ದೃಶ್ಯ ಚಿತ್ರದ ರೀತಿಯಲ್ಲೆ ಕೊಲೆ ಮಾಡಿದ ಹಂತಕ. ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣು!!

ರವಿಚಂದ್ರನ್‌ ಅವರ ದೃಶ್ಯ ಸಿನಿಮಾದ ಶೈಲಿಯಲ್ಲಿ ತನ್ನ ಮಗಳೊಂದಿಗೆ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದ ಯುವಕನನ್ನು ಕೊಲೆ ಮಾಡಿ, ಕೊನೆಗೆ ತಾನು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ಶರಣಾದ ವ್ಯಕ್ತಿ ಹಾಗೂ ಆರೋಪಿ ಪರಸಪ್ಪ (50) ಎಂದು ಗುರುತಿಸಲಾಗಿದೆ.

ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್‌ ಅಭಿನಯದ ದೃಶ್ಯ ಸಿನಿಮಾದ ರೀತಿಯಲ್ಲೆ ತಂದೆಯೊಬ್ಬ ಮಗಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಲೆಗೈದು ಪೊಲೀಸರಿಂದ ತಪ್ಪಿಸಿಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಈ ಘಟನೆ ನೆಡೆದದ್ದು ಹುಬ್ಬಳ್ಳಿ ಶಹರದಾಗ ಕನಸುಗಾರ ವಿ.ರವಿಚಂದ್ರನ್‌ ಅವರ ದೃಶ್ಯ ಸಿನಿಮಾದಲ್ಲಿ ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಕೊಲೆ ಮಾಡಿದ ಮೇಲೆ ಪ್ರಕರಣದಿಂದ ಇಡೀ ಕುಟುಂಬವೇ ತಪ್ಪಿಸಿಕೊಳ್ಳುತ್ತದೆ. ಅ ಮಟ್ಟಕ್ಕೆ ತಂದೆಯೊಬ್ಬ ಮಗಳಿಗೆ ಕಿರುಕುಳ ಕೊಟ್ಟವನನ್ನು ಹತ್ಯೆಮಾಡಿ ಅ ಪ್ರಕರಣದಿಂದ ತಪ್ಪಸಿಕೊಳ್ಳಲು ಪೂರ್ವ ಯೋಜಿತ ಪ್ಲಾನ್ ರೂಪಿಸಿರುತ್ತಾನೆ. ಈ ಚಿತ್ರದ ರೀತಿಯಲ್ಲೆ ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕನೊಬ್ಬ ತನ್ನ ಮಗಳೊಂದಿಗೆ ಅನೈತಿಕ ಸಂಬಂಧ ಬೆಳೆಸಲು ಮುಂದಾದ ಯುವಕನ್ನು ಯುವತಿಯ ತಂದೆ ದೃಶ್ಯ ಚಿತ್ರದ ರೀತಿಯಲ್ಲೆ ಹತ್ಯೆ ಮಾಡಿಯು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಆತ ಕೊಲೆ ಮಾಡಿದ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದೆ. ಇನ್ನೇನು ನನ್ನ ಕಥೆ ಮುಗಿಯಿತು ಎಂದು ಕೊಂಡು ತಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ರಸ್ತೆಯಲ್ಲಿದ್ದ ಮರ ಒಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.! 
ನಾನು ತಪ್ಪಿಸಿಕೊಳ್ಳಬಹುದು ಎಂದು ಕೊಂಡು ಸಿನಿಮಾ ಒಂದರ ರೀತಿಯಲ್ಲಿ ಹತ್ಯೆಮಾಡಿದ್ದಾನೆ ಅದರೆ ನೀಜ ಜೀವನವೇ ಬೇರೆ ಸಿನಿಮಾ ಕಥೆಯೆ ಬೇರೆ ಎನ್ನುವುದನ್ನು ಅರಿತು ಬದುಕಬೇಕಾದ ವ್ಯಕ್ತಿ ತನ್ನ ಬದುಕಿಗೆ ತನ್ನ ಕೈಯಾರ ಅಂತ್ಯವಾಡಿಕೊಂಡಿದ್ದಾನೆ.

ಹುಬ್ಬಳ್ಳಿಯ ಸಿಲ್ವರ್ ಟೌನ್‌‌ನಲ್ಲಿ ನಿರ್ಮಾಣ ಹಂತದ ಕಟ್ಟದಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆಯಾಗಿತ್ತು. ನಿರ್ಮಾಣ ಹಂತದ ಕಟ್ಟಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ನಡೆದಿತ್ತು. ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಕಟ್ಟಡದೊಳಗೆ ಯಾರೊಬ್ಬರೂ ಬಾರದಿದ್ದರೂ ಕೊಲೆ ಯಾರಿಂದ ನಡೆದಿದೆ ಎಂದು ಶೋಧನೆ ಮಾಡಿದಾಗ ಕಟ್ಟಡದಲ್ಲಿ ವಾಸವಾಗಿದ್ದವರೇ ಕೊಲೆ ಮಾಡಿದ್ದಾರೆಂಬ ಅನುಮಾನ ಬಂದಿದೆ. ಆಗ ನಿರ್ಮಾಣ ಹಂತದ ಕಟ್ಟದಲ್ಲಿ ಶೆಡ್‌ ನಿರ್ಮಿಸಿಕೊಂಡು ಕುಟುಂಬ ಸಮೇತವಾಗಿ ವಾಸವಾಗಿದ್ದ ವಾಚ್‌ಮ್ಯಾನ್ ಕೊಲೆ ಮಾಡಿದ್ದಾನೆ ಎಂಬ ಸುಳಿವು ಸಿಕ್ಕಿದೆ.
ಪೊಲೀಸರಿಗೆ ಸುಳಿವು ಸಿಗಬಾರದೆಂದು ಎಷ್ಟೇ ಸಾಕ್ಷ್ಯ ನಾಶ ಮಾಡಲು ಮುಂದಾದರೂ ಸಫಲವಾಗದ ಹಿನ್ನೆಲೆಯಲ್ಲಿ ಕೊಲೆಯ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ತಾನು ವಾಚ್‌ಮ್ಯಾನ್ ಕೆಲಸ ಮಾಡಿಕೊಂಡು ಇಡೀ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಜೈಲಿಗೆ ಹೋದರೆ ಸಮಸ್ಯೆ ಆಗುತ್ತದೆ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರ ಕಣ್ತಪ್ಪಿಸಿಕೊಂಡು ಹೋಗಿ ಹುಬ್ಬಳ್ಳಿಯ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಸಣ್ಣ ಮರವೊಂದಕ್ಕೆ ತನ್ನದೇ ಟವೆಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿಯಾದ ಪರಸಪ್ಪ‌, ಕುಟುಂಬದ ಜೊತೆಗೆ ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ವಾಸವಿದ್ದನು. ಪರಸಪ್ಪ‌ನ ಮಗಳ ಜೊತೆಗೆ ಕೊಲೆಯಾದ ವ್ಯಕ್ತಿ ಮೌಲಾಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದರಿಂದ ವೈವಾಹಿಕ ಜೀವನಕ್ಕೆ ಸಮಸ್ಯೆ ಆಗುವುದೆಂದು ಬುದ್ಧಿವಾದ ಹೇಳಿದ್ದಾನೆ. ಇಷ್ಟಾದರೂ ಯಾವುದೇ ಮಾತು ಕೇಳದ ಹಿನ್ನೆಲೆಯಲ್ಲಿ ಕುಪಿತಗೊಂಡ ಪರಸಪ್ಪ, ಒಂದೆರಡು ದಿನದ ಹಿಂದೆ ಸಂಜೆ ವೇಳೆ ಮಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದ.
ಕೊಲೆಯಾದ ಮೃತ ವ್ಯಕ್ತಿ ಮೌಲಾಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿಯಾಗಿದ್ದಾನೆ. ಗಾರೆ ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಗೆ ಬಂದಿದ್ದನು. ಇನ್ನು ಕೊಲೆ ಆರೋಪಿಯನ್ನು ಪತ್ತೆ ಮಾಡುತ್ತಿದ್ದ ಪೊಲೀಸರಿಗೆ ಆರೋಪಿ ಪರಸಪ್ಪ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!