ಶೃಂಗೇರಿ : ಹಿಂದೂ ಮಹಿಳೆ ಜೋತೆಗೆ ವಸತಿ ಗೃಹಕ್ಕೆ ಹೊದ ಅಬ್ದುಲ್ ನಕಲಿ ಆಧಾರ್ ಕಾರ್ಡ್ ಕೊಟ್ಟು ರಮೇಶನಾಗಿ ಬದಲಾಗಿದ್ದ.!

news.ashwasurya.in
ಅಶ್ವಸೂರ್ಯ/ಶೃಂಗೇರಿ : ಹಿಂದೂ ಮಹಿಳೆಯೊಂದಿಗೆ ವಸತಿ ಗಹಕ್ಕೆ ಹೋಗಿದ್ದ ಅಬ್ದುಲ್ ಸಮದ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ‘ರಮೇಶ್’ ಎಂಬ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಈ ಘಟನೆ ನೆಡೆದದ್ದು ಚಿಕ್ಕಮಗಳೂರು ಜಿಲ್ಲೆಯ ಶ್ರೀ ಕ್ಷೇತ್ರ ಶೃಂಗೇರಿ ಪಟ್ಟಣದಲ್ಲಿ ಹಿಂದೂ ಮಹಿಳೆಯೊಬ್ಬರ ಜೊತೆಗೆ ಲಾಡ್ಜ್ಗೆ ಹೋಗಿದ್ದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಆತ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದು ಬಯಲಾಗಿದೆ.
ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಮೂಲದ ಅಬ್ದುಲ್ ಸಮದ್ (42) ಎಂಬ ವ್ಯಕ್ತಿ, ಶೃಂಗೇರಿ ತಾಲ್ಲೂಕಿನ 38 ವರ್ಷದ ಹಿಂದೂ ಮಹಿಳೆಯೊಬ್ಬರ ಜೊತೆ ಲಾಡ್ಜ್ಗೆ ಹೋಗಿದ್ದನು. ಈ ವೇಳೆ, ಇಬ್ಬರೂ ಅನುಮಾನ ಬಾರದ ಹಾಗೆ ನಾಟಕವಾಡಿ ಲಾಡ್ಜ್ನಲ್ಲಿ ರೂಮ್ ಪಡೆದಿದ್ದರಂತೆ.! ಆದರೆ, ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದಾಗ, ಸಮದ್ ಕೊಟ್ಟ ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ, ಅದು ನಕಲಿ ಎಂದು ಗೊತ್ತಾಗಿದೆ. ಅಬ್ದುಲ್ ಸಮದ್ ತನ್ನ ಅಸಲಿ ಹೆಸರನ್ನು ಬದಲಿಸಿ, ‘ರಮೇಶ್’ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ಎಡಿಟ್ ಮಾಡಿಸಿಕೊಂಡಿದ್ದನು.ತಕ್ಷಣವೇ ಲಾಡ್ಜ್ ಸಿಬ್ಬಂದಿ ಸ್ಥಳೀಯ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಈ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಶೃಂಗೇರಿ ಪೊಲೀಸರು ಅಬ್ದುಲ್ ಸಮದ್ ಮತ್ತು ಆತನ ಜೊತೆಗಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ನಂತರದ ತನಿಖೆಯಲ್ಲಿ ರಮೇಶ ಅಲ್ಲಾ ಅತ ಅಬ್ದುಲ್ ಸಮದ್ ಎಂದು ತಿಳಿದಿದೆ.ಅತ ಬೇರೆ ಕೋಮಿನ ವ್ಯಕ್ತಿಯಾಗಿದ್ದು, ಹಿಂದೂ ಹೆಸರಿನಲ್ಲಿ ಗುರುತಿನ ಚೀಟಿ ನಕಲಿ ಮಾಡಿಸಿಕೊಂಡಿದ್ದು ದೃಢಪಟ್ಟಿದೆ. ಸದ್ಯ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು ಪೋಲಿಸರು ಸಾಕಷ್ಟು ಎಚ್ಚರ ವಹಿಸಬೇಕಿದೆ.


