ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಕ್ರಿಕೆಟ್ ಪಂದ್ಯಾವಳಿಯ – ಜೆರ್ಸಿ ಅನಾವರಣಗೊಳಿಸಿದ ಆಯುಕ್ತ ಮಾಯಣ್ಣಗೌಡ.

news.ashwasurya.in
ಅಶ್ವಸೂರ್ಯ ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ “ಪೌರಕಾರ್ಮಿಕರ ಕಪ್” ಕ್ರಿಕೆಟ್ ಪಂದ್ಯಾವಳಿಯ ಜೆರ್ಸಿ ಅನಾವರಣ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಅತಿಥಿಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ, ನೌಕರರ ಸಂಘದ ಅಧ್ಯಕ್ಷ ಗೋವಿಂದಣ್ಣ, ಅಡ್ಮಿನ್ ತುಷಾರ್ ಬಿ., ಹಾಗೂ ಪಂದ್ಯಾವಳಿಯಲ್ಲಿ ಭಾಗವಹಿಸುವ 8 ತಂಡಗಳ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತ ಮಾಯಣ್ಣ ಗೌಡ ಅವರು, “ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ, ಅವರಿಗಾಗಿ ಇಂತಹ ಕ್ರೀಡಾ ಕಾರ್ಯಕ್ರಮಗಳು ಆಯೋಜನೆ ಮಾಡುವುದು ಸಂತೋಷದ ವಿಷಯ. ಇದು ಒಗ್ಗಟ್ಟನ್ನು ಹೆಚ್ಚಿಸಿ, ಕ್ರೀಡಾ ಮನೋಭಾವವನ್ನು ಬೆಳೆಸುತ್ತದೆ” ಎಂದು ಹೇಳಿದರು. ಅಧ್ಯಕ್ಷ ಗೋವಿಂದಣ್ಣ ಅವರು ಪಂದ್ಯಾವಳಿಯ ಯಶಸ್ವಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಯುಕ್ತರಾದ ಮಾಯಣ್ಣ ಗೌಡರು ಪಂದ್ಯಾವಳಿಯ ಎಂಟು ತಂಡಗಳ ಜೆರ್ಸಿ ಬಿಡುಗಡೆ ಮಾಡಿ, ತಂಡಗಳಿಗೆ ಹಸ್ತಾಂತರಿಸಿದರು.ಪಂದ್ಯಾವಳಿಯಿ ಸೆ,14 ರಂದು ಭಾನುವಾರ ಆರಂಭವಾಗಲಿದ್ದು ಎಂಟು ತಂಡಗಳು ಪ್ರಶಸ್ತಿಗಾಗಿ “ಸೆಣಸಾಟ”ನೆಡಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

