ನಿಯಮ ಉಲ್ಲಂಘಿಸಿದ ಇಸ್ಫೀಟ್ ಕ್ಲಬ್ ಮೇಲೆ ದಾಳಿ, 80 ಸಾವಿರಕ್ಕೂ ಅಧಿಕ ಹಣ ವಶಕ್ಕೆ
ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ನೆಡೆಯುತ್ತಿದ್ದ ಇಸ್ಫೀಟ್ ಕ್ಲಬ್ ನಿಯಮಗಳನ್ನು ಉಂಲ್ಲಂಘನೆ ಮಾಡಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಕಾರಣಕ್ಕೆ ಕ್ಲಬ್ಬಿನ ಮೇಲೆ ಮಾಗಡಿ ರಸ್ತೆ ಠಾಣೆಯ ಪೊಲೀಸರು ಮಾಹಿತಿ ಅಧಾರದ ಮೇಲೆ ದಾಳಿ ಮಾಡಿ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು 84,670 ರೂ. ನಗದು ಮತ್ತು ಅಕ್ರಮ ಜೂಜಾಟಕ್ಕೆ ಬಳಸಿದ್ದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಗಡಿರಸ್ತೆಯ ಅಗ್ರಹಾರ ದಾಸರಹಳ್ಳಿಯ 12ನೇ ಈ ಕ್ರಾಸ್ ನಲ್ಲಿರುವ ಎಂ.ಎಂ ಕಾಂಪ್ಲೆಕ್ಸಿನ ನಾಲ್ಕನೇ ಮಹಡಿಯಲ್ಲಿರುವ ಸಿಲಿಕಾನ್ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಇನ್ಸಿಟ್ಯೂಟ್ ಹೆಸರಿನಲ್ಲಿ ಜೂಜಾಟಕ್ಕೆ ತೊಡಗಿದ್ದರಂತೆ. ಇಲ್ಲಿ ಕೆಲವರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪಿಟ್ ಎಲೆಗಳ ಜೋತೆಗೆ ಅಕ್ರಮ ಹಣದ ಅದೃಷ್ಟದ ಪರೀಕ್ಷೆಗೆ ಮುಂದಾಗಿ ಬಜೂಜಾಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
6ನೇ ಎಂ.ಎಂ.ಟಿ.ಸಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪಂಚರುಗಳ ಸಮಕ್ಷಮ ದಾಳಿಮಾಡಿ 43 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಕೃತ್ಯಕ್ಕೆ ಬಳಸುತಿದ್ದ ಹೈಸ್ಟ್ರೈಕ್ ಟೋಕನ್ಗಳು ಇಸ್ಪೀಟ್ ಎಲೆಗಳು, ಪೋನ್ ಪೇ
ಸ್ಕ್ಯಾನರ್ , ಸಿಗರೆಟ್ಸ್ ಪ್ಯಾಕ್ ಗಳು ಮತ್ತು ಜಾಕ್ ಪಾಟ್ ಸ್ಲೀಪ್ ಗಳನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಮಾಗಡಿರಸ್ತೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಜು ಮತ್ತು ಸಿಬ್ಬಂದಿ ತಂಡ ದಾಳಿ ಮಾಡಿ ಮಾಲುಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದೆ.
ಇವರ ಕಾರ್ಯವೈಖರಿಯನ್ನು ಮೆಚ್ಚಿ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
ಸುಧೀರ್ ವಿಧಾತ, ಶಿವಮೊಗ್ಗ