Headlines

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: 15 ವರ್ಷಗಳ ಯುಡಿಆರ್ ಡಿಲೀಟ್, ಪೊಲೀಸರ ವಿರುದ್ಧ ವ್ಯಾಪಕ ಟೀಕೆ.?

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: 15 ವರ್ಷಗಳ ಯುಡಿಆರ್ ಡಿಲೀಟ್, ಪೊಲೀಸರ ವಿರುದ್ಧ ವ್ಯಾಪಕ ಟೀಕೆ.?

ಅಶ್ವಸೂರ್ಯ/ಧರ್ಮಸ್ಥಳ : ಧರ್ಮಸ್ಥಳದಲ್ಲಿ ಇಂತವುದೆ ಅವಧಿಯಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರುದಾರ ಆರೋಪಿಸಿದ್ದು 1998 ಮತ್ತು 2014ರ ನಡುವೆ ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಹಲವು ಶವಗಳನ್ನು ನನ್ನಿಂದ ಹೂಳಿಸಲಾಗಿದೆ ಎಂದು ಆರೋಪಿಸಿದ್ದಾನೆ.
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಚುರುಕುಗೊಳಿಸಿರುವಂತೆಯೇ 2000 ದಿಂದ 2015 ರ ನಡುವೆ ದಾಖಲಾದ ಅಪರಿಚಿತ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳನ್ನು(UDR)ಡಿಲೀಟ್ ಆಗಿರುವ ವಿಷಯ ಕೇಳಿಬಂದ ನಂತರ ಬೆಳ್ತಂಗಡಿ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಇದೇ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರುದಾರ ಆರೋಪಿಸಿದ್ದಾನೆ. 1998 ಮತ್ತು 2014ರ ನಡುವೆ ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಹಲವು ಶವಗಳನ್ನು ನನ್ನಿಂದ ಹೂಳಿಸಲಾಗಿದೆ ಎಂದು ಆರೋಪಿ ಹೇಳಿರುವುದರಿಂದ ಈಗ ದಾಖಲೆಗಳ ನಾಶಪಡಿಸುವಿಕೆ ಆಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್‌ಗಳು ಮತ್ತು ಮೃತ ವ್ಯಕ್ತಿಗಳ ಗುರುತನ್ನು ಪತ್ತೆಹಚ್ಚುವ ಪ್ರಯತ್ನಗಳಲ್ಲಿ ಬಳಸಲಾದ ಫೋಟೋಗಳನ್ನು ಆಡಳಿತಾತ್ಮಕ ಆದೇಶಗಳಿಗೆ ಅನುಗುಣವಾಗಿ ನಾಶಪಡಿಸಲಾಗಿದೆ ಎಂದು ಪೊಲೀಸರು ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ.
ಧರ್ಮಸ್ಥಳ ‘ಸಮಾಧಿ’ ರಹಸ್ಯ
ಧರ್ಮಸ್ಥಳದ ನೇತ್ರಾವತಿ ತಟದಲ್ಲಿರೋ ದಟ್ಟ ಅರಣ್ಯ ಪ್ರದೇಶದಲ್ಲಿ ಉತ್ಖನನ ಕಾರ್ಯ ಶುರುವಾಗಿ 5 ದಿನಗಳು ಕಳೆದಿದೆ. ಮೊದಲ 2 ದಿನ ಯಾವುದೇ ಕುರುಹು ಸಿಗದೇ ಎಸ್​ಐಟಿ ತಂಡ ಬರಿಗೈಯಲ್ಲಿ ವಾಪಸ್​ ಆಗಿತ್ತು ಎನ್ನಲಾಗ್ತಿದೆ. ಆದ್ರೆ ಮೂರನೇ ದಿನ, ಸ್ಪಾಟ್ ನಂಬರ್ 6ರಲ್ಲಿ ಮಹಾಸತ್ಯ ಬಯಲಾಗುವ ಲಕ್ಷಣದಂತೆ ಅಸ್ಥಿಪಂಜರ ಸಿಕ್ಕಿದೆ ಎಂದು ವರದಿ ಆಗಿದೆ. ಇದು ಅನಾಮಿಕನ ಆರೋಪ ಕೇಸ್​ಗೆ ಬಿಗ್​ ಟ್ವಿಸ್ಟ್ ನೀಡಿದೆ.

4ನೇ ದಿನ 7, 8,ರಲ್ಲಿ ಉತ್ಖನನ ಕಾರ್ಯ ನಡೆಯಿತು. ಆದರೆ ಅಲ್ಲು ಕೂಡ ತನಿಖಾಧಿಕಾರಿಗಳಿಗೆ ಯಾವುದೇ ಕಳೇಬರ ಸಿಕ್ಕಿಲ್ಲ ಎಂದು ವರದಿ ಆಗಿದೆ. ಇಂದು ಐದನೇ ದಿನದ ಉತ್ಖನನ ಕಾರ್ಯ ನಡೆಯಲಿದೆ. ಎಲ್ಲರ ಚಿತ್ತ ಸ್ಪಾಟ್ ನಂಬರ್ 9ರತ್ತ ನೆಟ್ಟಿದೆ. ಇದಕ್ಕೆ ಕಾರಣ ಕೂಡ ಇದೆ ಎನ್ನಲಾಗ್ತಿದೆ.
ಸ್ಪಾಟ್ ನಂ.9ರಲ್ಲಿದ್ಯಾ ಮಹಾರಹಸ್ಯ?
ಉತ್ಖನನ ಕಾರ್ಯ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ದೂರುದಾರ ಗುರುತಿಸಿರುವ ನಂಬರ್​ 9,10,11 ಮೂರು ಜಾಗಗಳಲ್ಲೂ ಉತ್ಖನನ ಕಾರ್ಯ ನಡೆಯಲಿದೆ ಎಂದು ಹೇಳಲಾಗ್ತಿದೆ. ಇಂದು ಸಾಕಷ್ಟು ಕುತೂಹಲ ಮೂಡಿರೋದು ಸ್ಪಾಟ್ ನಂಬರ್​ ಒಂಭತ್ತು. ಮೊದಲೆರೆಡು ದಿನ ತಾನು ತೋರಿದ ಜಾಗದಲ್ಲಿ ಸಾಕ್ಷ್ಯಗಳು ಸಿಗದಿದ್ದ ವೇಳೆ ಮಾಸ್ಕ್​ ಮ್ಯಾನ್ ಸ್ಪಾಟ್ ನಂಬರ್​ 9ರ ಜಾಗವನ್ನು ಅಗೆಯುವಂತೆ ಮನವಿ ಮಾಡಿದ್ದ ಎನ್ನಲಾಗ್ತಿದೆ.
ಸ್ಪಾರ್ಟ್​ ನಂಬರ್​ 9 ಅನ್ನು ಅಗೆಯಿರಿ ಅಲ್ಲಿ ಕಳೇಬರ ಸಿಕ್ಕೇ ಸಿಗುತ್ತೆ ಎಂದು ಮಾಸ್ಕ್​ ಮ್ಯಾನ್​ ಹೇಳಿದ್ದ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಎಸ್​ಐಟಿ ಮುಖ್ಯಸ್ಥರ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯಬೇಕು ಅಂತ ಪಟ್ಟು ಕೂಡ ಹಿಡಿದಿದ್ದ ಎನ್ನಲಾಗ್ತಿದೆ. ಇದೀಗ ಅನಾಮಿಕ ತೋರಿಸಿದ ಈ ಜಾಗದಲ್ಲಿ ಇಂದು ಉತ್ಖನನ ನಡೆಯುತ್ತಿದ್ದು, ಮಹಾರಹಸ್ಯ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಅವಶೇಷಗಳು ಸಿಕ್ಕರೆ ಉತ್ಖನನ ಕಾರ್ಯ ತಡ
ಒಂದು ವೇಳೆ ಅನಾಮಿಕ ತೋರಿಸಿದ ಸ್ಪಾಟ್ ನಂಬರ್​ 9, 10, 11ರಲ್ಲಿ ಅವಶೇಷಗಳು ಸಿಕ್ಕಲ್ಲಿ ಉತ್ಖನನ ಕಾರ್ಯ ಕೂಡ ತಡವಾಗಲಿದೆ. ಇದೀಗ ಈ ಜಾಗ ಸಾಕಷ್ಟು ಕುತೂಹಲ ಮೂಡಿಸಿದೆ. ಸ್ಪಾಟ್ ಒಂಭತ್ತಲ್ಲಿ ಕಳೆಬರಹ ಪತ್ತೆಯಾಗುತ್ತೆ, ಸಿಕ್ಕೇ ಸಿಗುತ್ತೆ ಎಂದು ದೂರುದಾರ ಹೇಳಿದ್ದ ಎನ್ನಲಾಗ್ತಿದ್ದು, ಹೀಗಾಗಿ ಸ್ಪಾಟ್ ಒಂಭತ್ತರ ರಹಸ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.ಮುಂದೆನು ಎನ್ನುವುದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!