ಹತ್ಯೆಯಾದ ಶ್ರೀನಿವಾಸ್
ಗಣಪತಿ ವಿಸರ್ಜನಾ ವೇಳೆ ಡ್ಯಾನ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡ ಪರಿಣಾಮ ಶ್ರೀನಿವಾಸ್ ಎಂಬಾತ ಸಾವನ್ನಪ್ಪಿದ್ದರೆ ರಂಜಿತ್ ಹಾಗೂ ಇಂದಿರಾ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ತಿಂಗಳು ಸಹ ಅದೇ ಏರಿಯಾದಲ್ಲಿ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ಹೋಗುವಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ಶ್ರೀನಿವಾಸ್ ಮತ್ತು ವಿನಯ್, ಅಲೆಕ್ಸ್, ರಂಜಿತ್, ಪ್ರಶಾಂತ್ ನಡುವೆ ಜಗಳವಾಗಿತ್ತು. ನಿನ್ನೆ ಮತ್ತೊಂದು ಗಣೇಶನ ಮೂರ್ತಿಯನ್ನು ವಿಸರ್ಜನೆಗೆ ಮೆರವಣಿಗೆಯಲ್ಲಿ ಹೋಗುವಾಗ ಗಣಪತಿಯನ್ನು ಮೆರವಣಿಗೆಯ ಸಂಧರ್ಭದಲ್ಲಿ ಒಂದು ಮನೆ ಮುಂದೆ ಬಂದು ನಿಲ್ಲಿಸಿ ಡ್ಯಾನ್ಸ್ ಮಾಡುವಾಗ ಶ್ರೀನಿವಾಸ್ ಎನ್ನುವಾತ ಡ್ಯಾನ್ಸ್ ಮಾಡುತ್ತಿದ್ದವರಿಗೆ ಡ್ಯಾನ್ಸ್ ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿದ್ದ. ಈ ಸಂದರ್ಭದಲ್ಲಿ ಶ್ರೀನಿವಾಸ್ ಹಾಗೂ ಆರೋಪಿಗಳ ಗುಂಪಿನ ನಡುವೆ ಮಾರಾಮಾರಿಯಾಗಿದೆ. ಜಗಳದಲ್ಲಿ ಮಾರಕಾಸ್ತ್ರಗಳಿಂದ ಶ್ರೀನಿವಾಸ್, ರಂಜಿತ್ ಹಾಗೂ ಶ್ರೀನಿವಾಸನ ತಾಯಿ ಇಂದಿರಾಗೆ ಚಾಕುವಿನಿಂದ ಇರಿಯಲಾಗಿದ್ದು, ಶ್ರೀನಿವಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸದ್ಯಕ್ಕೆ ಶ್ರೀನಿವಾಸ್ ತಾಯಿ ಹಾಗೂ ರಂಜಿತ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿನಯ್, ಅಲೆಕ್ಸ್, ರಂಜಿತ್ ಹಾಗೂ ಪ್ರಶಾಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಪೊಲೀಸರು, ಕೆಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಓರ್ವನ ಕೊಲೆಯಲ್ಲಿ ಅಂತ್ಯ ಕಂಡ ಗಣಪತಿ ವಿಸರ್ಜನಾ ಮೆರವಣಿಗೆ!!
ಬೆಂಗಳೂರು: ನಗರದ ಆಡುಗೋಡಿಯ ರಾಮಾಂಜನೇಯ ದೇವಾಲಯ ರಸ್ತೆಯಲ್ಲಿ ತಡರಾತ್ರಿ ನಡೆದ ಗಣೇಶ ವಿಸರ್ಜನೆ ಮೆರವಣೆಗೆಯ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.ಇದು ರಿವೆಂಜಿಗೆ ಬಿದ್ದ ಹೆಣ!
ಶ್ರೀನಿವಾಸ್ ಎಂಬಾತನೆ ಕೊಲೆಯಾದ ಯುವಕ. ಈತನ ಕೊಲೆಯ ಮೂಲಕ ಎರಡು ಗುಂಪುಗಳ ನಡುವೆ ಇದ್ದ ರಿವೆಂಜಿನ ನಂಜು ಒಬ್ಬನ ಹತ್ಯೆಯೊಂದಿಗೆ ಅಂತ್ಯವಾಗಿದೆ. ಗಣಪತಿ ಮೆರವಣಿಗೆಯಲ್ಲಿ ಹಾದು ಹೋಗುವಾಗ ಯಾಕ್ರೋ ಇಲ್ಲಿ ಡ್ಯಾನ್ಸ್ ಮಾಡ್ತೀರಾ ಅಂದಿದ್ದಕ್ಕೆ ಗಲಾಟೆ ನಡೆದಿದ್ದು ಗಣಪತಿ ಭಕ್ತರು ಎನಿಸಿಕೊಂಡ ಪುಡಿ ರೌಡಿಗಳು ಲಾಂಗ್ ಮಚ್ಚುಗಳನ್ನು ಹೊರತೆಗೆದು ಹೊಡೆದಾಟಕ್ಕೆ ಮುಂದಾಗಿದ್ದಾರೆ. ಕಿರಿಕ್ ಮಾಡಿದ ಶ್ರೀನಿವಾಸನನ್ನು ಮನಬಂದಂತೆ ಕೊಚ್ಚಿ ಹತ್ಯೆ ಗೈದಿದ್ದಾರೆ.
ಗಲಾಟೆಯಲ್ಲಿ ರಂಜಿತ್ ಎಂಬವನಿಗೂ ಗಂಭೀರ ಗಾಯಗಳಾಗಿದ್ದು, ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಲಾಟೆ ಬಿಡಿಸಲು ಬಂದ ಹತ್ಯೆಯಾದ ಶ್ರೀನಿವಾಸನ ತಾಯಿಗೂ ಹಂತಕರ ಗ್ಯಾಂಗ್ ಚಾಕುವಿನಿಂದ ಇರಿದಿದೆ. ಇವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡದಂತೆ ಶ್ರೀನಿವಾಸ್ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾನೆ. ಇವನ ಮಾತಿಗೆ ಕಿಮ್ಮತ್ತು ಬೆಲೆ ಕೊಡದ ಗ್ಯಾಂಗ್ ಮೊದಲೆ ರೇಡಿಮಾಡಿಕೊಂಡು ತಂದಿದ್ದ ಹತಾರಗಳಿಂದ ಶ್ರೀನಿವಾಸನ ಉಸಿರು ನಿಲ್ಲಿಸಿದ್ದಾರೆ.
ಅಂದು ತಡರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಹತ್ಯೆಯಾದ ಶ್ರೀನಿವಾಸ್ ಕೂಡ ಡ್ಯಾನ್ಸ್ ಮಾಡಿದ್ದಾನೆ. ಇದನ್ನು ಗಮನಿಸಿದ ಆರೋಪಿಗಳು ಶ್ರೀನಿವಾಸ್ ಜೊತೆ ಖ್ಯಾತೆ ತೆಗೆದಿದ್ದಾರೆ.ಮನಬಂದಂತೆ ಗಲಾಟೆ ಮಾಡಿ ಈ ಗಣೇಶ ಬಲಿ ಕೇಳುತ್ತಿದೆ ಎಂದು ಜೋರಾಗಿ ಕೂಗಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಲಾಂಗು, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಶ್ರೀನಿವಾಸನನ್ನು ಕೊಲೆ ಮಾಡಿದ್ದಾರೆ.
ಇನ್ನು ಗಲಾಟೆ ಸಂದರ್ಭದಲ್ಲಿ ಓರ್ವ ರೌಡಿಶೀಟರ್ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಘಟನೆ ಸಂಬಂಧ ಅಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ
ಸುಧೀರ್ ವಿಧಾತ ,ಶಿವಮೊಗ್ಗ