ಕುಂದಾಪುರ ಬನ್ಸ್ ರಘು ಕೊಲೆ ಪ್ರಕರಣ – ಇಬ್ಬರು ಆರೋಪಿಗಳಿಗೆ 3 ದಿನ ನ್ಯಾಯಾಂಗ ಬಂಧನ
ಕುಂದಾಪುರದಲ್ಲಿ ನಡೆದ ರಾಘವೇಂದ್ರ ಶೇರುಗಾರ್ ಆಲಿಯಾಸ್ ಬನ್ಸ್ ರಾಘು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ, ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಬಂಧಿತರಿಬ್ಬರು ಶಿವಮೊಗ್ಗದ ಶಫಿವುಲ್ಲಾ (40) ಹಾಗೂ ಇಮ್ರಾನ್ (43) ಎಂದು ಗುರುತಿಸಲಾಗಿದೆ. ಆರೋಪಿಗಳು ಕುಂದಾಪುರದ ಚಿಕ್ಕನ್ ಸ್ಟಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ರವಿವಾರ ಸಂಜೆ ಚೂರಿ ಇರಿದು ಕುಂದಾಪುರದ ನಿವಾಸಿ ಬನ್ಸ್ ರಾಘು (42) ಎನ್ನುವರನ್ನು ಚೂರಿ ಇರಿದು ಹತ್ಯೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಬನ್ಸ್ ರಾಘು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು.
ರವಿವಾರ ಸಂಜೆ ಕೃತ್ಯ ನಡೆದ ತಕ್ಷಣವೇ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕೆ ಕಾರ್ಯಪ್ರವೃತ್ತರಾಗಿದ್ದು ತದನಂತರ ಉಡುಪಿ ಎಸ್ಪಿ ಡಾ. ಅರುಣ್ ಕೆ. ಅವರು ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಆರೋಪಿಗಳನ್ನು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು 2ನೇ ಹೆಚ್ಚುವರಿ ಸಿವಿಲ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಕುಂದಾಪುರ : ಬನ್ಸ್ ರಾಘು ಕೊಲೆ ಪ್ರಕರಣ: ಶಿವಮೊಗ್ಗ ಮೂಲದ ಇಬ್ಬರ ಬಂಧನ
ಕುಂದಾಪುರ ನಗರದಲ್ಲಿ ಕಳೆದ ರವಿವಾರ ಸಂಜೆ ಚೂರಿ ಇರಿತಕ್ಕೆ ಒಳಗಾಗಿದ್ದ ರಾಘವೇಂದ್ರ ಶೇರುಗಾರ್ ( ಬನ್ಸ್ ರಾಘು ) ಹತ್ಯೆಗೆ ಸಂಬಂಧಿಸಿದಂತೆ ನಾವು ಸುದ್ದಿ ಮಾಡಿದಂತೆ ಶಿವಮೊಗ್ಗ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ನಗರದ ಚಿಕ್ಕನ್‌ಸ್ಟಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ಬನ್ಸ್ ರಾಘು ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ. ತಕ್ಷಣ ಈತನನ್ನು ಆಸ್ಪತ್ರೆಗೆ ದಾಖಲಿಸಿದರು ರಾಘವೇಂದ್ರ ಶೇರುಗಾರ್ ಯಾನೆ ಬನ್ಸ್ ರಾಘು (42) ಸೋಮವಾರ ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಮೃತಪಟ್ಟಿದ್ದರು.
ಅಪರಿಚಿತರಿಂದಲೆ ರಾಘವೇಂದ್ರ ಹತ್ಯೆ!?
ರಾಘವೇಂದ್ರನಿಗೆ ಚೂರಿ ಇರಿದ ಬಳಿಕ ಅವರಿಗೂ ಕೊಲೆಗಡುಕರಿಗೂ ಪರಿಚಯ ಇತ್ತು, ಹಳೆ ವೈಷಮ್ಯ ಇತ್ತು, ಹಣದ ವ್ಯವಹಾರದಲ್ಲಿ ತಕರಾರು ಇತ್ತು ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿದ್ದವು. ಆದರೆ ಕಾರುಗಳು ಪರಸ್ಪರ ಸ್ಪರ್ಶಿಸಿಕೊಂಡಲ್ಲಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತ್ತು ಎಂದು ಗೊತ್ತಾಗಿದೆ. ಕೊಲೆ ಆರೋಪಿಗಳು ಬನ್ಸ್ ರಾಘು ಅವರಿಗೆ ಪರಿಚಿತರಲ್ಲ ಎನ್ನುವುದೂ ತನಿಖೆ ವೇಳೆ ಬಯಲಾಗಿದೆ.
ಪೂರ್ವದ್ವೇಷ ಇರಲಿಲ್ಲ
ಮೊದಲಿಗೆ ಪೂರ್ವ ದ್ವೇಷದಿಂದಲೇ ರಾಘವೇಂದ್ರ ಅವರ ಹತ್ಯೆಗೆ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದು ಪೂರ್ವ ದ್ವೇಷದ ಕೃತ್ಯವಲ್ಲ ಎನ್ನುವುದು ಸ್ಪಷ್ಟವಾಗಿ ತನಿಖೆಯಿಂದ ಗೊತ್ತಾಗಿದೆ.
ಈ ಪ್ರಕರಣ ನೆಡೆದ ಕೆಲವೇ ಗಂಟೆಗಳಲ್ಲಿ ಕ್ಷಿಪ್ರ ಕಾರ್ಯಚರಣೆ ಕೈಗೊಂಡ ಪೋಲಿಸರು
ಆರೋಪಿಗಳು ಶಿವಮೊಗ್ಗ ಮೂಲದವರು ಎಂದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಧೀಕ್ಷಕರು ಆರೋಪಿಗಳ ಪತ್ತೆಗೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದಕುಮಾರ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚಿಸಿದ್ದರು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸೂಕ್ತ ಸುಳಿವು ಇಲ್ಲದಿದ್ದರೂ, ಸಾಕ್ಷ್ಯಗಳು ದೊರೆಯದಂತೆ ಆರೋಪಿಗಳು ಪರಾರಿಯಾಗಿದ್ದರೂ, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಅಪಘಾತ ಕಾರಣ!
ಸಂಗಮ್ ಬಳಿಯಿಂದ ಬರುತ್ತಿದ್ದ ವ್ಯಾಗನರ್ ಕಾರು ಹಾಗೂ ರಾಘು ಅವರ ಕಾರು ತುಸು ಸ್ಪರ್ಶವಾಗಿತ್ತು. ಈ ಸಂದರ್ಭ ಸಣ್ಣ ಮಾತಿನ ಚಕಮಕಿಯಲ್ಲಿ ಮುಗಿಯಬಹುದಾಗಿದ್ದ ಪ್ರಕರಣ ಹಿಂಬಾಲಿಸಿಕೊಂಡು ಬಂದು ಹತ್ಯೆಮಾಡುವ ಮಟ್ಟಕ್ಕೆ ಬಂದು ತಲುಪಿತ್ತು!. ಪರಸ್ಪರ ಹಲ್ಲೆ ನಡೆದಿತ್ತು. ನಡೆಯುತ್ತಿದ್ದ ಜಗಳವನ್ನು ಸ್ಥಳೀಯರು ಬಿಡಿಸಿ ಒಂದು ಹಂತದಲ್ಲಿ ಪ್ರಕರಣ ಮುಗಿಯುವ ಹಂತಕ್ಕೆ ತಲುಪಿತ್ತಾದರೂ, ಮತ್ಯೆ ಮಾತಿನ ಭರಾಟೆಯಲ್ಲಿ ಮತ್ತೆ ಹೊಡೆದಾಟ ನಡೆದು ಚೂರಿ ಹಾಕುವಲ್ಲಿಯವರೆಗೆ ಹೋಗಿ ಕೊಲೆಯಾಗುವ ಹಂತ ತಲುಪಿತ್ತು.
ದುಶ್ಚಟದ ದಾಸರು ಹಂತಕರು!
ಆರೋಪಿಗಳು ಶಿವಮೊಗ್ಗದವರಾಗಿದ್ದು ಇವರಲ್ಲಿ ಒಬ್ಬ ಉಡುಪಿ ಜಿಲ್ಲೆಯ ಹೆಣ್ಣು ಮಗಳನ್ನು ಮದುವೆಯಾಗಿದ್ದ. ಹಂತಕರಿಗೆ ಮೈಬಗ್ಗಿಸಿ ಕೆಲಸ ಮಾಡುವ ಮನಸ್ಸಿನವರಲ್ಲ. ಕುಂದಾಪುರ, ಭಟ್ಕಳ ಪರಿಸರ ಸೇರಿದಂತೆ ವಿವಿಧೆಡೆ ಜುಗಾರಿ, ಇಸ್ಪೀಟ್ ಆಡುವುದು ಇವರ ದುಶ್ಚಟ. ಹಾಗೆಯೇ ಸೆಪ್ಟೆಂಬರ್ 29ರಂದು ಕುಂದಾಪುರಕ್ಕೆ ಬಂದು ಇಲ್ಲಿನ ನಗರದ ಲಾಡ್ಜ್ ಒಂದರಲ್ಲಿ ತಂಗಿದ್ದ ಆರೋಪಿಗಳು ಕೋಣಿ ಪ್ರದೇಶದ ಮನೆಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಆಟದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಜುಗಾರಿ ಮುಗಿಸಿ ಮರಳಿ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ಎಂಟಕ್ಕೂ ಅಧಿಕ ಕ್ರಿಮಿನಲ್ ಪ್ರಕರಣ ಹಂತಕನ ಮೇಲಿದೆ!?
ಆರೋಪಿಗಳ ಪೈಕಿ
ಒಬ್ಬಾತಾನ ಮೇಲೆ ಎಂಟಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎನ್ನಲಾಗಿದೆ. ಚೂರಿ ಹಿಡಿದುಕೊಂಡೇ ತಿರುಗಾಡುವ ಈತ ಸಣ್ಣಪುಟ್ಟ ಜಗಳಗಳಲ್ಲೂ ಚೂರಿ ಝಳಪಿಸುವ ಖಯಾಲಿ ಹೊಂದಿದ್ದ ಕೆಲವು ಸಮಯಗಳ ಹಿಂದೆ ಆಗುಂಬೆಯಲ್ಲಿ ಅಪಘಾತ ಸಂಭವಿಸಿದಾಗ ನಡೆದ ಜಗಳದಲ್ಲೂ ಒಬ್ಬರಿಗೆ ಚೂರಿಯಿಂದ ಈತ ಇರಿದಿದ್ದ ಎಂಬ ಮಾಹಿತಿಯಿದೆ. ಆದರೆ ಕುಂದಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ಮಾತ್ರ ದುರಂತವೆ ಹೌದು.
ಸುಧೀರ್ ವಿಧಾತ, ಶಿವಮೊಗ್ಗ