ಅರಳಸುರಳಿ ಬೆಂಕಿ ಪ್ರಕರಣ: ಚಿಕಿತ್ಸೆ ಫಲಿಸದೆ ಕೊನೆಯ ಪುತ್ರನೂ ಸಾವು

ಆತ್ಮಹತ್ಯೆಗೆ ಶರಣಾದ ಅರ್ಚಕ ರಾಘವೇಂದ್ರ ಕೇಕುಡ್ ಕುಟುಂಬ!!

ಅರಳಸುರಳಿ ಬೆಂಕಿ ಪ್ರಕರಣ: ಚಿಕಿತ್ಸೆ ಫಲಿಸದೆ ಕೊನೆಯ ಪುತ್ರನೂ ಸಾವು

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಕೊಣಂದೂರು ಸಮೀಪದ ಅರಳಸುರುಳಿ ಗ್ರಾಮದ ಮನೆಯೊಂದರಲ್ಲಿ ರಾತ್ರೊ ರಾತ್ರಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಮೂವರು ಸುಟ್ಟು ಕರಕಲಾದರೆ ಮನೆಯ ಕೊನೆಯ ಮಗ ಭರತ್ ಸಾಕಷ್ಟು ಸುಟ್ಟು ಬದುಕಿಗಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಬದುಕಿಗಾಗಿ ಹೋರಾಟ ನಡೆಸುತ್ತಿದ್ದ. ಆತ ಕೂಡ ( ಭರತ್ (28) ) ಮಂಗಳವಾರ ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಕೊನೆ ಉಸಿರು ಎಳೆದಿದ್ದಾನೆ. ಅಲ್ಲಿ ಒಂದು ಕುಟುಂಬದ ಅಷ್ಟು ಸದಸ್ಯರು ಬೆಂಕಿ ಹಚ್ಚಿಕೊಂಡು ಸಾವಿನ ಮನೆ ಸೇರಿದಂತಾಗಿದೆ!! ಇದೊಂದು ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನುವಂತೆ ಕಂಡರು. ಗ್ರಾಮದ ಅರ್ಚಕರ ಕುಟುಂಬ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎನ್ನುವ ಅನುಮಾನಗಳು ಇವರನ್ನು ಹತ್ತಿರದಿಂದ ಬಲ್ಲ ಸ್ಥಳೀಯ ಗ್ರಾಮಸ್ಥರನ್ನು ಕಾಡುತ್ತಿದೆ.
ಅರಳಸುರುಳಿ ಗ್ರಾಮದ ಅರ್ಚಕ ರಾಘವೇಂದ್ರ ಕೇಕುಡ,‌ ಪತ್ನಿ ನಾಗರತ್ನ ಹಾಗೂ ಹಿರಿಯ ಪುತ್ರ ಶ್ರೀರಾಮ್ ಭಾನುವಾರ ಬೆಳಿಗ್ಗೆಯೆ ಮನೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕೊನೆಯ ಪುತ್ರ ಭರತ್ ಕೂಡ ಸುಟ್ಟು ಗುಟುಕು ಜೀವದೊಂದಿಗೆ ಒದ್ದಾಡುತ್ತಿದ್ದ ಇತನನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಇತನಿಗೂ ಶೇ.50 ರಷ್ಟು ಸುಟ್ಟ ಗಾಯಗಳಾಗಿತ್ತು.
ತಕ್ಷಣ ಇವನನ್ನು ಶಿವಮೊಗ್ಗ ದ ಮೆಗ್ಗಾನ್ ಆಸ್ಪತ್ರೆಗೆ, ನಂತರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಇದು ಬೆಂಕಿ ಆಕಸ್ಮಿಕವೋ, ಕುಟುಂಬ ಸಮೇತ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದು ಮೂಲದ ಪ್ರಕಾರ ಸಾಲದ ಸುಳಿಗೆ ಸಿಲುಕಿ ಮರ್ಯಾದೆಗೆ ಅಂಜಿದ ಕುಟುಂಬ ಆತ್ಮಹತ್ಯೆ ಮಾಡಿಕೊಂಡು ಸಾವುಗೆ ಶರಣಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅದರೂ ಆತ್ಮಹತ್ಯೆ ಮಾಡಿಕೊಂಡು ಸಾಯಲು ಸಾಕಷ್ಟು ವಿಧಾನಗಳಿವೆ ಈ ರೀತಿಯಾಗಿ ಬೆಂಕಿಹಚ್ಚಿಕೊಂಡು ತಮಗೆ ತಾವೆ ಚಿತ್ರಹಿಂಸೆ ಕೊಟ್ಟಿಕೊಂಡು ಸಾಯುವ ಮನಸ್ಸಾದರು ಅರ್ಚಕರ ಕುಟುಂಬಕ್ಕೆ ಬರಲು ಸಾಧ್ಯವೇ ಎನ್ನುವ ನೂರಾರು ಪ್ರಶ್ನೆಗಳು ಇವರನ್ನು ಹತ್ತಿರದಿಂದ ಬಲ್ಲವರಿಗೆ ಕಾಡುತ್ತಿದೆ. ಅದೇನೆ ಇರಲಿ ತೀರ್ಥಹಳ್ಳಿ ತಾಲ್ಲೂಕಿನ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದಾದ ಅರಳಸುರಳಿಯ ಅರ್ಚಕರಾದ ರಾಘವೇಂದ್ರ ಕೇಕುಡ ಅವರ ಕುಟುಂಬ ಯಾರು ಏಣಿಸಲು ಸಾಧ್ಯವಿರದ ರೀತಿಯಲ್ಲಿ ಸಾವಿನ ಮನೆ ಸೇರಿದ್ದಾರೆ.ಅದರೆ ಇವರುಗಳ ಈ ರೀತಿಯ ಸಾವು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿ ಹೋಗಿದೆ. ಎಲ್ಲದಕ್ಕೂ ಪೋಲಿಸ್ ಇಲಾಖೆಯ ತನಿಖೆಯಿಂದಷ್ಟೆ ಸತ್ಯ ಹೊರ ಬರಬೇಕಿದೆ

ಚೈತ್ರಾಳ ಟಿಕೆಟ್ ಡೀಲ್ ಪ್ರಕರಣ : ಮಂಗಳೂರಿನ ವಜ್ರದೇಹಿ ಸ್ವಾಮೀಜಿಗೆ ‘ಸಿಸಿಬಿ’ ನೋಟಿಸ್

ಚೈತ್ರಾಳ ಟಿಕೆಟ್ ಡೀಲ್ ಪ್ರಕರಣ : ಮಂಗಳೂರಿನ ವಜ್ರದೇಹಿ ಸ್ವಾಮೀಜಿಗೆ ‘ಸಿಸಿಬಿ’ ನೋಟಿಸ್

ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ 5 ಕೋಟಿ ವಂಚಿಸಿದ ಚೈತ್ರಾ ಅಂಡ್ ಗ್ಯಾಂಗ್ ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದೇಹಿ ಸ್ವಾಮೀಜಿಗೆ ಸಿಸಿಬಿ ನೋಟಿಸ್ ನೀಡಿದೆ.
ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ವಜ್ರದೇಹಿ ಸ್ವಾಮೀಜಿ ಸಿಸಿಬಿ ವಿಚಾರಣೆ ಎದುರಿಸಬೇಕಾಗಿದೆ.
ಗೋವಿಂದ ಬಾಬು ಪೂಜಾರಿಯ ಟಿಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಶೇಖರಾನಂದ ಸ್ವಾಮೀಜಿ ಅವರು ತನಗೆ ಫೋನ್ ಮಾಡಿದ್ದರು ಎಂದು ಚೈತ್ರಾ ಅವರು ಆದಾಯ ತೆರಿಗೆ ಇಲಾಖೆಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖವಾಗಿತ್ತು.
ಪ್ರಕರಣದ ಪ್ರಧಾನ ಆರೋಪಿಯಾಗಿರುವ ಚೈತ್ರಾ , ಎರಡನೇ ಆರೋಪಿ ಗಗನ್ ಕಡೂರು, ನಾಲ್ಕನೇ ಆರೋಪಿ ರಮೇಶ್ ಕಡೂರು, ಐದನೇ ಆರೋಪಿ ಚನ್ನಾ ನಾಯ್ಕ್ ಆರನೇ ಆರೋಪಿ ಧನರಾಜ್ ಏಳನೇ ಆರೋಪಿ, ಚೈತ್ರಾ ಕುಂದಾಪುರಳ ಆಪ್ತ ಗೆಳೆಯ ಶ್ರೀಕಾಂತ್ ನಾಯಕ್ ಹಾಗೂ ಎಂಟನೇ ಆರೋಪಿ ಪ್ರಸಾದ್ ಬೈಂದೂರು ಅವರು 10 ದಿನಗಳ ಸಿಸಿಬಿ ಕಸ್ಟಡಿ ಮುಗಿಸಿದ್ದು, ನಂತರ ಅವರನ್ನು ಪರಪ್ಪನ ಅಗ್ರಹಾರದ ಸೆರೆಮನೆಗೆ ಶಿಫ್ಟ್ ಮಾಡಲಾಗಿತ್ತು. ಇನ್ನೇನು ಚೈತ್ರಕ್ಕನ ಕೋಟಿ ಎತ್ತುವಳಿಯ ಚೈತ್ರಾ ಯಾತ್ರೆಯಲ್ಲಿದ್ದ 420 ಸದಸ್ಯರನ್ನು ಜೈಲಿಗೆ ಕಳುಹಿಸಿ ಅಯ್ತು ಇನ್ನೇನಿದ್ದರು ಇದರ ಮುಂದುವರಿದ ಭಾಗ ‌ನ್ಯಾಯಲಯದಲ್ಲಿ ಎಂದು ಕೊಂಡವರಿಗೆ ಶಾಖ್ ಆಗಿದೆ.! ಸಿಸಿಬಿ ಪೋಲಿಸರು ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಮಾಡಿದ್ದಾರೆ.ಎನಾಗಲಿದೆ ಎನ್ನುವುದನ್ನು ಸ್ವಾಮೀಜಿಯ ವಿಚಾರಣೆಯ ವರೆಗೂ ಕಾದು ನೋಡಬೇಕು

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!