ಇತಿಹಾಸ ಪ್ರಸಿದ್ಧ, ನಂಬಿದವರನ್ನು ಕಾಪಾಡುವ ” ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮ ಲಿಂಗೇಶ್ವರ ಸ್ವಾಮಿ “

ತುಳುನಾಡ ಜನರ ಆರಾಧ್ಯ ದೈವ , ಮಕರ ಸಂಕ್ರಮಣ ದಿನದಂದು ವಿಜೃಂಭಣೆಯಿಂದ ಪೂಜೆಗೊಳ್ಳುವ ದೇವ , ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದು ಭೂಲೋಕದ ಧರೆಯಲ್ಲಿ ಕಾರಣೀಕ ದೈವವಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿ ನಿಂದವನೇ ಶ್ರೀ ಬ್ರಹ್ಮಲಿಂಗೇಶ್ವರ ದೇವರು
ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ್ರವೇ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ.
ಶ್ರೀ ದೇವಿ ಮೂಕಾಂಬೆಯಿಂದ ಮೂಕಾಸುರನು ಹತನಾದ ಕ್ಷೇತ್ರ ಶ್ರೀ ಮಾರಣಕಟ್ಟೆಯಾಗಿ ಲಕ್ಷಾಂತರ ಭಕ್ತರನ್ನೊಳಗೊಂಡು ಪ್ರಸಿದ್ಧಿ ಪಡೆದಿದೆ.
ಮೂಲೋಕದೊಡತಿ ಶ್ರೀ ಮೂಕಾಂಬಿಕೆಯಿಂದ ಮಡಿದ ಮೂಕಾಸುರ ಶ್ರೀ ದೇವಿಯಿಂದ ವರ ಪಡೆದು ಕಾರಣೀಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ.

ದೇವಾಲಯವಿರುವ ಸ್ಥಳ. ಮಾರನಕಟ್ಟೆ

ಮಾರಣಕಟ್ಟೆ ಕ್ಷೇತ್ರವು ಶಿವಮೊಗ್ಗದಿಂದ 130 ಕಿ.ಮೀಟರ್ ದೂರವು , ಕುಂದಾಪುರದಿಂದ 18 ಕೀ ಮಿ ದೂರ ಮತ್ತು ಕೊಲ್ಲೂರಿನಿಂದ ಎಂಟು ಮೈಲಿ ದೂರದಲ್ಲಿ ವಂಡ್ಸೆ ಮಾರ್ಗದಿಂದ ಕುಂದಾಪುರಕ್ಕೆ ಹೋಗುವ ರಸ್ತೆಯಲ್ಲಿ “ಚಿತ್ತೂರು” ಎಂಬ ಸ್ಥಳದಿಂದ ಒಂದು ಮೈಲಿ ದೂರದ ಒಳಹಾದಿಯಲ್ಲಿ ಹೋಗಬೇಕು. ಇಲ್ಲಿ ಪ್ರಕೃತಿ ಸೌಂದರ್ಯವು ಅತ್ಯಂತ ರಮಣೇಯವಗಿದೆ. ದೇವಸ್ಥಾನದ ಸಮೀಪದಲ್ಲಿ “ಬ್ರಹ್ಮಕುಂಡ” ಎಂಬ ಸಣ್ಣ ನದಿಯು ಹರಿಯುತ್ತದೆ. ಭಕ್ತಾದಿಗಳ ಸ್ನಾನ ಸಂಧ್ಯಾವಂದನೆಗಳಿಗೆ ಉಪಯುಕ್ತವಾಗಿದೆ.

ದೇವಾಲಯದ ಇತಿಹಾಸಸಂಪಾದಿಸಿ

ವೈವಸ್ವತ ಮನ್ವಂತರಾಂತ್ಯದಲ್ಲಿ ಇಪ್ಪತ್ತೆಂಟನೇ ದ್ವಾಪರಯುಗದ ಅಂತ್ಯದಲ್ಲಿ ಪತ್ನಿಸಹಿತನಾದ ಮೂಕಾಸುರನನ್ನು ಕೊಂದ ಮೂಕಾಂಬಿಕೆಯು ಎಲ್ಲಿ ವಾಸ ಮಾಡಿದಳೋ, ಅಂಥಾ ಪ್ರಸಿದ್ಧವಾದ ಕೋಲಪುರ ಕ್ಷೇತ್ರ ದಲ್ಲಿ ದೇವಿಯಿಂದ ಮೂಕಾಸುರನನ್ನು ಎಲ್ಲಿ ನಾಶ ಮಾಡಲ್ಪಟ್ಟನೊ ಆ ಸ್ಥಳವೇ ಮಾರಣಕಟ್ಟೆ ಎಂದು ಪ್ರಸಿದ್ಧಿ ಆಯಿತು. ಮಾರನಕಟ್ಟೆ ಸ್ಥಳದಲ್ಲಿ ಮಣ್ಣಿನ ಪೀಠದಲ್ಲಿ ಬ್ರಹ್ಮಲಿಂಗವೆಂಬ ಹೆಸರಿನಿಂದ ಆ ಮೂಕಾಸುರ ನೆಂಬ ದೈತ್ಯನು ಬಲಿಷ್ಠನಾದ ಭೂತಾದಿಪತಿತ್ವವನ್ನು ಹೊಂದಿದವನಾದನು.
ಯಾವಾಗ ಮೂಕಾಸುರನು ಶ್ರೀದೇವಿಯಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟನೋ ಆ ಪ್ರಾಣ ಹೋಗುವ ಸಮಯದಲ್ಲಿ ಹಿಂದಿನ ಜನ್ಮದ ಪುಣ್ಯಾಂಶದ ಸುಕೃತದಿಂದ ಸದ್ಭುದ್ಧಿಯುಂಟಾಗತಕ್ಕಂಥಾದ್ದಾಯಿತು. ಅಚಲವಾದ ಸದ್ಭಕ್ತಿಯಿಂದ ಜಗಜ್ಜನನಿಯಾದ ಶ್ರೀದೇವಿಯನ್ನು ಸ್ತತಿಸುವವನಾಗಿ ದೇವಿಯನ್ನು ಕುರಿತು ಉದ್ಧಂಡ ನಮಸ್ಕಾರವನ್ನು ಮಾಡುವವನಾದನು. ಮೂಕಾಸುರನ ಸದ್ಭಕ್ತಿಗೆ ಮೆಚ್ಚಿದವಳಾದ ಶ್ರೀದೇವಿಯು “ಎಲೈ ಅಸುರನೇ ನಿನಗೆ ಕಲ್ಯಾಣವಾಗಲಿ ನಿನ್ನ ಮನಸ್ಸಿನಲ್ಲಿ ಏನನ್ನು ಕೇಳಬೇಕೊ ಆ ವರವನ್ನು ಕೇಳುವವನಾಗು” ಎಂದು ಕೇಳಿದಳು ಅದಕ್ಕೆ ಮೂಕಾಸುರನು ಈ ಪ್ರಕಾರ ಕೇಳುವವನಾದನು “ಎಲೈ ಅಂಬಿಕೆಯೇ ನೀನು ನನ್ನ ಮೇಲೆ ಸಂತುಷ್ಟಳಾಗಿ ವರವನ್ನು ಕೊಡುವವಳಾದರೆ ನಿನ್ನ ಸಮೂಪದಲ್ಲೆಯೇ ನಮ್ಮವರಿಂದ ಕೂಡಿದವರಾಗಿ ನಿನ್ನ ಸೇವೆಯನ್ನು ಮಾಡುವಂತೆ ಅನುಗ್ರಹಿಸುವಳಾಗು. ಎಲೈ ಮಹಾದೇವಿಯೇ ನೀನು ವರ ಕೊಡುವವಳಾದರೆ ನನ್ನ ಮನಸ್ಸಿನ ಅಪೇಕ್ಷೆಯಂತೆ ನಿನ್ನ ಚರಣ ಕಮಲ ಸೇವೆ ಮಾಡುವಂತೆಯೂ ನಿನ್ನಲ್ಲಿ ಅಚಂಚಲವಾದ ಭಕ್ತಿಯನ್ನು ಅನುಗ್ರಹಿಸುವವಾಳಾಗು” ಎಂದನು. ಶ್ರೀ ದೇವಿಯು ಮೂಕಾಸುರನ ಈ ಪ್ರಕಾರವಾದ ವಾಕ್ಯವನ್ನು ಕೇಳಿದವಳಾಗಿ ಅವನ ಭಕ್ತಿಗೆ ಮಚ್ಚಿದವಳಾಗಿ ಈ ಪ್ರಕಾರ ಹೇಳುವವಳಾದಳು “ದಾನವೇಂದ್ರನಾದ ಎಲೈ ಮೂಕನೇ ನೀನು ತಪೋಗುಣದಿಂದ ಕೂಡಿದವನಾದ್ದತರಿಂದ ಈ ಹೊತ್ತಿನಿಂದ ನನ್ನ ಸಮೂಪದಲ್ಲಿಯೇ ಭೂತಗಳಿಗೆಲ್ಲಾ ಒಡೆಯನಾಗಿ ವಾಸ ಮಾಡುವವನಾಗು. ನೀನು ಇಲ್ಲಿಯೇ ಮಾರಣಪಟ್ಟವನಾದ್ದರಿಂದ ಭೂತಗಣಗಳಿಗೆಲ್ಲಾ ಮೂಖ್ಯವಾಗಿ ಮಾರನಕಟ್ಟೆ ಬ್ರಹ್ಮನೆಂದು ಪ್ರಸಿದ್ದಿಯುಳ್ಳವನಾಗು ಮತ್ತು ನಿನ್ನ ಪರಿವಾರದವರೂ ಕೂಡ ಮಾರನಕಟ್ಟೆ ಗಣಗಳು ಎಂದು ಪ್ರಸಿದ್ಧರಾಗಲಿ. ಮತ್ತು ನಿನ್ನ ಮರಣವಾದ ಸ್ಥಳವು ಎತ್ತರವಾಗಿ ಕಟ್ಟೆಯಂತೆ ಇರುವುದರಿಂದಲು ‘ಮಾರಣಕಟ್ಟೆ’ ಎಂದು ಈ ಕಲಿಯಗದಲ್ಲಿ ಪ್ರಸಿದ್ದಿಯಾಗಲ್ಪಡಲಿ. ನನ್ನ ಶತ್ರುವಾದ ನೀನು ಯಾವ ಜಾಗದಲ್ಲಿ ಕಟ್ಟೆಯಂತೆ ಇರುವಲ್ಲಿ ಮರಣವನ್ನು ಹೊಂದಿದೆಯೋ ಆ ಸ್ಥಳವು ನಿನ್ನ ಪ್ರಾರ್ಥನೆ ಮೇರೆಗೆ ಕಲಿಯುಗದಲ್ಲಿ ಮಾರನಕಟ್ಟ್ಟೆ ಎಂದು ಪ್ರಸಿದ್ದಿ ಹೊಂದಲಿ. ಮತ್ತು ನಿನ್ನ ಸಹಾಯಕ್ಕಾಗಿ ಯಕ್ಷೇಶ್ವರಿಯನ್ನು ಚೌಂಡೇಶ್ವರಿಯನ್ನು ಕೊಡುವವಳಾಗುತ್ತೇನೆ. ಇವರಿಬ್ಬರ ಶಕ್ತಿಯಿಂದ ಕೂಡಿದವನಾಗಿಯೂ (ಸ್ವ) ನಿನ್ನವರಾದ ಗಣಗಳಿಂದ ಕೂಡಿದವನಾಗಿ ಸದರಿಸ್ಥಳದಲ್ಲಿ ವಾಸವನ್ನು ಮಾಡುವವನಾಗು. ಇಂದಿನಿಂದ ನೀನು ನನ್ನ ಸೇವಕನಾಗಿ ಈ ಕೋಲಾಪುರ ಸಮೀಪದಲ್ಲಿಯೇ ವಾಸ ಮಾಡುವವನಾಗಿ ನನ್ನ ಸಂತೋಷಕ್ಕಾಗಿ ಧರ್ಮಕರ್ಮಾದಿಗಳನ್ನು ಸದಾಕಾಲ ಮಾಡುವವನಾಗು. ಯಾರು ಸಜ್ಜನರ ವಸ್ತುಗಳನ್ನು ಅಪಹರಿಸುತ್ತಾರೋ ಅಂಥಾ ದುಷ್ಟರನ್ನು ಪೀಡಿಸಿ, ಸಜ್ಜನರ ಬೇಡಿಕೆಯನ್ನು ನೆರವೇರಿಸುವವನಾಗು. ಸಜ್ಜನರಿಗೆ ಅವರ ವಸ್ತುವನ್ನು ಸಿಕ್ಕುವಂತ ಮಾಡಿ, ಸಿಕ್ಕಿದ ಸೊತ್ತಿನ ಹತ್ತನೇ ಒಂದು ಪಾಲಿನಂತೆ ಸ್ವೀಕಾರ ಮಾಡಿದವನಾಗಿ ಅದರಿಂದ ಅನೇಕ ಸ್ತ್ಕಾರ್ಯಾದಿಗಳನ್ನು ಮಾಡುವವನಾಗು. ಸತ್ಯಾಸತ್ಯದ ಬಗ್ಗೆ ಯಾರು ಪ್ರಮಾಣ ಮಾಡುತ್ತಾರೋ ನನ್ನನ್ನು ನನ್ನ ಭಕ್ತರನ್ನು ಮತ್ತು ನಿನ್ನನ್ನೂ ಸಹ ಯಾರು ನಿಂದನೆಯನ್ನು ಮಾಡುತ್ತಾರೋ, ಅಂಥವರನ್ನು ಶಿಕ್ಷಿಸಿ ಅವರವರ ಅಪರಾದಕ್ಕೆ ತಕ್ಕಂತೆ ದಂಡವನ್ನು ಧನದ ರೋಪವಾಗಿ ವಸೂಲು ಮಾಡಿ ಆ ಹಣವನ್ನು ಸತ್ಕಾರ್ಯಾದಿಗಳಿಗೆ ವಿನಿಯೋಗಿಸುವವನಾಗು. ಯಾರು ಭೂತಾದಿಗಳಿಗೆ ಆವೇಶರಾದರು ಮತ್ತು ಯಾರು ಭಯಾದಿಗಳಿಂದ ಕೂಡಿದವರಾಗಿ ಯಾರು ನನ್ನನ್ನು ಪ್ರಾರ್ಥಿಸುತ್ತಾರೋ ಅವರನ್ನು ನೇನು ಸಂರಕ್ಷಿಸಿ ಶಕ್ತ್ಯಾನುಸಾರ ಅವರಿಂದ ಧನವನ್ನು ಸಂಗ್ರಹಿಸಿ ಧರ್ಮಾದಿ ಸತ್ಕಾರ್ಯವನ್ನು ಮಾಡುವವನಾಗು ಮತ್ತು ವಿವಾಹ ಕಾಲದಲ್ಲಿ ಪುತ್ರೋತ್ಸವ ಕಾಲದಲ್ಲಿ ಚಿನ್ನವನ್ನಾಗಲಿ, ಭೂಮಿಯನ್ನಾಗಲಿ, ಧನವನ್ನಾಗಲಿ ವ್ಯಾಪಾರ ಇತ್ಯಾದಿಗಳಲ್ಲಿ ಅವರಿಗೆ ವಿಘ್ನಾದಿ ತೊಂದರೆಗಳನ್ನು ನಿವಾರಣೆ ಮಾಡಿ ಅವರಿಂದ ಧನಾಧಿಗಳನ್ನು ತೆಗೆದುಕೊಂಡು ದೋಷಹರಿತ ಸತ್ಕಾರ್ಯಾದಿಗಳನ್ನು ನಡೆಸು. ಜನರಿಗೆಲ್ಲಾ ಸದ್ಭುದ್ದಿಯನ್ನುಂಟುಮಾಡಿ ನನ್ನ ಉತ್ಸವಾದಿ
ಕಾರ್ಯಕಲಾಪಗಳಲ್ಲಿ ಬಂದು ಸೇವಾ ಕಾರ್ಯಾದಿಗಳನ್ನು ಮಾಡಿಸಿ ಮತ್ತು ನಿನ್ನ ಶಕ್ತಿಗಳಿಂದಲೂ ನರವೇರಿಸಿ ಅನನ್ಯವಾದ ಭಕ್ತಿಯಿಂದ ಸತ್ಕಾರ್ಯವನ್ನು ಮಾಡುವವನಾಗು. ಕಲಿಯುಗದ ಒಂದು ಪಾಲು ಕಳೆಯುವ ನಾಲ್ಕು ಸಾವಿರ ವರ್ಷಗಳ ಕಾಲದಲ್ಲಿ ನನ್ನ ದರ್ಷನಾಕಾಂಕ್ಷೆಯಾಗಿ ತೌಳವ ದೇಶದ ವೈಷ್ಣವ್ಯಾಗ್ರಣಿಯಾದ ಯತೀನ್ವಠನೊಬ್ಬನು ಈ ಕ್ಷೇತ್ರಕ್ಕೆ ಬರುವವನಾಗುತ್ತಾನೆ. ಕಲಿಯ ಪ್ರಾಬಲ್ಯದಿಂದ ಇನ್ನೂರ ಅರವತ್ತಾರು ವರ್ಷ ಕಾಲದಲ್ಲಿ ಸದ್ರಿ ಗ್ರಾಮದಲ್ಲಿ ಕ್ಷೇಮ ಡಾಮರಾ ದ್ಯೋತ ದ್ರವ್ಯಗಳಿಂದ ದರಿದ್ರತ್ವ ಉಂಟಾಗಿ ಕುಗ್ರಾಮವಾಗಿ ಗಣಗಳಿಂದ ಕೂಡಿದ ನೀನು ಸತ್ವಹೀನನಾಗತಕ್ಕಂಥವನಾಗುವಿ. ನೀನು ನಿತ್ಯವೂ ನನ್ನ ಆರಾಧನೆಯಿಂದ ಸಂತುಷ್ಟ ಮನಸ್ಸುಳ್ಳವನಾಗಿ ನನ್ನ ಸನ್ನಿಧಾನದಲ್ಲಿಯೇ ಇದ್ದಂತೆ ಭಾವನೆಯನ್ನು ಮಾಡೀಕೊಳ್ಳುವವನಾಗು ಹೀಗೆ ಕೆಲವು ಕಾಲಕ್ರಮೇಣ ನೀನು ಮೂಲಸ್ಥಳವಾದ ಮಾರಣಕಟ್ಟೆಯೆಂಬಲ್ಲಿ ಪೂರ್ವದಂತೆ ವಾಸ ಮಾಡಿದವನಾಗಿದ್ದು ನಿನ್ನ ಶಕ್ತಿಯಿಂದಲೂ ಮತ್ತು ನನ್ನ ಅನುಗೃಹ ಶಕ್ತಿಯಿಂದಲೂ ಮುಂಚಿನಂತೆಯೇ ಧರ್ಮ ಆಮೆಶ ವಚನಾದಿ ನಿಯಮವನ್ನು ಮಾಡುವವನಾಗು.” ಶ್ರೀದೇವಿಯು ಮೂಕದೈತ್ಯನನ್ನು ಕುರಿತು ಈ ಪ್ರಕಾರ ಆಜ್ಞೆ ಮಾಡಿ ನಿಸರ್ಗವಾದ ಮೂಕಾಸುರ ಇತ್ಯಾದಿ ವರ್ಗದ ಮುಂಬಾಗದಲ್ಲಿಯೇ ಶಿವನಿಂದ ಕೂಡಿದವಳಾಗಿ ಕೋಲಾಪುರದ ಸರ್ವಾತ್ಮ ಸ್ವರೂಪವಾದ ದಿವ್ಯ ಲಿಂಗದಲ್ಲಿ ಐಕ್ಯಳಾದಳು. ಆ ಲಿಂಗದಲ್ಲಿ ಐಕ್ಯ ಹೊಂದಿದ ದಿನದಿಂದ ತ್ರಿಗುಣಾತ್ಮಕ ಶಕ್ತಿಯುಳ್ಳ ಮಹಾಲಕ್ಷ್ಮಿಯು ಶಕ್ತಿಯಿಂದಲೂ ಶಿವನಿಂದಲೂ ಕೂಡಿದವಳಾಗಿ ಮೂಕಾಸುರನನ್ನು ಕೊಂದವಳಾದ್ದರಿಂದ “ಮೂಕಾಂಬಿಕೆ”[೫][೬] ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿಯೂ ಭಕ್ತಾಧಿಗಳ ಇಷ್ಟಾರ್ಥವನ್ನು ಅನುಗ್ರಹಿಸುವುದಕ್ಕೆ ಕಾಮದೇನುವಿನಂತೆ ಇರತಕ್ಕವಳಾಗಿ ಪ್ರಸಿದ್ಧಿಯನ್ನು ಹೊಂದಿದಳು. ಮೂಕಾಸುರನು ಕೂಡಲೆ ತನ್ನ ಅಸುರೀ ಶರೀರ ಸ್ವಭಾವವನ್ನು ಬಿಟ್ಟವನಾಗಿ ಭೂತಪತಿಯಾದ “ಬ್ರಹ್ಮಲಿಂಗತ್ವ”ವನ್ನು ಪಡೆದು ದೇವಿಯ ಸಮೂಪದಲ್ಲಿಯೇ ರಾರಾಜಿಸುತ್ತ ತನ್ನ ಶಕ್ತಿಯಿಂದಲೂ ಶ್ರೀ ದೇವಿಯ ಅನುಗ್ರಹಶಕ್ತಿಯಿಂದಲೂ ನಾನಾ ಕರ್ಯಾತತ್ವರನಾಗುವವನಾದನು.
ಹೀಗೆ ಮೂಕಾಸುರನು ಅಸುರನಾದರೂ ಸಹ ಶ್ರೀ ದೇವಿಯಿಂದ ವರವನ್ನು ಪಡೆದು “ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ” ಎಂದು ಹೆಸರು ಪಡೆದುಕೊಂಡನು.

ಈ ಮೇಲ್ಕಂಡ ಮಾಹಿತಿಯನ್ನು “ಎಸ್. ಸುಬ್ರಹ್ಮಣ್ಯ ಐಯ್ಯರ್”ರವರ “ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ- ಶ್ರೀ ಬ್ರಹ್ಮಲಿಂಗೇಶ್ವರ ದೇವರು” ಎನ್ನುವ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!