
ಬೆಂಗಳೂರು : ಡ್ರಗ್ಸ್ ಮಾರಾಟ ದಂಧೆಗೆ ಪೊಲೀಸರ ಸಾಥ್.! ತಿಂಗಳಿಗೆ ಪೆಡ್ಲರ್ಗಳಿಂದ 2 ಲಕ್ಷ ಮಾಮೂಲಿ.! ಇನ್ಸ್ಪೆಕ್ಟರ್ ಸೇರಿ 11 ಮಂದಿ ಸಸ್ಪೆಂಡ್.
news.ashwasurya.in
ಅಶ್ವಸೂರ್ಯ/ಬೆಂಗಳೂರು : ಡ್ರಗ್ಸ್ ಮುಕ್ತ ಬೆಂಗಳೂರು ಅಭಿಯಾನಕ್ಕೆ ಕಪ್ಪುಚುಕ್ಕೆ ಇಟ್ಟ ಹನ್ನೊಂದು ಮಂದಿ ದುರಾಸೆ ಖಾಕೀಗಳು.!ಹೌದು ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಗಳ 11 ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್ಗಳ ಜೊತೆ ಶಾಮೀಲಾಗಿ ಮಾತ್ರೆ ಮಾರಾಟಕ್ಕೆ ರಕ್ಷಣೆ ನೀಡುತ್ತಿದ್ದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಮಾಸಿಕ ಲಕ್ಷಾಂತರ ರೂ. ಮಾಮೂಲಿ ಪಡೆಯುತ್ತಿದ್ದ ಆಘಾತಕಾರಿ ಸಂಗತಿ ಈಗ ಬಯಲಾಗಿದೆ.

ರಾಜ್ಯ ಸರ್ಕಾರದ ‘ಡ್ರಗ್ಸ್ ಮುಕ್ತ ಬೆಂಗಳೂರು’ ಕನಸಿಗೆ ಕೊಳ್ಳಿ ಇಟ್ಟ ಪೊಲೀಸರು. ಪೊಲೀಸ್ ಅಧಿಕಾರಿಗಳೇ ಡ್ರಗ್ಸ್ ಪೆಡ್ಲರ್ಗಳ ಜೊತೆಗೆ ಕೈಜೋಡಿಸಿ ಮಾರಾಟಕ್ಕೆ ರಕ್ಷಣೆ ನೀಡುತ್ತಿದ್ದರು. ಈ ಆಘಾತಕಾರಿ ವಿಷಯ ಬಯಲಾಗಿದೆ. ಟೈಡಲ್ ಮಾತ್ರೆಗಳ ಮಾರಾಟದ ದಂಧೆಯಲ್ಲಿ ಭಾಗಿಯಾಗಿದ್ದ ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಗಳ 11 ಅಧಿಕಾರಿ-ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಇದರಲ್ಲಿ ಇನ್ಸ್ಪೆಕ್ಟರ್ರೊಂದಿಗೆ ಹೆಡ್ ಕಾನ್ಸ್ಟೇಬಲ್ಗಳು ಸೇರಿದ್ದಾರೆ.
ಪೊಲೀಸರು ಪೆಡ್ಲರ್ಗಳ ಜೊತೆಗೆ ಪಾರ್ಟಿಗಳನ್ನೂ ಮಾಡುತ್ತಿದ್ದ ಫೋಟೋಗಳು ಮತ್ತು ಮಾಸಿಕ 1.5-2 ಲಕ್ಷ ರೂಪಾಯಿ ಮಾಮೂಲಿ ಪಡೆಯುತ್ತಿದ್ದ ಸಂಗತಿಗಳು ತನಿಖೆಯಿಂದ ಬಯಲಾಗಿವೆ.
ಪ್ರಕರಣ ಬಯಲಾಗಿದ್ದು ಹೇಗೆ.?
ಕಾಲೇಜು ವಿದ್ಯಾರ್ಥಿಗಳಿಗೆ ಟೈಡಲ್-100 ನಶೆ ಬರುವ ಮಾತ್ರೆ ಮಾರಾಟ ಮಾಡಿದ ಆರೋಪದಲ್ಲಿ ಸಲ್ಮಾನ್ ಹೆಸರಿನ ಇಬ್ಬರು, ನಯಾಜ್ ಉಲ್ಲಾ,ನಯಾಜ್ ಖಾನ್ ಹೆಸರಿನ ಇಬ್ಬರು ಸೇರಿದಂತೆ ತಾಹೇರ್ ಪಟೇಲ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಗಳ ಬಳಿ ಒಂದು ಸಾವಿರ ಟೈಡಲ್-100 ಮಾತ್ರೆ ಪತ್ತೆಯಾಗಿದ್ದವು. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದ ಪೊಲೀಸರಿಗೆ ಪರಿಶೀಲನೆ ವೇಳೆ ಪೊಲೀಸರಿಗೆ ಶಾಕ್ ಆಗಿತ್ತು. ಆರೋಪಿಗಳ ಮೊಬೈಲ್ನಲ್ಲಿ ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಮಾತುಕತೆಯ ಆಡಿಯೋಗಳು ಪತ್ತೆಯಾಗಿದ್ದವು. ಇಷ್ಟು ಸಾಲದೆಂಬಂತೆ ಆರೋಪಿಗಳ ಜೊತೆಗೆ ಪೊಲೀಸರು ಪಾರ್ಟಿ ಮಾಡಿರುವ ಫೋಟೋಗಳು ಸಹ ಮೊಬೈಲ್ನಲ್ಲಿ ಪತ್ತೆಯಾಗಿತ್ತು.
ಡ್ರಗ್ಸ್ ಪೆಡ್ಲರ್ಗಳೊಂದಿಗೆ ಪೊಲೀಸರು ಕೈಜೋಡಿಸಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗಾಗಿ ಭರತ್ ರೆಡ್ಡಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ತನಿಖೆ ವೇಳೆ ಪೆಡ್ಲರ್ಗಳಿಂದ ಪೊಲೀಸರು ಮಾಮೂಲಿ ಪಡೆಯುತ್ತಿದ್ದ ವಿಚಾರ ಬಯಲಾಗಿತ್ತು. ಪೆಡ್ಲರ್ಗಳಿಂದ ಕಡಿಮೆ ಬೆಲೆ ಟೈಡಲ್ ಮಾತ್ರೆ 300 ರಿಂದ 400 ರೂಪಾಯಿಗೆ ಸ್ವತಃ ಪೊಲೀಸರೇ ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದರು ಎಂಬ ವಿಚಾರ ತಿಳಿದು ಶಾಕ್ ಆಗಿದ್ದ ತನಿಖಾ ತಂಡ. ಪ್ರತಿ ತಿಂಗಳು ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಗೆ ಡ್ರಗ್ಸ್ ಪೆಡ್ಲರ್ಗಳು ಹಣ ನೀಡುತ್ತಿದ್ದರು. ತಮ್ಮ ಖಾತೆಗೆ ಹಾಕಿಸಿಕೊಂಡರೆ ಸಿಕ್ಕಿಬಿಳುತ್ತೇವೆ ಎಂಬ ಕಾರಣಕ್ಕೆ ಕೆಲವು ಪೊಲೀಸರು ತಮ್ಮ ಸಂಬಂಧಿಕರ ಖಾತೆಗಳಿಗೆ ಹಣಹಾಕಿಸಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ. ಎಸ್ಸಿಪಿ ಚಂದನ್ ಅವರ ನೇತೃತ್ವದ ಮತ್ತೊಂದು ತನಿಖೆಯಲ್ಲೂ ಒಂದೇ ರೀತಿಯ ಅಕ್ರಮಗಳನ್ನು ದಾಖಲಿಸಿದ್ದಾರೆ. ಈ ವೇಳೆಯೂ ಪೊಲೀಸರು ಮಾರಾಟಕ್ಕೆ ಸಹಕಾರ ನೀಡುತ್ತಿರುವ ವಿಚಾರ ಬಯಲಾಗಿದೆ.

ಸಸ್ಪೆಂಡ್ ಆದ ಪೊಲೀಸ್ ಸಿಬ್ಬಂದಿ ಹೆಸರು ಯಾವ ಠಾಣೆ :
ಚಾಮರಾಜಪೇಟೆ ಠಾಣೆ (7 ಜನ): ಇನ್ಸ್ಪೆಕ್ಟರ್ ಟಿ. ಮಂಜಣ್ಣ, ಹೆಡ್ ಕಾನ್ಸ್ಟೇಬಲ್ ರಮೇಶ್, ಹೆಡ್ ಕಾನ್ಸ್ಟೇಬಲ್ ಶಿವರಾಜ್, ಸಿಬ್ಬಂದಿ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ಸಸ್ಪೆಂಡ್ ಆಗಿದ್ದಾರೆ.
ಜೆಜೆ ನಗರ ಠಾಣೆಯ (4 ಜನ): ಸಿಬ್ಬಂದಿ ಬಸವನ್ ಗೌಡ, ಎಎಸ್ಐ ಕುಮಾರ್, ಹೆಡ್ ಕಾನ್ಸ್ಟೇಬಲ್ ಆನಂದ್ ಸೇರಿದಂತೆ ನಾಲ್ಕು ಮಂದಿ ಸಸ್ಪೆಂಡ್ ಆಗಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್
ಡ್ರಗ್ ಪೆಡ್ಲರ್ಸ್ ಗಳ ಜೊತೆ ನೇರ ನಂಟು ಹೊಂದಿದ್ದ ಇನ್ಸ್ ಪೆಕ್ಟರ್ ಸೇರಿ ಪಶ್ಚಿಮ ವಿಭಾಗದ ಎರಡು ಠಾಣೆಗಳ ೧೧ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಮಾದಕವಸ್ತು ಸರಬರಾಜು ಮಾರಾಟ ದಂಧೆಯಲ್ಲಿ ತೊಡಗಿರುವುದು ಅಂತರಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ
ಚಾಮರಾಜಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಟಿ ಮಂಜಣ್ಣ ಅವರನ್ನು ಡಿಸಿಪಿ ಗಿರೀಶ್ ಅವರು ನೀಡಿದ ವರದಿಯನ್ನು ಆಧರಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಚಾಮರಾಜಪೇಟೆ ಠಾಣೆಯ ಹೆಡ್ಕಾನ್ ಸ್ಟೇಬಲ್ ಗಳಾದ ರಮೇಶ್ ಶಿವರಾಜ್ ಕಾನ್ಸ್ ಟೇಬಲ್ ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ನನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ.


