ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮಪಂಚಾಯತಿ ಅಧ್ಯಕ್ಷ /ಉಪಾಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ಅನಿಲ್
15 ನೇ ಹಣಕಾಸು ಕ್ರೀಯಾಯೋಜನೆ ನೇರವಾಗಿ ಇ-ಗ್ರಾಮ ಸ್ವರಾಜ್ ಗೆ ಅಪ್ ಲೋಡ್ ಮಾಡಲು ಅವಕಾಶ : ಸಿಇಓ-ಇಓ ಗೆ ಒಕ್ಕೂಟ ಅಭಿನಂದನೆ
ತೀರ್ಥಹಳ್ಳಿ : ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ಹದಿನೈದನೇ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ಅನುಮೋದನೆಗೆ ಸಮಕ್ಷಮ ಪ್ರಾಧಿಕಾರ ಅಂದರೆ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆಯಬೇಕೆಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮೌಖಿಕ ಆದೇಶವನ್ನು ಹೊರಡಿಸಿರುವುದನ್ನು ಖಂಡಿಸಿ ಹೇಳಿಕೆ ನೀಡಲಾಗಿತ್ತು.
ಅಧ್ಯಕ್ಷರ ಅಧಿಕಾರ ವನ್ನು ಮೊಟಕುಗೊಳಿಸುವ ಹುನ್ನಾರ ಇದಾಗಿದ್ದೆಂದು ಕೂಡಲೇ ಇ-ಗ್ರಾಮ ಸ್ವರಾಜ್ ಪೋರ್ಟ್ ಗೆ ಎಂದಿನಂತೆ ಅಪ್ ಲೋಡ್ ಮಾಡಿ ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸಲಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಲಾಗಿತ್ತು.
ಇದೀಗ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಎನ್ ಶೈಲಾ ರವರು ತಾಲೂಕಿನ ಎಲ್ಲಾ ಅಭಿವೃದ್ಧಿ ಅಧಿಕಾರಿಗಳಿಗೆ ನಿಯಮಾನುಸಾರ ಇ-ಗ್ರಾಮ್ ಸ್ವರಾಜ್ ಪೋರ್ಟ್ ಗೆ ಕ್ರೀಯಾಯೋಜನೆಯನ್ನು ಅಪ್ ಲೋಡ್ ಮಾಡಿ ಕಾಮಗಾರಿಯನ್ನು ಆರಂಭಿಸುವಂತೆ ಸೂಚಿಸಿದ್ದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೆಹಲ್ ಸುಧಾಕರ್ ಲೋಖಂಡೆ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೈಲಾರವರಿಗೆ ಗ್ರಾಮಪಂಚಾಯತಿ ಅಧ್ಯಕ್ಷ /ಉಪಾಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷ ಅನಿಲ್ ಅಭಿನಂದನೆ ಸಲ್ಲಿಸಿದ್ದಾರೆ.