ಬೆಂಗಳೂರು ಬಂದ್: ಭದ್ರತೆ ಬಂದ ಪೋಲಿಸರಿಗೆ ನೀಡಿದ ಊಟದ ಪ್ಯಾಕ್ ಒಂದರಲ್ಲಿ ಸತ್ತ ಇಲಿ ಪತ್ತೆ!!
ಕಾವೇರಿ ಹೋರಾಟದ ಹಿನ್ನಲೆಯಲ್ಲಿ ಇಂದು ಬೆಂಗಳೂರು ನಗರ ಬಂದ್ ಗೆ ಕರೆ ನೀಡಲಾಗಿತ್ತು. ಅದ್ಯಾವುದೇ ಹೋರಾಟ ಇರಲಿ ಗಲಾಟೆ ಇರಲಿ ಇನ್ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಬಂದ್ ಇರಲಿ ಅಲ್ಲಿ ಪೋಲಿಸರು ಕರ್ತವ್ಯಕ್ಕೆ ಹಾಜರಾಗಲೆ ಬೇಕು. ಅದು ಅವರ ವೃತ್ತಿ ಧರ್ಮ ಎಂದುಕೊಂಡರೆ ತಪ್ಪೆನಿಲ್ಲ ಅದರೆ ಮಡದಿ ಮಕ್ಕಳನ್ನು ಬಿಟ್ಟು ಪ್ರಾಣವನ್ನೇ ಮುಡಿಪಾಗಿಟ್ಟು ಕರ್ತವ್ಯಕ್ಕೆ ಬರುವಂತಹ ಪೋಲಿಸರಿಗೆ ಒಂದು ಹೋತ್ತಿನ ಊಟವನ್ನಾದರು ಊಟ ಮಾಡುವ ಮಟ್ಟಕ್ಕೆ ಕೊಟ್ಟರೆ ಅದು ಸಂತೋಷದ ವಿಷಯ ಅದರೆ ಕೇಲವು ಕಡೆಗಳಲ್ಲಿ ಭದ್ರತೆಗೆ ಬರುವ ಪೋಲಿಸರಿಗೆ ಕೊಡುವ ಊಟ ಅ ದೇವರಿಗೆ ಪ್ರೀತಿ.! ಬಂದೊಬಸ್ತ್ ನಲ್ಲಿ ಉರಿ ಬಿಸಿಲಿಗೆ ಮೈಯೊಡ್ಡಿ ನಿತ್ರಾಣ ಒಂದು ಕಡೆಯಾದರೆ ಇನ್ನೊಂದು ಕಡೆ ಹಸಿವು ಕರ್ತವ್ಯ ನಿರತ ಖಾಕಿ ಪಡೆಗೆ ಕಾಡುತ್ತಿರುತ್ತದೆ.
ಇಂದು ಆಗಿದ್ದು ಅದೆ ಬೆಂಗಳೂರು ಬಂದ್ ಗೆ ನಿಯೋಜನೆಗೊಂಡ ಪೊಲೀಸರಿಗೆ ನೀಡಿದ ಊಟದ ಪ್ಯಾಕೆಟ್ ಒಂದರಲ್ಲಿ ಸತ್ತ ಇಲಿ ಪತ್ತೆಯಾಗಿದೆ!!
ಬೆಂಗಳೂರು, ಸೆಪ್ಟೆಂಬರ್ 26: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಇಂದು ಬೆಂಗಳೂರು ನಗರದಾದ್ಯಂತ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು
ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್‌ನಿಂದ ತಿಂಡಿ ಸರಬರಾಜು ಮಾಡಲಾಗಿತ್ತು. ಪೊಲೀಸರಿಗೆ ನೀಡಿದ ತಿಂಡಿಯಲ್ಲಿ ಸತ್ತ ಇಲಿ ಪತ್ತೆಯಾಗಿದೆಯಂತೆ!! ಇದೇನು ದುರಂತ ಇದಕ್ಕೆ ಹೊಣೆಯಾರು? ಕರ್ತವ್ಯ ನಿರತ ಪೋಲಿಸರಿಗೆ ಸರಿಯಾಗಿ ಒಂದು ಹೊತ್ತಿನ ಊಟ ಕೊಡಲು ಸಾಧ್ಯವಾಗಿಲ್ಲ ಎಂದರೆ ಎನುಹೇಳು ಸಾಧ್ಯ? ಇದು ಯಾರ ಲೋಪ. ಪೋಲಿಸರು ದೇವರ ಸಮಾನ ಸಾರ್ವಜನಿಕರ ರಕ್ಷಣೆಗಾಗಿ ಎದೆಕೊಟ್ಟಿ ನಿಲ್ಲುವ ರಕ್ಷಕರು. ತಮ್ಮವರನ್ನೆಲ್ಲ ಮರೆತು ನಾಗರಿಕರ ರಕ್ಷಣೆಗೆ ಹಗಲಿರುಳು ದುಡಿಯುವ ಸೇನಾನಿಗಳು ಎನ್ನುವುದು ನೆನಪಿರಲಿ.ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಧರ್ಮ ಎನ್ನುವುದು ನೆನಪಿರಲಿ ಅದು ಬಿಟ್ಟು ಅವರಿಗೆ ನೀಡುವ ಊಟದಲ್ಲೂ ಸತ್ತ ಇಲಿ ಇದೆ ಎಂದರೆ ಅ ದೇವರು ನಿಮ್ಮನ್ನು ಮೆಚ್ಚುವುದಿಲ್ಲ. ಇಂದು ಬೆಂಗಳೂರಿನಲ್ಲಿ ಕರ್ತವ್ಯ ನಿರತ ಪೋಲಿಸರಿಗೆ ಆಹಾರ ಸರಬರಾಜು ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಮುಂದಾದರು ಈ ರೀತಿ ಆಗದಂತೆ ಜಾಗೃತಿ ವಹಿಸಿ
ಬೆಂಗಳೂರಿನಂತೆ ಇಂದು ಭದ್ರಾವತಿಯ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಇತ್ತು ಪ್ರತಿ ವರ್ಷದಂತೆ ಈ ವರ್ಷವು ಗಣಪತಿಯ ವಿಸರ್ಜನ ಕಾರ್ಯಕ್ರಮದ ಮೆರವಣಿಗೆಗೆ ಸಾವಿರಾರು ಮಂದಿ ಅಧಿಕಾರಿಗಳು ಮತ್ತು ಪೋಲಿಸರನ್ನು ಬಂದೊಬಸ್ತ್ ಗಾಗಿ ನಿಯೋಜನೆ ಮಾಡಲಾಗಿತ್ತು ಇದು ಶಿವಮೊಗ್ಹ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೂರ್ವ ತಯಾರಿಗಳು ನೆಡೆದಿತ್ತು. ಅದರಲ್ಲೂ ಪೋಲಿಸರಿಗೆ ಕೊಡುವ ಮಧ್ಯಾಹ್ನದ ಊಟ ಜಿಲ್ಲೆಯ ಇತಿಹಾಸದಲ್ಲೆ ಎಂದು ರೀತಿಯಲ್ಲಿ ಊಟ ಕೊಟ್ಟಿರಲು ಸಾಧ್ಯವಿಲ್ಲ ಅ ಮಟ್ಟದ ಉತ್ತಮವಾದ ಊಟವನ್ನು ಪ್ರತಿಯೊಬ್ಬ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಒದಗಿಸಲಾಗಿತ್ತು. ಊಟದ ಮೆನು ಕೇಳಿದರೆ ನಿಮಗೆ ಗೊತ್ತಾಗುತ್ತದೆ.
ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಬಂದೋಬಸ್ತ್ ಕರ್ತವ್ಯಕ್ಕೆ ಆಗಮಿಸಿದ ಸಿಬ್ಬಂದಿಗಳಿಗೆ ಈ ದಿವಸ ಮಧ್ಯಾಹ್ನದ ಊಟದ ಕಿಟ್.
ಪಲಾವ್. ಮೊಸರನ್ನ . ಕಾಯಿ ಹೋಳಿಗೆ. ಬಿಸ್ಕೆಟ್ ಬಾಳೆಹಣ್ಣು . ಮಜ್ಜಿಗೆ . 4 ಚಾಕ್ಲೇಟ್. 1ltr ನೀರು.
ಹಿಂದಿನ ದಿನ ರಾತ್ರಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಬಂದೋಬಸ್ ಕರ್ತವ್ಯಕ್ಕೆ ಹಾಜರಾದ ಪೋಲಿಸ್ ಸಿಬ್ಬಂದಿಗಳಿಗೆ ರಾತ್ರಿಯ ಊಟದ ಮೆನು ಈ ರೀತಿ ಇತ್ತು. ಅನ್ನ , ಸಾಂಬಾರ್, ರಸಮ್, ಚಪಾತಿ, ಲಾಡು,ಪಾಯಸ, ಎರಡು ರೀತಿಯ ಪಲ್ಲೆ ಇದಕ್ಕಿಂತ ಇನ್ನೇನು ಬೇಕು
ಅದಕ್ಜೆ ಹೇಳೊದು ಜವಬ್ದಾರಿ ಮುಖ್ಯ ಅನ್ನೊದನ್ನ ಅದನ್ನು ಶಿವಮೊಗ್ಗ ಜಿಲ್ಲಾ ಪೋಲಿಸ್ ಇಲಾಖೆ ಪ್ರತಿಯೊಬ್ಬರು ಮೆಚ್ಚುವ ರೀತಿಯಲ್ಲಿ ಮಾಡಿದೆ ಜೋತೆಗೆ ಹಿಂದೂ ಮಹಾಸಭಾ ಗಣಪತಿ ಕೂಡ ಯಾವು ಸಣ್ಣ ಗಲಾಟೆಯು ಇಲ್ಲದೆ ರಸ್ತೆ ಉದ್ದಕೂ ಸಾಗಿದೆ
ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಬಂದೋಬಸ್ ಕರ್ತವ್ಯ ಮುಗಿಸಿದ ನಂತರ ಸಿಬ್ಬಂದಿಗಳಿಗೆ ರಾತ್ರಿ ಊಟದ ಮೆನು ಈ ರೀತಿ ಇದೆ.
ಒಟ್ಟಿನಲ್ಲಿ ಜಿಲ್ಲೆಯ ಹೆಮ್ಮೆಯ ದಕ್ಷ ಪೋಲಿಸ್ ಅಧೀಕ್ಷಕರಾದ ಜಿ ಕೆ ಮಿಥುನ್ ಕುಮಾರ್ ಅವರ ಸಾರಥ್ಯದಲ್ಲಿ ಎಲ್ಲವೂ ಸುಗಮ ರೀತಿಯಲ್ಲಿ ಏರ್ಪಟ್ಟು ಭದ್ರಾವತಿಯ ಹಿಂದೂ ಮಹಾಸಭಾ ಗಣಪತಿ ಸೈಲೆಂಟಾಗಿಯೆ ರಸ್ತೆಯೂದ್ದಕ್ಕೂ ಸಾಗಿದೆ
ಸುಧೀರ್ ವಿಧಾತ ,ಶಿವಮೊಗ್ಗ