ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮಲೆನಾಡಿನ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಅಧಿಕಾದ ಚುಕ್ಕಾಣಿಯು ಬಿಜೆಪಿಯಿಂದ ಕೈ ತಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇನ್ನೂ 2023ರ ಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳ ನೇಮಕಾತಿಯಲ್ಲಿನ ಹಗರಣ ಕುರಿತು ಕಾಂಗ್ರೆಸ್ ಸರಕಾರವು ತನಿಖೆ ನಡೆಸುವುದಕ್ಕೆ ಈಗಾಗಲೇ ಮುಂದಾಗಿದೆ.
ಈ ಹಾದಿಯಲ್ಲಿ ಮತ್ತೆ ಡಿಸಿಸಿ ಬ್ಯಾಂಕಿನ ಅಧಿಕಾರ ಹಿಡಿಯಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರು ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಆರ್ ಎಮ್ ಮಂಜುನಾಥ್ ಗೌಡರು ದಾಳ ಉರುಳಿಸಿದ್ದರು ಹಂತ ಹಂತವಾಗಿ ಯಶಸ್ವಿಯಾಗಿದ್ದರು
ಅಂದು ಮಂಜುನಾಥ್ ಗೌಡರನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದ ಬಿಜೆಪಿ ಗೌಡರ ಶಕ್ತಿಯ ಮುಂದೆ ಇಂದು ಭಾರಿ ಮುಖಭಂಗ ಅನುಭವಿಸಿದೆ.
ಕೆಲವು ದಿನಗಳ ಹಿಂದೆ
ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಅಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಗೆ ಯಶಸ್ಸು ಸಿಕ್ಕಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಹಿಡಿತದಲ್ಲಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಗಿತ್ತು. ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಆಪರೇಶನ್ ಹಸ್ತ ಮುಖಾಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿದ್ದ ಚನ್ನವೀರಪ್ಪರ ಪದಚ್ಯುತಿಯಾಗಿತ್ತು.
ಕೆಲವು ದಿನಗಳ ಹಿಂದೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಆಗಿತ್ತು, 9 ನಿರ್ದೇಶಕರ ಬೆಂಬಲದೊಂದಿಗೆ ಮತ್ತೆ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಡಾ. ಆರ್.ಎಂ. ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕಿನ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.
ಶಿವಮೊಗ್ಗ ಜಿಲ್ಲಾ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪರವಾಗಿ 9 ಮತಗಳೊಂದಿಗೆ, ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕಿತ್ತು ಹಾಲಿ ಉಪಾಧ್ಯಕ್ಷರಾಗಿದ್ದ ಷಡಾಕ್ಷರಿ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರು. 13 ಸದಸ್ಯರಿದ್ದ ಡಿಸಿಸಿ ಬ್ಯಾಂಕಿನ ಸದಸ್ಯರಲ್ಲಿ 9 ಸದಸ್ಯರ ಬಲವನ್ನು ಪಡೆದ ಗೌಡರ ಪಾಳಯ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರು
ಅಂದು ಸಧ್ಯಕ್ಕೆ ಡಿಸಿಸಿ ಬ್ಯಾಕ್ ನ ಪ್ರಭಾರಿ ಅಧ್ಯಕ್ಷರಾಗಿ ಷಡಾಕ್ಷರಿ ಆಯ್ಕೆಯಾಗಿದ್ದರು.
ಇಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆಡೆಸಲು ಚುನಾವಣಾ ಅಧಿಕಾರಿಗಳು ದಿನಾಂಕ ನಿಗಧಿ ಪಡಿಸಿದ್ದಾರೆ. ಅದರೆ ಇದು ಹೆಸರಿಗಷ್ಟೆ ಚುನಾವಣೆ ಎಂಬತ್ತಾಗಿದೆ. ಮಾಜಿ ಅಧ್ಯಕ್ಷರು ಹಾಲಿ ಡಿಸಿಸಿ ಬ್ಯಾಂಕಿನ ಸದಸ್ಯರಾಗಿರುವ ಮಂಜುನಾಥ್ ಗೌಡರು ಮತ್ತೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗುವುದು ಗ್ಯಾರಂಟಿಯಾಗಿದೆ. ಈಗಾಗಲೇ ಅವರ ಅಭಿಮಾನಿ ಬಳಗ ವಿಜಯೋತ್ಸವ ಆಚರಿಸಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ.ತಮ್ಮನ್ನು ರಾಜಕೀಯವಾಗಿ ಮುಗಿಸಲು ಮುಂದಾದರು ಎಲ್ಲಾ ರೀತಿಯ ತೊಂದರೆ ಕೊಟ್ಟರು ಯಾವುದಕ್ಕೂ ಜಗ್ಗದೆ ಚಲಬಿಡದೆ ಮತ್ತೆ ತಮ್ಮ ಶಕ್ತಿ ಎನೇನ್ನುವುದನ್ನು ಸಾಧಿಸಿ ತೋರಿಸಿದ್ದಾರೆ ಮಂಜುನಾಥ್ ಗೌಡರು. ಮತ್ತೆ ಶಿವಮೊಗ್ಗದ ಡಿಸಿಸಿ ಬ್ಯಾಂಕಿನಲ್ಲಿ ಅಧ್ಯಕ್ಷರ ಗಾದಿಯಲ್ಲಿ ಕುಳಿತು ವಿಜೃಂಭಿಸಲಿದ್ದಾರೆ. ಇನ್ನೇನು ಕೆಲವೆ ಗಂಟೆಗಳಲ್ಲಿ ಡಿಸಿಸಿ ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಗೌಡರ ಕೈ ಸೇರಲಿದೆ ಎಂದು ಅವರ ಅಭಿಮಾನಿ ಬಳಗದಲ್ಲಿ ಸಂತೋಷ ಗರಿಗೆದರಿದೆ ಎಲ್ಲವನ್ನೂ ಕೇಲವು ಗಂಟೆಗಳ ಕಾಲ ಕಾದು ನೋಡಬೇಕಿದೆ
ಸುಧೀರ್ ವಿಧಾತ ,ಶಿವಮೊಗ್ಗ