ಚಿಕ್ಕಬಳ್ಳಾಪುರ: ಬಸ್‌ಗಳಲ್ಲಿ ಕೈಚಳಕ ತೋರಿಸ್ತಿದ್ದ ಕಳ್ಳಿಯರ ಗ್ಯಾಂಗ್ ಅಂದರ್.


news.ashwasurya.in
ಅಶ್ವಸೂರ್ಯ/ಚಿಕ್ಕಬಳ್ಳಾಪುರ: ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇ ತಡ ಕೆಲವು ಮಹಿಳೆಯರಂತು ಬಿಟ್ಟು ಬಿಡದೆ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಮುಂದಾಗಿದ್ದಾರೆ..ಕೆಲವರಂತು ಪ್ರವಾಸ,ದಾರ್ಮಿಕ ಕ್ಷೇತ್ರ, ತವರು ಮನೆ,ಗಂಡನ ಮನೆ ಹಾಗೂ ನೆಂಟರ ಮನೆಗಳಿಗೆ ಅಂತ ಮೈತುಂಬಾ ಚಿನ್ನಾಭರಣ ಹಾಕಿಕೊಂಡು ಬಸ್ ಹತ್ತುವಲ್ಲಿ ಮುಂದಾಗಿದ್ದಾರೆ. ಆದರೆ ಅಂಥವರಿಗೆ ಸ್ಕೆಚ್ ಹಾಕಿ ಬಸ್ ಸ್ಟ್ಯಾಂಡ್‌ನಲ್ಲಿ ಕುಳಿತಿರುವ ಕಳ್ಳಿಯರ ಗ್ಯಾಂಗ್ ಒಂದು ತುಂಬಿದ್ದ ಬಸ್ ಹತ್ತಿ ಮಹಿಳೆಯರ ಚಿನ್ನಾಭರಣಗಳನ್ನು ಕದಿಯುತ್ತಿದ್ದರು. ಈಗ ಆ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ.

ಈ ಗ್ಯಾಂಗ್‌ನ ಕಳ್ಳಿಯರು ಬಸ್ ಹತ್ತಿದ್ರೆ ಸಾಕು ಪ್ರಯಾಣಿಕರ ಜೇಬಲ್ಲಿ ಇರೋ ದುಡ್ಡು ಕ್ಷಣ ಮಾತ್ರದಲ್ಲಿ ಮಾಯವಾಗ್ತಿತ್ತು. ಇನ್ನೂ ಮೈಮೇಲೆ ಇರೋ ಒಡವೆಗಳು ಮಂಗಮಾಯ ಮಾಡುತ್ತಿದ್ರು.ಈ ಗ್ಯಾಂಗ್‌ನಲ್ಲಿ ತುಳಸಿ (22), ಪ್ರೇಮಾ (21), ಸೋನಿಯಾ (25).ಈ ಮೂವರು ಕಳ್ಳಿಯರು ಕಲಬುರಗಿ ಮೂಲದವರು. ಶಕ್ತಿ ಯೋಜನೆಯಡಿ ಮಹಿಳೆಯರು ಹೆಚ್ಚಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಇತ್ತೀಚೆಗೆ ಕಳ್ಳತನದಿಂದ ಇವರ ಆದಾಯ ಕೂಡ ಹೆಚ್ಚಾಗಿದೆಯಂತೆ.! ತುಂಬಿದ ಬಸ್‌ಗಳಲ್ಲಿ ಮಹಿಳೆಯರು ಬಸ್ ಹತ್ತುವಾಗ ಇಳಿಯುವಾಗ ಈ ಮೂವರು ಮಹಿಳೆಯರು ಬ್ಯಾಗ್‌ನಲ್ಲಿದ್ದ ಹಣ, ಕತ್ತನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದರಂತೆ.!

ಇನ್ನೂ ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವೇ ಈ ಮೂವರು ಕಳ್ಳಿಯರ ಆದಾಯದ ಅಡ್ಡೆಯಾಗಿತ್ತು. ಇತ್ತೀಚಿಗೆ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು,

ಸಿಸಿಟಿವಿಯಲ್ಲಿ ದಾಖಲಾದ ವಿಡಿಯೊ ಜಾಡು ಹಿಡಿದು ತನಿಖೆ ಕೈಗೊಂಡಿದ್ರು. ಕೊನೆಗೆ ಚಿಕ್ಕಬಳ್ಳಾಪುರದಿಂದ ಕಲಬುರಗಿವರೆಗೂ ಪ್ರಯಾಣ ಮಾಡಿ ಮೂವರು ಕಳ್ಳಿಯರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಒಟ್ಟಿನಲ್ಲಿ ಮಹಿಳೆಯರು ತುಂಬಿದ ಬಸ್‌ಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಳ್ಳಿಯರು ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ರು. ಆದ್ರೆ ಪೊಲೀಸರು ಈಗ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



