10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು.! ಕೊನೆಗೂ ಸಿಕ್ಕಿ ಬಿತ್ತು.!
news.ashwasurya.in
ಅಶ್ವಸೂರ್ಯ/ಉತ್ತರ ಪ್ರದೇಶ : ವಿದ್ಯಾರ್ಥಿಯನ್ನು ಬೆಂಬಿಡದೆ ಕಾಡಿದ್ದ ನಾರರಹಾವೊಂದು ಕೊನೆಗೂ ಸೆರೆಯಾಗಿದೆ. ಉರಗ ತಜ್ಞರ ನೆರವಿನಿಂದ ಕೊನೆಗೂ ಹಾವನ್ನು ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ.ದಿನನಿತ್ಯ ಭಯದಲ್ಲೇ ದಿನ ದೂಡುತ್ತಿದ್ದ ವಿದ್ಯಾರ್ಥಿನಿ ಈಗ ನಿಟ್ಟುಸಿರು ಬಿಡುವಂತಾಗಿದೆ.
ಹಾವಿನ ಕಾಟಕ್ಕೆ ಬೇಸತ್ತಿದ್ದ, ಹಾವಿನಿಂದ ಕಚ್ಚಿಸಿಕೊಂಡು ಪ್ರತಿ ಕ್ಷಣವೂ ಭಯದಲ್ಲೇ ಕಾಲ ಕಳೆಯುತ್ತಿದ್ದ ಹುಡುಗಿಗೆ ಈಗ ನೆಮ್ಮದಿಯಾಗಿದೆ. ಸುಮಾರು 40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಯನ್ನು ಕಚ್ಚಿದೆ ಎಂದು ತಿಳಿದು ಬಂದಿದೆ.! ಸತತ ಐದು ಗಂಟೆಗಳ ಸುದೀರ್ಘ ಪ್ರಯತ್ನದಿಂದ ಸ್ನೇಕ್ ರೆಸ್ಕ್ಯೂ ಟೀಂ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಈ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಭೈಷಪ್ಪರ್ ಗ್ರಾಮದಲ್ಲಿ ನಡೆದಿದೆ. ಹಾವು 15 ವರ್ಷದ ರಿಯಾ ಮೌರ್ಯಳನ್ನು ಬೆನ್ನು ಹತ್ತಿತ್ತು. ರಿಯಾ ಮೌರ್ಯ, 9ನೇ ತರಗತಿ ವಿದ್ಯಾರ್ಥಿನಿ. ಜುಲೈ 22 ರಂದು ಮೊದಲ ಬಾರಿ ರಿಯಾಗೆ ಹಾವು ಕಚ್ಚಿತ್ತು. 22 ರಂದು ನಾಟಿಗೆಂದು ಭತ್ತದ ಗೆದ್ದೆಗೆ ಹೋದಾಗ ಮತ್ತೆ ರಿಯಾ ಮೌರ್ಯಗೆ ಹಾವು ಕಚ್ಚಿತ್ತು. ತಕ್ಷಣ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತ್ರ ಆಕೆಯನ್ನು ಮಂಜನ್ಪುರ ತೇಜ್ಮತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ರಿಯಾ ಮೌರ್ಯ ಚೇತರಿಸಿಕೊಳ್ತಿದ್ದಂತೆ ಆಕೆಯನ್ನು ಮನೆಗೆ ಕರೆತರಲಾಗಿತ್ತು.ಆದ್ರೆ ಹಾವು ಮಾತ್ರ ರಿಯಾ ಮೌರ್ಯ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿತ್ತು. ಆಗಸ್ಟ್ 13 ಮತ್ತು ಆಗಸ್ಟ್ 27 ರಿಂದ 30ರವರೆಗೆ ನಾಲ್ಕು ಬಾರಿ ಹಾವು ಕಚ್ಚಿತ್ತು. ಸೆಪ್ಟೆಂಬರ್ 3 ರಂದು ರಿಯಾಗೆ ಹಾವು ಕಚ್ಚಿತ್ತು. ಸ್ನಾನ ಮಾಡುವಾಗ ಇಲ್ಲ ಮನೆ ಕೆಲಸ ಮಾಡುವಾಗ ರಿಯಾಗೆ ಹಾವು ಕಚ್ಚುತ್ತಿತ್ತು.
ಮಗಳಿಗೆ ಹಾವು ಕಚ್ಚುತ್ತಿದ್ದರಿಂದ ಕಂಗಾಲಾಗಿದ್ದ ಮನೆಯವರು ರಿಯಾಳನ್ನು ಬೇರೆಡೆಗೆ ಕರೆದುಕೊಂಡು ಹೋಗಲು ತಯಾರಾಗಿದ್ದರು.ಜೋತೆಗೆ ಇಡೀ ಕುಟುಂಬವೆ ಹಾವಿನ ಕಾಟಕ್ಕೆ ಭಯಗೊಂಡಿತ್ತು. ರಿಯಾ ಮೌರ್ಯ ತಂದೆ ರಾಜೇಂದ್ರ ಮೌರ್ಯ ಹಾವು ಕಚ್ಚಿದಾಗಲೆಲ್ಲ ಮಗಳಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರೆ ಇನ್ನೊಂದು ಕಡೆ ಎಲ್ಲರೂ ಭಯಗೊಂಡು ದಿನಕಳೆಯುತ್ತಿದ್ದರು
ಹಾವಿನಿಂದ ರಿಯಾಳನ್ನು ಬಚಾವ್ ಮಾಡಲು ಮುಂದಾದ ಮನೆಯವರು ರಿಯಾಳನ್ನು ಆಕೆಯನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಕುಟುಂಬಸ್ಥರು ಕೂಡ ಮನೆ ಖಾಲಿ ಮಾಡಿದ್ದರು. ಕಳೆದ ಒಂದೆರಡು ದಿನದ ಹಿಂದೆ ರಿಯಾ ತಂದೆ ರಾಜೇಂದ್ರ ಮೌರ್ಯ ಕೆಲಸದ ಮೇಲೆ ಮನೆಗೆ ಬಂದಿದ್ದರು. ಈ ವೇಳೆ ಫ್ರಿಡ್ಜ್ ಬಳಿ ಹಾವು ಪೊರೆ ಬಿಟ್ಟಿರುವುದನ್ನು ಗಮನಿಸಿದ್ದಾರೆ. ಹಾವು ಮನೆಯಲ್ಲೇ ಎಲ್ಲೋ ಇದೆ ಎನ್ನುವ ಅನುಮಾನ ಅವರಿಗೆ ಕಾಡಿದೆ . ತಕ್ಷಣ ಹಾವು ಹಿಡಿಯುವವರನ್ನು ಕರೆಸಿದ್ದಾರೆ. ಐದು ಗಂಟೆಗಳ ಹುಡುಕಾಟದಿಂದ ಕೊನೆಗೂ ಹಾವು ಸೇರೆ ಸಿಕ್ಕಿಬಿದ್ದಿದೆ. ರಾಜೇಂದ್ರ ಮೌರ್ಯ ಮನೆಗೆ ಬಂದ ಉರುಗ ತಜ್ಞರು ಕೊನೆಗೂ ಹಾವನ್ನು ಹಿಡಿದಿದ್ದಾರೆ. ಮನೆಯ ಗೋಡೆ ಅಗೆದು, ಹಾವನ್ನು ಹಿಡಿಯಲಾಗಿದೆ. ಇದರಿಂದ ರಿಯಾ ಕುಟುಂಬ ನೆಮ್ಮದಿಯಾಗಿದೆ. ರಿಯಾಗೆ ಕಚ್ಚುತ್ತಿದ್ದ ಹಾವು ಇದೇ ಎಂದು ಕುಟುಂಬಸ್ಥರು ಹೇಳುತಿದ್ದರೆ. ಸ್ಥಳೀಯರು ಮಾತ್ರ ಎರಡು ಹಾವಿದ್ದು, ಒಂದನ್ನು ಮಾತ್ರ ಹಿಡಿಯಲಾಗಿದೆ. ಇನ್ನೊಂದು ತಪ್ಪಿಸಿಕೊಂಡಿದೆಯಂತೆ.!? ಪ್ರತಿ ಬಾರಿಯು ಹಾವು ಕಚ್ಚಿದಾಗಲೇಲ್ಲ ಆಸ್ಪತ್ರೆಯಿಂದ ರಿಯಾಳನ್ನು ಮನೆಗೆ ಕರೆದುಕೊಂಡು ವಾಪಸ್ ಬರುತ್ತಿದ್ದಂತೆ ಹಾವು ಸೇಡು ತೀರಿಸಿಕೊಳ್ಳುವಂತೆ ಆಕೆಗೆ ಕಚ್ಚುತ್ತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ರಿಯಾ ಕಾಲು ಸುತ್ತಿಕೊಂಡು ಕಚ್ಚುತ್ತಿತ್ತಂತೆ. ಕಚ್ಚಿದ ಹಾವು ಕಪ್ಪು ನಾಗರ ಎನ್ನಲಾಗುತ್ತಿದೆ.


