ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ 10 ನೇ ಬಾರಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ ಸಹಕಾರಿ, ಸಹಕಾರ ರತ್ನ ಡಾ|| ಆರ್.ಎಂ. ಮಂಜುನಾಥಗೌಡರಿಗೆ ತೀರ್ಥಹಳ್ಳಿ ತಾಲ್ಲೂಕು ಸರ್ವ ಸಹಕಾರಿಗಳ ಪರವಾಗಿ ತೌರೂರ ಸಂಮಾನ.

ಸಹಕಾರಿ ವೇದಿಕೆ, ತೀರ್ಥಹಳ್ಳಿ

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ 10 ನೇ ಬಾರಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ ಸಹಕಾರಿ, ಸಹಕಾರ ರತ್ನ

ಡಾ|| ಆರ್.ಎಂ. ಮಂಜುನಾಥಗೌಡರಿಗೆ

ತೀರ್ಥಹಳ್ಳಿ ತಾಲ್ಲೂಕು ಸರ್ವ ಸಹಕಾರಿಗಳ ಪರವಾಗಿ

ತೌರೂರ ಸಂಮಾನ

ದಿನಾಂಕ: 6-10-2023 ರ ಶುಕ್ರವಾರದಂದು ಬೆಳಿಗ್ಗೆ 10-00 ಗಂಟೆಯಿಂದ ತೀರ್ಥಹಳ್ಳಿಯ ಗೋಪಾಲಗೌಡ ರಂಗಮಂದಿರದಲ್ಲಿ

ಸಹೃದಯ ಸಹಕಾರಿಗಳಿಗೆ ಹಾರ್ದಿಕ ಸುಸ್ವಾಗತ ಸಹಕಾರಿ ವೇದಿಕೆ, ತೀರ್ಥಹಳ್ಳಿ,

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ 10 ನೇ ಬಾರಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಕರ್ನಾಟಕದ ಹೆಮ್ಮೆಯ ಸಹಕಾರಿ, ಸಹಕಾರ ರತ್ನ ಡಾ|| ಆರ್.ಎಂ. ಮಂಜುನಾಥಗೌಡರಿಗೆ ತೀರ್ಥಹಳ್ಳಿ ತಾಲ್ಲೂಕು ಸರ್ವ ಸಹಕಾರಿಗಳ ಪರವಾಗಿ ತೌರೂರ ಸಂಮಾನ…..

ಆರ್ ಎಮ್ ಮಂಜುನಾಥ್ ಗೌಡ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರು

ಆತ್ಮೀಯ ಸಹಕಾರಿ ಬಂಧುಗಳೇ,

ಶಿವಮೊಗ್ಗ ಜಿಲ್ಲೆಯ, ವಿಶೇಷವಾಗಿ ತೀರ್ಥಹಳ್ಳಿಯ ಸಹಕಾರಿ ಸಂಸ್ಥೆಗಳು ಬೆಳೆದು ಹೆಸರು ಮಾಡಲು ಸದಾ ಕಾಲ ತಮ್ಮ ನಿಸ್ವಾರ್ಥ ಕೊಡುಗೆ ನೀಡಿರುವ ಡಾ|| ಆರ್.ಎಂ. ಮಂಜುನಾಥಗೌಡರು ಈಗ ಮತ್ತೊಮ್ಮೆ 10 ನೇ ಬಾರಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿರುವುದು ತಾಲ್ಲೂಕಿನ ಎಲ್ಲಾ ಸಹಕಾರಿಗಳು ಸಂಭ್ರಮಿಸುವ ಘಳಿಗೆಯಾಗಿದೆ. ಈ ಶುಭ ಘಳಿಗೆಯಲ್ಲಿ ಮಂಜುನಾಥಗೌಡರ ಸಹಕಾರ ರಂಗದ ಕೊಡುಗೆ, ಸೇವೆಯನ್ನು ಇನ್ನೊಮ್ಮೆ ನೆನಪು ಮಾಡಿಕೊಂಡು ಅವರನ್ನು ಹೃತ್ತೂರ್ವಕವಾಗಿ ಅಭಿನಂದಿಸೋಣ.

ಎಲ್ಲಾ ಸಹಕಾರಿಗಳು ಈ ಸಹಕಾರಿ ದಿಗ್ಗಜನ ಅಭಿನಂದನಾ ಕಾರ್ಯಕ್ರಮದಲ್ಲಿ ಒಂದಾಗೋಣ ಬನ್ನಿ…

ಸಹಕಾರಂ ಗೆಲ್ಲೆ ಸಹಕಾರಂ ಬಾಳ್ವೆ…

ಸಹಕಾರ ಕ್ಷೇತ್ರ : ಹೆಜ್ಜೆ ಗುರುತುಗಳು….

  • 1983 ರಿಂದ ಸಿರಿಗೆರೆ ವ್ಯ.ಸೇ.ಸ. ಬ್ಯಾಂಕಿನ ಅಧ್ಯಕ್ಷರಾಗಿ

ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ.

  • 1986 ರಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪನೆ

ಮತ್ತು ಅಧ್ಯಕ್ಷರಾಗಿ ಕಾರ್ಯಕ್ಷೇತ್ರದ ವಿಸ್ತರಣೆ. + 1998 ರಲ್ಲಿ ಮಲೇಶಂಕರ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಸ್ಥಾಪನೆ.

  • 1996 ರಿಂದ ಟಿ.ಎ.ಪಿ.ಸಿ.ಎಂ.ಎಸ್, ಶಿವಮೊಗ್ಗ – ನಿರ್ದೇಶಕರಾಗಿ ನಾಯಕತ್ವ. * ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ 1994 ರಿಂದ ನಿರ್ದೇಶಕ.
  • ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ದಿನಾಂಕ 11-1-1997 ರಿಂದ 202) ರ ವರೆಗೆ ಅಧ್ಯಕ್ಷರಾಗಿ ಸೇವೆ.
  • ದಿನಾಂಕ 29-09-2023 ರಂದು 10 ನೇ ಬಾರಿಗೆ ಅಧ್ಯಕ್ಷ ಹುದ್ದೆಗೆ ಮರು ಆಯ್ಕೆಯಾಗಿ ಇತಿಹಾಸ ನಿರ್ಮಾಣ.
  • 2010 ರಿಂದ 2015 ರ ವರೆಗೆ ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ.
  • ನ್ಯಾಪ್‌ಕಾಬ್, ಮುಂಬೈ ಉಪಾಧ್ಯಕ್ಷರಾಗಿ ಸೇವೆ.
  • ರಾಷ್ಟ್ರೀಯ ಸಹಕಾರ ಬ್ಯಾಂಕ್‌, ನವದೆಹಲಿ ನಿರ್ದೇಶಕರಾಗಿ ಸೇವೆ.
  • ಕಾಸ್ಕಾರ್ಡ್ ಬ್ಯಾಂಕ್ ನಿ., ಬೆಂಗಳೂರು ಇದರ ನಿರ್ದೇಶಕರಾಗಿ ಸೇವೆ. * ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಇದರ ನಿರ್ದೆಶಕರಾಗಿ ಗಣನೀಯ ಸೇವೆ.
  • ರಿಜನಲ್ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟೀವ್‌ ಮ್ಯಾನೇಜ್‌ ಮೆಂಟ್ ಸದಸ್ಯರಾಗಿ ಸೇವೆ.
  • ಶಿವಮೊಗ್ಗ ಎ.ಪಿ.ಎಂ.ಸಿ. ಯ ನಿರ್ದೇಶಕರಾಗಿ 1998-2003 ರ ವರೆಗೆ.
  • ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಮಹಾಮಂಡಳದ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ 2005 ರಿಂದ ಕಾರ್ಯ ನಿರ್ವಹಣೆ.
  • ತೀರ್ಥಹಳ್ಳಿ – ಸೊರಬ ಟಿ.ಎ.ಪಿ.ಸಿ.ಎಂ.ಎಸ್. ನಿರ್ದೆಶಕರಾಗಿ ಸೇವೆ.

ನಿರ್ದೆಶಕರು, ಎ.ಪಿ.ಎಂ.ಸಿ., ಶಿವಮೊಗ್ಗ.

ಕೊಡಚಾದ್ರಿ ಪತ್ತಿನ ಸೌಹಾರ್ದ, ನಿರ್ದೇಶಕರು, ಶಿವಮೊಗ್ಗ,

  • ಸಂಸ್ಥಾಪಕರು ಹಾಗೂ ನಿರ್ದೇಶಕರು ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಶಿವಮೊಗ್ಗ.

ಪ್ರಗತಿಯ ಹೆಜ್ಜೆ…

41 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಡಿಸಿಸಿ ಬ್ಯಾಂಕ್ ಮೂಲಕ . ಆರ್ಥಿಕ ನೆರವು ನೀಡಿರುವುದು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮೂಲಕ ಮಹಿಳೆಯರ ಅಭ್ಯುದಯಕ್ಕಾಗಿ ಕಿರು ಹಣಕಾಸು ವಿಭಾಗವನ್ನು ಭಾರತದಲ್ಲಿಯೇ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಸ್ಥಾಪಿಸಿದ್ದು.

  • ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ಆ ಹೊಸ ಶಾಖೆಗಳನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು,
  • ಅಪೆಕ್ಸ್‌ ಬ್ಯಾಂಕ್ ಮೂಲಕ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ರೈತರಿಗಾಗಿ ಉಚಿತ ಹವಾನಿಯಂತ್ರಿತ ವಾರ್ಡ್‌ಗಳನ್ನು ಆರಂಭಿಸಿದ್ದು.
  • ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ 15 ಹೊಸ ಶಾಲೆಗಳನ್ನು ತೆರೆದಿರುವುದು.
  • ಮೊಟ್ಟ ಮೊದಲ ಬಾರಿಗೆ ತೀರ್ಥಹಳ್ಳಿಯಲ್ಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆರಂಭಿಸಲು ಪ್ರೇರಣೆ,
  • ತೀರ್ಥಹಳ್ಳಿಯಲ್ಲಿ ಮಹಿಳೆಯರೇ ಸಂಪೂರ್ಣವಾಗಿ ಮುನ್ನಡೆಸುವ ಕೊಡಚಾದ್ರಿ ಮಹಿಳಾ ಬ್ಯಾಂಕ್‌ ಸ್ಥಾಪನೆಗೆ ಚಾಲನೆ . ಈ ಬ್ಯಾಂಕ್ ದೇಶದಲ್ಲಿಯೇ ಅತ್ಯಧಿಕ ಷೇರು ಹಣ ಸಂಗ್ರಹಿಸಿದ ಮೊಟ್ಟಮೊದಲ ಮಹಿಳಾ ಬ್ಯಾಂಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಕೊಡಚಾದ್ರಿ ವೈಭವದಂತಹ ಅದ್ದೂರಿ ಜಾತ್ರೆ ಆಯೋಜಿಸಿ ಗ್ರಾಮೀಣ ಮಹಿಳೆಯರ ಗೃಹಉತ್ಪನ್ನಗಳಿಗೆ ಒಂದೇ ವೇದಿಕೆಯಲ್ಲಿ ಮಾರುಕಟ್ಟೆ ದೊರಕಲು ವ್ಯವಸ್ಥೆ,
  • ಸೊರಬ, ತೀರ್ಥಹಳ್ಳಿ, ಸಾಗರ, ಉಂಬೇಬೈಲು, ಆಯನೂರು, ಹೊಸನಗರಗಳಲ್ಲಿ ತೋಟಗಾರಿಕಾ ಸಹಕಾರಿ ಸಂಸ್ಥೆಗಳ ಸ್ಥಾಪನೆಗೆ ಅಡಿಪಾಯ.
  • ಸಂಪೂರ್ಣ ಮುಚ್ಚಿ ಹೋಗಿದ್ದ ಮೇಗರವಳ್ಳಿ, ಸೊನಲೆ ಸಹಕಾರಿ ಸಂಸ್ಥೆಗಳ ಪುನರ್‌ಸ್ಥಾಪನೆಗೆ ಅಡಿಗಲ್ಲು.

ಜನಪರ ಹೋರಾಟಗಳು :

  • ಮಾಜಿ ಮುಖ್ಯಮಂತ್ರಿ ದಿ| ಜೆ.ಹೆಚ್. ಪಟೇಲರ ಮಾರ್ಗದರ್ಶನದಲ್ಲಿ ರಾಜಕಾರಣ ಮತ್ತು ಸಾಮಾಜಿಕ ಹೋರಾಟಗಳಿಗೆ ಪಾದಾರ್ಪಣೆ
  • ಮಂಡಘಟ್ಟ ಮಂಡಲ ಪ್ರಧಾನರಾಗಿ ಜನ ಸೇವೆಗೆ ಮುನ್ನುಡಿ
  • ತುಂಗಾ ನದಿಯ ಮಿನಿ ವಿದ್ಯುತ್‌ ಯೋಜನೆಯ ವಿರುದ್ಧ ಹೋರಾಟ,
  • ಒಂದಂಕಿ ಲಾಟರಿ ಮುಟ್ಟುಗೋಲಿಗೆ ಚಳವಳಿ.
  • ಅಡಿಕೆ ಬೆಲೆ ಕುಸಿತದ ಪರಿಣಾಮ ಬೆಂಬಲ ಬೆಲೆಗೆ ಆಗ್ರಹ.
  • ಸಹಕಾರಿ ವಿರೋಧಿ ಚಟುವಟಿಕೆಗಳ ವಿರುದ್ಧ ಘರ್ಜನೆ.
  • ಮಲೆನಾಡಿಗರಿಗೆ ಮಾರಕವಾಗಿರುವ ಡಾ|| ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಬಿದನಗೋಡಿನಿಂದ ತಿರ್ಥಹಳ್ಳಿವರೆಗೆ ಅನ್ನದಾತರ ಪರ ನಡಿಗೆ
  • ಶರಾವತಿ ಮುಳುಗಡೆ ಸಂತ್ರಸ್ಥರೈತರ ಪರವಾಗಿ ಹಣಗೆರೆ ಕಲ್ಲುಕೊಪ್ಪದಿಂದ

ತೀರ್ಥಹಳ್ಳಿವರೆಗೆ ಯಶಸ್ವಿ ಪಾದಯತ್ರೆ,

  • ಆಡಿಕೆ ಬೆಲೆ ಕುಸಿದಾಗ, ವಿದೇಶಿ ಅಡಿಕೆ ಆಮದು ಕುರಿತಂತೆ ಬೆಂಗಳೂರು ಶ್ರೀರಾ ಪಾರ್ಕ್‌ನಲ್ಲಿ ಮಲೆನಾಡು ಭಾಗದ ರಾಜಕೀಯ ನಾಯಕರನ್ನು ಪಕ್ಷಾತೀತವಾಗಿ ಸೇರಿಸಿ ಒಗ್ಗಟ್ಟು ಪ್ರದರ್ಶಿಸಲು ಮೂಲ ಪ್ರೇರಣೆ ಡಾ|| ಆರ್.ಎಂ. ಮಂಜುನಾಥಗೌಡರು.

ವಿದೇಶ ಪ್ರವಾಸ – ಅಧ್ಯಯನ :

  • ನಬಾರ್ಡ್ ಸಹಯೋಗದೊಂದಿಗೆ ಯುನೈಟೆಡ್ ಸ್ಟೇಟ್ಸ್, ಪೋಲ್ಯಾಂಡ್, ನೆದರ್‌ಲ್ಯಾಂಡ್‌, ಸ್ವಿಜರ್‌ಲ್ಯಾಂಡ್, ಜರ್ಮನಿ, ಮಲೇಶಿಯಾ, ಮೆಸ್ಟ್ರಾ‌, ಇಟಲಿ, ರಷ್ಯಾ, ಹಾಂಕ್‌ಕಾಂಗ್, ಫ್ರಾನ್ಸ್, ಚಿಕ್ ರಿಪಬ್ಲಿಕ್, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಂಗಾಪೂರ್, ದಕ್ಷಿಣ ಆಫ್ರಿಕಾ ಸೇರಿದಂತೆ 80 ಕ್ಕೂ ಅಧಿಕ ವಿದೇಶಗಳಲ್ಲಿ ಸಹಕಾರಿ ಅಧ್ಯಯನ
  • ಕಾರ್ಪೊರೇಟ್ ಗವರ್ನೆನ್ಸ್‌ ಬಗ್ಗೆ ಹೈದರಾಬಾದ್‌ನಲ್ಲಿ ವಿಶೇಷ ತರಬೇತಿ. *ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಹಾಗೂ ಕೊಲೊಂಬೊದಲ್ಲಿ ಸಹಕಾರಿ ಅಧ್ಯಯನ.

ಗೌರವ ಪುರಸ್ಕಾರಗಳು :

  • ಕರ್ನಾಟಕ ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪ್ರಶಸ್ತಿ ಪ್ರಧಾನ,
  • ಕರ್ನಾಟಕ ರಾಜ್ಯ ಸರ್ಕಾರದಿಂದ ಶ್ರೇಷ್ಟ ಸಹಕಾರಿ ಶ್ರೀ ಪ್ರಶಸ್ತಿ,

ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್‌ ವತಿಯಿಂದ ಉತ್ತಮ ಸಹಕಾರಿ ಶ್ರೀ ಪ್ರಶಸ್ತಿ ಪ್ರಧಾನ.

  • ರಾಜ್ಯ ಸರ್ಕಾರದಿಂದ 2009 ರಲ್ಲಿ ಸಹಕಾರ ಯುವಚೇತನ ಪ್ರಶಸ್ತಿ ಪ್ರಧಾನ

ದಿನಾಂಕ 18-12-2012 ರಂದು ಕುವೆಂಪು ವಿಶ್ವವಿದ್ಯಾಲಯದಿಂದ ಸಹಕಾರ ಕ್ಷೇತ್ರದಲ್ಲಿನ ಉತ್ತಮ ಸಾಧನೆಯನ್ನು ಗುರುತಿಸಿ, ಗೌರವ ಡಾಕ್ಟರೇಟ್ ಪ್ರಧಾನ.

  • ರಾಜ್ಯದಾದ್ಯಂತ ನೂರಾರು ಸ್ಥಳೀಯ ಸಂಘ ಸಂಸ್ಥೆಗಳ ವತಿಯಿಂದ ಗೌರವ, ಅಭಿನಂದನೆ, ಪುರಸ್ಕಾರಗಳು,

ಸರ್ವ ಸಹಕಾರಿಗಳಿಗೂ ಹೃತೂರ್ವಕ ಸುಸ್ವಾಗತ ಬಸವಾನಿ ವಿಜಯದೇವ್, ಅಧ್ಯಕ್ಷರು ಮತ್ತು ಸದಸ್ಯರು ಸಹಾಕಾರಿ ವೇದಿಕೆ, ತೀರ್ಥಹಳ್ಳಿ

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!