪಿಗೆ ಮಂಡಿ ಉರುವಂತಹ ಪರಿಸ್ಥಿತಿ ಎದುರಾಗಿದೆ. ಯಾಕೆ ಈ ಶಿಕ್ಷೆ? ಶಿವಮೊಗ್ಗದ ಕೇಲವು ಕಿಡಿಗೇಡಿಗಳಿಗೆ ಗಲಾಟೆಗೆ ಯಾವುದೇ ವಿಷಯ ಬೇಕಿಲ್ಲ ನಗರದ ನಾಗರಿಕರ ನೆಮ್ಮದಿಯನ್ನು ಹಾಳುಗೇಡವಲು ಹೊಂಚು ಹಾಕಿ ಕುಳಿತಿರುತ್ತಾರೆ. ಯಾವುದೇ ಸಮಯದಲ್ಲದಾರು ಯಾವುದೇ ವಿಷಯಕ್ಕಾದರು ಗಲಾಟೆಯಾಗುವ ಸಂಧರ್ಭವೆ ಹೆಚ್ಚು ಶಿವಮೊಗ್ಗ ನಗರದಲ್ಲಿ. ಯಾವ ಕಾರಣಕ್ಕೂ ಶಿವಮೊಗ್ಗ ನಗರದಲ್ಲಾಗುವ ಗಲಾಟೆಯನ್ನು ನೀರಿಕ್ಷಿಸಲು ಸಾಧ್ಯವೇ ಇಲ್ಲ. ಉದಾಹರಣೆಗೆ ಗಲಾಟೆ ಆಗಬಹುದೆಂಬ ಸಣ್ಣ ಅನುಮಾನವಿದ್ದ ಹಿಂದೂ ಮಹಾಸಭಾ ಗಣಪತಿ ಯಾವ ಆತಂಕವಿಲ್ಲದೆ ಸೈಲೆಂಟಾಗಿ ಭೀಮನ ಮಡಿಲು ಸೇರಿತು ಇನ್ನೇನು ಶಿವಮೊಗ್ಗ ಶಾಂತ ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಶಾಂತಿನಗರದಲ್ಲಿ ( ರಾಗಿಗುಡ್ಡ ) ಈದ್ ಮಿಲಾನ್ ಮೆರವಣಿಗೆ ಸಂಧರ್ಭದಲ್ಲಿ ಯಾವನೋ ಒಬ್ಬ ಕಿಡಿಗೇಡಿ ತನ್ನ ತೆವಲಿಗೆ ಕಲ್ಲುತೂರಿ ಗಲಾಟೆಗೆ ಕಾರಣವಾಗುತ್ತಾನೆಂದರೆ ಎನು ಹೇಳಬೇಕು? ಶಾಂತಿನಗರದಲ್ಲಿ ಆಗಿದ್ದು ಅದೇ ಯಾವನೊ ಒಬ್ಬ ಕಿಡಿಗೇಡಿ ಎಸೆದ ಕಲ್ಲು ಶಾಂತಿನಗರವನ್ನೆ ( ರಾಗಿಗುಡ್ಡ ) ಕೋಮು ದಳ್ಳುರಿಗೆ ದೂಡಿ ಕೋಮು ಘರ್ಷಣೆಗೆ ಕಾರಣವಾಗಿತ್ತು. ಒಂದಷ್ಟು ಟೆನ್ಷೇನ್ ನಾಗರಿಕರ ನೆಮ್ಮದಿ ಹಾಳುಗೇಡವಿದ ದುಷ್ಕರ್ಮಿಗಳನ್ನು ಪೋಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನೇನು ಶಾಂತಿನಗರ ಸಹಜ ಸ್ಥಿತಿಗೆ ತಲುಪಿದೆ ಮತ್ತೆ ಶಾಂತಿ ಕಾಪಾಡುವಲ್ಲಿ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ ಎನ್ನುವ ಹೊತ್ತಿಗೆ
ಮನಸ್ಸಿಗೆ ತುಂಬಾ ನೋವುಂಟು ಮಾಡುವ ಆದೇಶ ಒಂದು ಪೋಲಿಸ್ ಇಲಾಖೆಯಿಂದ ಹೊರಬಿದ್ದಿದೆ!! ಶಿವಮೊಗ್ಗ ಗ್ರಾಮಾಂತರ ಠಾಣೆಯ ಸಿಪಿಐ ( ಠಾಣಾ ಅಧಿಕಾರಿ ) ಅಭಯ್ ಪ್ರಕಾಶ್ ಸೋಮನಾಳ್ ಅವರನ್ನು ಕರ್ತವ್ಯ ಲೋಪ ಹಿನ್ನಲೆಯಲ್ಲಿ ಅಮಾನತ್ತು ಮಾಡಲಾಗಿದೆ ಎನ್ನುವ ವಿಷಯ ಕೇಳಿ ಒಂದು ಕ್ಷಣಕ್ಕೆ ಶಿವಮೊಗ್ಗದ ಜನತೆ ಮೌನಕ್ಕೆ ಜಾರಿದ್ದಾರೆ. ಅದು ಅಭಯ್ ಅವರನ್ನು ಹತ್ತಿರದಿಂದ ನೋಡಿದಂತವರು.ಇವರದು ಯಾವ ಮಟ್ಟದ ದಕ್ಷತೆ ಎಂದರೆ ನನ್ನ ಬಾಯಿಂದ ಕೇಳುವ ಬದಲು ಅವರ ಜೋತೆಗೆ ಕ್ರಿಮಿನಲ್ ಗಳನ್ನು ಬೆನ್ನಟ್ಟಿ ಹೊರ ರಾಜ್ಯಗಳಿಗೆ ಹೋದಂತ ಪೋಲಿಸರನ್ನೆ ಒಮ್ಮೆ ಕೇಳಿ ಆಗ ಅರಿವಿಗೆ ಬರುವುದು ಒಬ್ಬ ಪ್ರಮಾಣಿಕ ಅಧಿಕಾರಿಯ ಕರ್ತವ್ಯ ನಿಷ್ಠೆ. ಪ್ರತಿಯೊಬ್ಬ ಪತ್ರಕರ್ತರನ್ನು ಕೇಳಿ ನೋಡಿ ಅಭಯ್ ಪ್ರಕಾಶ್ ಸೋಮನಾಳ್ ಅವರ ಕೆಲಸದ ಮೇಲಿನ ನಿಷ್ಠೆಯನ್ನು. ತನ್ನ ಕೈಯಿಂದಲೇ ಹಣ ಖರ್ಚು ಮಾಡಿ ಕಮ್ಮಿ ಆದರೆ ಮತ್ತೆ ಅವರ ತಂದೆಯವರಿಂದ ಹಣ ಹಾಕಿಸಿಕೊಂಡು ಖರ್ಚುಮಾಡಿ ಕ್ರಿಮಿನಲ್ ಗಳ ಹೆಡೆಮುರಿ ಕಟ್ಟುವಂತ ದಕ್ಷ ಅಧಿಕಾರಿ ಅಭಯ್ ಪ್ರಕಾಶ್ ಸೋಮನಾಳ್. ಇವತ್ತು ಮಾಡಿದ ಪ್ರಮಾಣಿಕ ಸೇವೆಗೆ ಇಲಾಖೆ ಸರಿಯಾದ ಮರ್ಯಾದೆಯನ್ನೆ ನೀಡಿ ಗೌರವಿಸಿದೆ ಎಂದರೆ ತಪ್ಪಾಗಲಾರದು! ಇಷ್ಟೇ ನಮ್ಮ ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕತನಕ್ಕೆ ಸಿಗುವ ದೊಡ್ಡ ಗೌರವ ಇದೆ. ಇದನ್ನು ನಾನು ಇತ್ತೀಚೆಗೆ ನೋಡುತ್ತಿಲ್ಲ ನಾನು ಕಣ್ಣು ಬಿಟ್ಟ ಕ್ಷಣದಿಂದ ನನ್ನ ತಂದೆಯ ಶವವನ್ನು ಹೆಗಲ ಮೇಲೆ ಹೊತ್ತೊಯ್ಯುವ ತನಕ ಅತಿ ಹತ್ತಿರದಿಂದ ಬಲ್ಲೆ ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕನಾಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಾಗಿರಲಿ ಮತ್ತು ಮುಖ್ಯ ಪೇದೆಯಿಂದ ಹಿಡಿದು ಪೋಲಿಸರು ರಾತ್ರಿ ಹಗಲೆನ್ನದೆ ಕರ್ತವ್ಯ ನಿರ್ವಹಿಸಿದರು ಸಿಗುವ ಗೌರವವನ್ನು ಕಣ್ಣಾರೆ ನೋಡಿದ್ದೇನೆ. ಈ ಪ್ರಮಾಣಿಕತೆಗೆ ನಮ್ಮಪ್ಪನನ್ನು ಇಲಾಖೆ ಮೂರು ಬಾರಿ ಅಮಾನತ್ತು ಗೋಳಿಸಿತ್ತು!! ಅ ಸಮಯದ ನಮ್ಮಪ್ಪನ ಸ್ಥಿತಿಯನ್ನು ನೆನಸಿಕೊಂಡರೆ ಇಂದಿಗೂ ನನ್ನ ಮನಸ್ಸು ಬಾರವಾಗುತ್ತದೆ. ಈ ಕಾರಣದಿಂದಲೇ ನಮ್ಮಪ್ಪ ಅವಕಾಶ ವಿದ್ದರು ನನ್ನನ್ನು ನನ್ನ ಅಣ್ಣನನ್ನು ಪೋಲಿಸ್ ಇಲಾಖೆಗೆ ಸೇರಲು ಬಿಡಲಿಲ್ಲ.!
ಗಣೇಶನ ಹಬ್ಬ ಎಂದರೆ ಶಿವಮೊಗ್ಗ ನಗರದಲ್ಲಿ ಒಂದು ತಿಂಗಳು ಬಿಗುವಿನ ವಾತಾವರಣವಿರುತ್ತದೆ. ಇದು ಸಹಜ. ಗಲಾಟೆ ಆಗಲಿ ಆಗದೆ ಇರಲಿ ಸಾವಿರಾರು ಮಂದಿ ಅಧಿಕಾರಿಗಳು ಮತ್ತು ಪೋಲಿಸರು ಹದ್ದಿನ ಕಣ್ಣಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಹಚಾರಕ್ಕೆ ಅದ್ಯಾವುದೋ ಸಂಧಿಯಿಂದ ಕಿಡಿಗೇಡಿ ಒಬ್ಬ ಒಂದು ಕಲ್ಲು ಹೊಡೆದರು ಸಾಕು ಶಿವಮೊಗ್ಗ ನಗರ ಹೊತ್ತಿ ಉರಿಯುತ್ತದೆ ತಕ್ಷಣವೇ ಅದಕ್ಕೊಂದು ಲೇಬಲ್ ಕೂಡಾ ಅಂಟಿಕೊಳ್ಳುತ್ತದೆ ಅದೇ ಕೋಮು ಗಲಭೆ ಎಂದು ಅಲ್ಲಿಗೆ ಶಾಂತವಾಗಿದ್ದ ಮಲೆನಾಡ ತವರು ನಗರಿ ಶಿವಮೊಗ್ಗ ಕೋಮುದಳ್ಳುರಿಗೆ ಸಿಲುಕಿ ಸ್ಮಶಾನವಾಗುತ್ತದೆ. ರಾಗಿಗುಡ್ಡದಲ್ಲೂ ಆಗಿದ್ದು ಆದೆ ಕಿಡಿಗೇಡಿ ಒಬ್ಬ ಈದ್ ಮಿಲಾನ್ ಮೆರವಣಿಗೆಯ ಸಮಯದಲ್ಲಿ ಕಲ್ಲೆಸೆದು ಅಮಾಯಕರ ಬದುಕಿಗೆ ಕೊಳ್ಳಿ ಇಟ್ಟಿದ್ದಾನೆ. ಶಾಂತಿನಗರಕ್ಕೆ ಕೋಮು ಸಂಘರ್ಷದ ಬೆಂಕಿ ಹಚ್ಚಿ ಚಳಿಕಾಯಿಸಿಕೊಂಡಿದ್ದಾನೆಪೋಲಿಸರು ಒಂದಷ್ಟು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಬಂಧನ ಅದವರಲ್ಲಿ ಗಲಾಟೆ ಮಾಡಿದವರಿದ್ದರು ಕೇಲವು ಮಂದಿ ಅಮಾಯಕರು ಮಾಡದ ತಪ್ಪಿಗೆ ಜೈಲು ಸೇರಿದ್ದಾರೆ ಎನ್ನುವ ಕೂಗು ಕೇಳಿ ಬರುತ್ತಿದೆ.
ಆದರೆ ಮಾಡದ ತಪ್ಪಿಗೆ ಠಾಣಾ ಅಧಿಕಾರಿ ಅಭಯ್ ಪ್ರಕಾಶ್ ಸೋಮನಾಳ್ ಮತ್ತು ಅಮಾಯಕರಾದ ಮೂವರು ಪೋಲಿಸರಿಗೆ ಅಮಾನತ್ತಿನ ಬರೆ ಬಿದ್ದಿದೆ ಇದು ವೃತ್ತಿಬದುಕಿನಲ್ಲಿ ಬ್ಲಾಕ್ ಮಾರ್ಕ್.
ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿಯು ಅಭಯ್ ಪ್ರಕಾಶ್ ಸೋಮನಾಳ್ ಅಂತ ಅಧಿಕಾರಿಗಳ ಮನಸ್ಸಿಗೆ ಘಾಸಿಯಾಗದಿರಲಿ……
ಸುಧೀರ್ ವಿಧಾತ ,ಶಿವಮೊಗ್ಗ