ಕುಂದಾಪುರದಲ್ಲಿ ಚೂರಿ ಇರಿತಕ್ಕೊಳಗಾದ ‘ಬನ್ಸ್ ರಾಘು ನಿಧನ : ಚೂರಿ ಇರಿದ ವ್ಯಕ್ತಿ ಶಿವಮೊಗ್ಗ ಮೂಲದ ರೌಡಿ!!
ಕುಂದಾಪುರದಲ್ಲಿ ಚೂರಿ ಇರಿತಕ್ಕೊಳಗಾದ ‘ಬನ್ಸ್ ರಾಘು ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಸಾವಿನ ಮನೆ ಸೇರಿದ್ದಾನೆ
ಕುಂದಾಪುರ: ಭಾನುವಾರ ರಾತ್ರಿ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಕುಂದಾಪುರದ ರಾಘವೇಂದ್ರ ಶೇರುಗಾರ್(42)(ಬನ್ಸ್ ರಾಘು) ವನ್ನು ತಕ್ಷಣವೇ ಸ್ಥಳಿಯರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಕುಂದಾಪುರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರುಗಾರ್ ಭಾನುವಾರ ರಾತ್ರಿ ಚಿಕ್ಕಮ್ಮನಸಾಲು ರಸ್ತೆಯ ಪೋಸ್ಟ್ ಆಫೀಸ್ ಬಳಿ ತಮ್ಮ ಕಾರಿನಲ್ಲಿ ಹೊಗುತ್ತಿರುವಾಗ ಕಾರು ಸೈಡ್ ಕೊಡುವ ವಿಚಾರದಲ್ಲಿ ಗಲಾಟೆಯಾಗಿತ್ತು. ಗಲಾಟೆ ತೀವ್ರಗೊಂಡು ವ್ಯಾಗನರ್ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಗಲಾಟೆಯ ನಡುವೆ ರಾಘವೇಂದ್ರ ಅವರ ತೊಡೆಯ ಭಾಗಕ್ಕೆ ಬಲವಾಗಿ ಚೂರಿಯಿಂದ ಇರಿದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದೊಂದಿಗೆ ಅಲ್ಲೆ ಕುಸಿದುಬಿದ್ದು ಒದ್ದಾಡುತ್ತಿದ್ದ ರಾಘವೇಂದ್ರ ಅವರನ್ನು ಸ್ಥಳೀಯರು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯಲು ಹೇಳಿದ್ದಾರೆ ಅದರಂತೆ ಮಣಿಪಾಲ್ ಆಸ್ಪತ್ರೆಗೆ ರಾಘವೇಂದ್ರ ಅವರನ್ನು ದಾಖಲಿಸಲಾಗಿತ್ತು.
ತೊಡೆ ಭಾಗಕ್ಕೆ ಬಲವಾಗಿ ಚೂರಿ ಇರಿದ ಕಾರಣಕ್ಕೆ ಆಳವಾಗಿ ಗಾಯವಾದ ಹಿನ್ನೆಲೆ ತೀವ್ರರಕ್ತಸ್ರಾವವಾಗಿದ್ದು, ಭಾನುವಾರ ತಡರಾತ್ರಿಯೇ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ರಾಘವೇಂದ್ರ ಅವರು, ಕಳೆದ ಕೆಲ ವರ್ಷಗಳಿಂದ ಕುಂದಾಪುರದಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವ್ಯವಸ್ಥಿತವಾಗಿ ಸ್ಕೆಚ್! ಹಾಕಿ ಈ ಹತ್ಯೆ ಮಾಡಿರ ಬಹುದಾ?
ಕುಂದಾಪುರ ಭಾಗದಲ್ಲಿ ಬನ್ಸ್ ರಾಘು ಅಂತಲೇ ಗುರುತಿಸಿಕೊಂಡಿದ್ದ ರಾಘವೇಂದ್ರ ಶೇರುಗಾರ್ ಅವರು ಸಣ್ಣ-ಪುಟ್ಟ ಗಲಾಟೆಗಳಲ್ಲು ಮೂಗು ತೂರಿಸಿ ಭಾಗಿಯಾಗುತ್ತಿದ್ದರು ಎನ್ನಲಾಗಿದೆ. ಹೀಗಾಗಿಯೇ ವೈರತ್ವದ ಹಿನ್ನಲೆಯಲ್ಲಿ ರಾಘು ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ. ಈ ಹತ್ಯೆಯಲ್ಲಿ ಚಾಕು ಇರಿದ ಆರೋಪಿ ಶಿವಮೊಗ್ಗ ಮೂಲದವನಾಗಿದ್ದು ಕಳೆದ ಕೆಲದಿನಗಳಿಂದ ಕುಂದಾಪುರದ ಖಾಸಗಿ ಹೊಟೇಲ್ ಒಂದರಲ್ಲಿ ಉಳಿದುಕೊಂಡಿದ್ದ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ತಂಡಗಳಾಗಿ ಬಲೆ ಬೀಸಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ.
ಸುಧೀರ್ ವಿಧಾತ , ಶಿವಮೊಗ್ಗ