ಕುಂದಾಪುರ : ಸಿದ್ದಾಪುರದ ಹೆಸರಾಂತ ಉದ್ಯಮಿ “ಉದಯ್ ಚಾತ್ರ” ಆತ್ಮಹತ್ಯೆಗೆ ಶರಣು.
news.ashwasurya.in
ಅಶ್ವಸೂರ್ಯ/ ಕುಂದಾಪುರ : ಕುಂದಾಪುರ ತಾಲೂಕಿನ ಸಿದ್ದಾಪುರದ ಚಾತ್ರ ಎಂಟರ್‌ಪ್ರೈಸಸ್ ಮಾಲೀಕ ಉದಯ ಚಾತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಅವರಿಗೆ 43 ವರ್ಷ ವಯಸ್ಸಾಗಿತ್ತು. ಮೇಲ್ನೋಟಕ್ಕೆ ಅವರಿಗೆ ಯಾವುದೇ ತೊಂದರೆ ಇರಿವುದು ಕಾಣುತ್ತಿರಲಿಲ್ಲ.
ಸೆ.17 ರಂದು ಬುಧವಾರ ಬೆಳಿಗ್ಗೆ ಕಮಲಶಿಲೆಯಲ್ಲಿ ನಡೆದ ಸಹಕಾರಿ ಸಂಘವೊಂದರ ವಾರ್ಷಿಕ ಮಹಾಸಭೆಗೆ ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜೊತೆಯಲ್ಲಿ ತೆರಳಿದ್ದರು. ಬಳಿಕ ಅವರನ್ನು ಮಹಾಸಭೆಯಲ್ಲಿ ಬಿಟ್ಟು ಸಿದ್ದಾಪುರದಲ್ಲಿರುವ ಚಾತ್ರ ಎಂಟರ್ ಪ್ರೈಸಸ್ ಗೆ ಹೋಗುವುದಾಗಿ ಹೇಳಿ ಅಲ್ಲಿಂದ ವಾಪಸ್ ಬಂದಿದ್ದಾರೆ.

ಆದರೆ ಕಮಲಶಿಲೆಯಿಂದ ತನ್ನ ಅಂಗಡಿಗೆ ಹೋಗದೆ ನೇರವಾಗಿ ಮನೆಗೆ ಕಡೆ ತೆರಳಿದ್ದಾರೆ.ಮನೆಗೆ ಹೋದವರೆ ನೇಣಿನ ಕುಣಿಕೆಗೆ ಕೊರಳೊಡ್ಡಿ ಸಾವಿನ ಮನೆ ಸೇರಿದ್ದಾರೆ.!
ಉದಯ ಚಾತ್ರ ಅವರು ಮೃದು ಭಾಷಿಗರಾಗಿದ್ದು, ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದರು. ಅಲ್ಲದೇ, ಚಾತ್ರ ಎಂಟರ್‌ಪ್ರೈಸಸ್ ನಲ್ಲಿ ಚೆನ್ನಾಗಿಯೇ ವ್ಯವಹಾರ ನಡೆಯುತ್ತಿತ್ತು.ಜೋತೆಗೆ ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿತ್ತು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.


