ಕುಂದಾಪುರ :ಕಮಲಶಿಲೆ ಚಲಿಸುತ್ತಿದ್ದ ಬೈಕ್ ಮೇಲೆ ಹಾರಿದ ಕಡವೆ – ಬೈಕ್ ಸವಾರ ಸ್ಥಳದಲ್ಲೇ ಸಾವು.!

news.ashwasurya.in
ಅಶ್ವಸೂರ್ಯ/ಕುಂದಾಪುರ: ಸೆಪ್ಟೆಂಬರ್ 14 ರಂದು ಚಲಿಸುತ್ತಿದ್ದ ಬೈಕ್ ಮೇಲೆ ಕಡವೆಯೊಂದು ರಸ್ತೆಯ ಅಡ್ಡಲಾಗಿ ಬೈಕಿನ ಮೇಲೆ ಹಾರಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಸವಾರ ಮೃತಪಟ್ಟಿದ್ದು,ಬೈಕಿನ ಹಿಂಬದಿ ಕುಳಿತಿದ್ದ ಯುವಕ ಗಾಯಗೊಂಡರೆ.ಬೈಕಿನ ಮೇಲೆ ಹಾರಿದ ಕಡವೆ ಡಿಕ್ಕಿಯ ರಭಸಕ್ಕೆ ಪ್ರಾಣ ಬಿಟ್ಟಿದೆ.!ಈ ಘಟನೆ ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪದ ತಾರೆಕೊಡ್ಲು ಎಂಬಲ್ಲಿ ಸಂಭವಿಸಿದೆ.
ಶ್ರೇಯಸ್ ಮೊಗವೀರ ನೆಲ್ಲಿಕಟ್ಟೆ (22) ಮೃತಪಟ್ಟ ಯುವಕ. ಪಡುವಾಲೂರರು ನಿವಾಸಿ ವಿಠಲ ಅವರ ಪುತ್ರ ವಿಪ್ಪೇಶ್ (19) ಗಂಭೀರವಾಗಿ ಗಾಯಗೊಂಡಿದ್ದು,

ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ನೇಹಿತರಿಬ್ಬರು ಕಮಲಶಿಲೆಯ
“ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ” ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ವಾಪಸಾಗುತ್ತಿರುವಾಗ ತಾರೆಕೊಡ್ಲು ಬಳಿ ಏಕಾಏಕಿ ದೊಡ್ಡ ಕಡೆವೆಯೊಂದು ಬೈಕಿಗೆ ಅಡ್ಡ ಬಂದಿದ್ದು, ಬೈಕ್ ಅದಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತು. ಬೈಕ್ ನಜ್ಜು ನುಜ್ಜಾಗಿದೆ. ಕಡವೆ ಕೂಡ ಸ್ಥಳದಲ್ಲೇ ಮೃತಪಟ್ಟಿದೆ.

ನೆಲ್ಲಿಕಟ್ಟೆ ಸುರೇಶ ಮೊಗವೀರ ಹಾಗೂ ಯಶೋದಾ ಮೊಗವೀರ ದಂಪತಿಯ ಇಬ್ಬರು ಮಕ್ಕಳಲ್ಲಿ ಶ್ರೇಯಸ್ ಕಿರಿಯ ಪುತ್ರ. ಹಿರಿಯ ಪುತ್ರಿಗೆ ಮದುವೆಯಾಗಿದೆ. ಶ್ರೇಯಸ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


