ಶಿವಮೊಗ್ಗ: ಕೆಪಿಸಿಸಿ ಸಹಕಾರಿ ವಿಭಾಗದ ರಾಜ್ಯ ಸಂಚಾಲಕರಾದ ಆರ್.ಎಂ.ಮಂಜುನಾಥ್ ಗೌಡರ ಮನೆ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿರುವ ಕರಕುಚ್ಚಿ ಮತ್ತು ಕಲ್ಲುಕೊಪ್ಪ ಗ್ರಾಮದಲ್ಲಿರುವ ಮನೆಗಳ ಮೇಲೆ ನಿನ್ನೆ ಇಡಿ ದಾಳಿ ನಡೆದಿದೆ.
ಐದಾರು ವಾಹನಗಳಲ್ಲಿ ಬಂದ 15 ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿತ್ತು. ಶಿವಮೊಗ್ಗದ ಶರಾವತಿ ನಗರ, ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಮಂಜುನಾಥ್ ಗೌಡ ಮನೆಯ ಮೇಲೂ ದಾಳಿ ನಡೆದಿದೆ. ಜೊತೆಗೆ ತೀರ್ಥಹಳ್ಳಿ ತಾಲ್ಲೂಕಿನ ಕರಕುಚ್ಚಿ ಬಳಿಯ ಫಾರ್ಮ್ ಹೌಸ್ ಮೇಲೆ
ಮನೆಗಳ ಮೇಲೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆಯನ್ನು ಈಡಿ ಅಧಿಕಾರಿಗಳು ನಡೆಸಿದ್ದಾರೆ. ಪ್ರತ್ಯೇಕ ಫೋರ್ಸ್ ನೊಂದಿಗೆ ದಾಳಿಗೆ ಬಂದಿರುವ ಈಡಿ ಟೀಂ.ತೀರ್ಥಹಳ್ಳಿ ಮನೆಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಆರ್ ಎಂಗಾಗಿ ಇಡಿ ಅಧಿಕಾರಿಗಳು ಕಾಯ್ದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಡಿಸಿಸಿ ಬ್ಯಾಂಕ್ ನಕಲಿ ಬಂಗಾರದ ಹಗರಣ ತನಿಖೆ ಸಂಬಂಧ ಇಡಿ ದಾಳಿ ನಡೆದಿದೆ ಎನ್ನಲಾಗಿದೆ. ಕೆಲ ತಿಂಗಳ ಹಿಂದೆಯೇ ಈ ಸಂಬಂಧ ಡಿಸಿಸಿ ಬ್ಯಾಂಕ್ ನಿಂದ ಇಡಿ ಮಾಹಿತಿ ಕೇಳಿತ್ತು. ಇದೀಗ ದಾಳಿ ಮಾಡಿ, ತನಿಖೆ ಆರಂಭಿಸಿದ ಈಡಿ ಟೀಂ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡರ ಶರಾವತಿ ನಗರದಲ್ಲಿರುವ ಮನೆಗೆ ಮೂರು ವಾಹನದಲ್ಲಿ ಬಂದಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದ್ವೇಷದ ರಾಜಕೀಯ ಹಿನ್ನಲೆಯಲ್ಲಿ ಈ ದಾಳಿ ನೆಡೆದಿರಬಹುದೆಂದು ತಿಳಿದುಬಂದಿದೆ. ಗೌಡರು ಅಧಿಕಾರಕ್ಕೆ ಬರುತ್ತಿದ್ದಹಾಗೆ ಇಡಿ ರೂಪದಲ್ಲಿ ಶನಿವಕ್ಕರಿಸಿದೆ .ಗೌಡರು ಡಿಸಿಸಿ ಬ್ಯಾಂಕಿನ ಹತ್ತನೆ ಬಾರಿಗೆ ಅಧ್ಯಕ್ಷರಾದ ಹಿನ್ನಲೆಯಲ್ಲಿ ತೀರ್ಥಹಳ್ಳಿಯಲ್ಲಿ ಸಹಕಾರಿ ಸನ್ಮಾನವನ್ನು 6 ನೇ ತಾರೀಖು ಹಮ್ಮಿಕೊಳ್ಳಲಾಗಿತ್ತು. ದಾಳಿ ಹಿನ್ನಲೆಯಲ್ಲಿ ಸನ್ಮಾನವನ್ನು ಮುಂದೂಡಿ ದ್ವೇಷದ ದಾಳಿ ವಿರುದ್ಧ ಕಿಮ್ಮನೆ ರತ್ನಾಕರ್ ಅವರ ಮುಂದಾಳತ್ವದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಂಜುನಾಥ್ ಗೌಡರ ಅಭಿಮಾನಿಗಳು ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಕಲಗೋಡ್ ರತ್ನಾಕರ್ ,ರಾಘವೇಂದ್ರ ಶೆಟ್ಟಿ ( ಕಂಡಿಲ್ ರಾಘು ) ಕುರುವಳ್ಳಿ ನಾಗರಾಜ್,ಮಂಗಳ ಗೋಪಿ, ಪಟ್ಟಣ ಪಂಚಾಯತಿ ಸದಸ್ಯ ರಹಮತ್ ಉಲ್ಲಾ ಅಸಾಧಿ ಸಾಕಷ್ಟು ಹಿರಿಯ ಕಾಂಗ್ರೆಸ್ ನ ಮುಖಂಡರು ಮಂಜುನಾಥ್ ಗೌಡರ ಬೆಂಬಲಿಗರು ಪಟ್ಟಣ ಪಂಚಾಯತಿ ಸದಸ್ಯರು ಭಾಗವಹಿಸಿ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಸುಧೀರ್ ವಿಧಾತ ,ಶಿವಮೊಗ್ಗ