Headlines

ಒಡಿಶಾ: ಸ್ಮಶಾನದಲ್ಲಿ ಹೂತಿದ್ದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆ.!?

ಒಡಿಶಾ: ಸ್ಮಶಾನದಲ್ಲಿ ಹೂತಿದ್ದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆ.!?

ಅಶ್ವಸೂರ್ಯ/ಒಡಿಶಾ: ಭುವನೇಶ್ವರದ ಸ್ಮಶಾನದಲ್ಲಿ ಹೂತಿದ್ದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆಯಾಗಿದೆ.!?
ಒಡಿಶಾ ರಾಜ್ಯದ ಭದ್ರಕ್ ಜಿಲ್ಲೆಯ ಮನಿನಾಥಪುರದ ಸ್ಮಶಾನವೊಂದರಲ್ಲಿ ಹೂಳಲಾದ 12ಕ್ಕೂ ಅಧಿಕ ಮೃತದೇಹಗಳು ನಾಪತ್ತೆಯಾಗಿರುವ ನಿಗೂಢ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಮೃತರಾದ ನಾಲ್ಕು ಮಂದಿಯ ಶವಗಳು ಕಾಣೆಯಾಗಿವೆಯೆಂದು ಸ್ಥಳೀಯರು ಆಪಾದಿಸಿದ ಬಳಿಕ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದರು.
ಈ ನಾಪತ್ತೆಯಾದ ಮೃತದೇಹಗಳು ಲಕ್ಷ್ಮಿಪ್ರಿಯಾ ಬೆಹೆರಾ, ಸತ್ಯಭಾಮಾ ಪರಿಡಾ, ಶತ್ರುಘ್ನದಾಸ್ ಹಾಗೂ ಪ್ರಮೀಳಾ ದಾಸ್ ಅವರದ್ದೆಂದು ಪೊಲೀಸರು ಗುರುತಿಸಿರುವುದಾಗಿ ಸ್ಥಳೀಯ ಟಿವಿ ವಾಹಿನಿಯೊಂದು ವರದಿ ಮಾಡಿದೆ.

ಸಾಂದರ್ಭಿಕ ಚಿತ್ರ

ಸಮಾಧಿಗಳಿಂದ ಮೃತದೇಹಗಳು ನಾಪತ್ತೆಯಾಗಿರುವುದು ಇದೇ ಮೊದಲ ಸಲವಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ. 2017ರಿಂದೀಚೆಗೆ ಸುಮಾರು 15 ಮೃತದೇಹಗಳು ಕಣ್ಮರೆಯಾಗಿರುವುದಾಗಿ ಅವರು ಹೇಳಿದ್ದಾರೆ.
ಈ ಘಟನೆಗಳ ಹಿಂದೆ ಅಂತಾರಾಷ್ಟ್ರೀಯ ಅಂಗಾಂಗ ಕಳ್ಳಸಾಗಣೆ ಜಾಲದವರು ಶಾಮೀಲಾಗಿರುವ ಶಂಕೆಯಿದ್ದು, ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಹಲವಾರು ದೂರುಗಳನ್ನು ಸಲ್ಲಿಸಿದ್ದರೂ, ತನಿಖೆಯಲ್ಲಿ ಯಾವುದೇ ಪ್ರಗತಿಯುಂಟಾಗಿಲ್ಲವೆಂದು ಗ್ರಾಮಸ್ಥರು ಆಪಾದಿಸಿದ್ದಾರೆ. ಭಂಡಾರಿಪೋಖಾರಿ ಪೊಲೀಸ್ ಠಾಣೆಯ ಉಸ್ತುವಾರಿ ನಿರೀಕ್ಷಕ ಕಮಲಾಕಾಂತ್ ನಾಯಕ್ ಹೇಳಿದ್ದಾರೆ. ಈ ದೂರುಗಳ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿರುವುದಾಗಿ ಪೊಲೀಸ್ ಇಲಾಖೆ ಹೇಳಿದೆ…

Leave a Reply

Your email address will not be published. Required fields are marked *

Optimized by Optimole
error: Content is protected !!