
ದಯಾ ನಾಯಕ್ 1995 ರಲ್ಲಿ ಈಗ ಮುಂಬೈ ಪೊಲೀಸ್ ಎಂದು ಕರೆಯಲ್ಪಡುವ ಬಾಂಬೆ ಪೊಲೀಸ್ ಇಲಾಖೆಯಲ್ಲಿ ಸಬ್-ಇನ್ಸ್ಪೆಕ್ಟರ್ ಹುದ್ದೆಯೊಂದಿಗೆ ತರಬೇತಿದಾರರಾಗಿ ಸೇರಿದರು. ತರಬೇತಿ ಪೂರ್ಣಗೊಳಿಸಿದ ನಂತರ, ಅವರನ್ನು 1996 ರಲ್ಲಿ ಜುಹು ಪೊಲೀಸ್ ಠಾಣೆಗೆ ನಿಯೋಜಿಸಲಾಯಿತು. ಅವರ ಮೊದಲ ಎನ್ಕೌಂಟರ್ ಹತ್ಯೆ ಡಿಸೆಂಬರ್ 31 ರ ರಾತ್ರಿ ಸಂಭವಿಸಿತು, ಅಲ್ಲಿ ಅವರು ಕೆಲವು ದರೋಡೆಕೋರರ ಮೇಲೆ ಗುಂಡು ಹಾರಿಸಿದ್ದರು. ತರುವಾಯ, ಅವರನ್ನು ದರೋಡೆಕೋರರ ವಿರುದ್ಧ ಕೆಲಸ ಮಾಡುವ ವಿಶೇಷ ದಳಕ್ಕೆ ವರ್ಗಾಯಿಸಲಾಯಿತು.
ಮುಂಬೈ : ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಈ ತಿಂಗಳ ಅಂತ್ಯಕ್ಕೆ ನಿವೃತ್ತಿ.!

ದಯಾ ನಾಯಕ್ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಯೆನ್ನೆಹೊಳೆ ಗ್ರಾಮದಲ್ಲಿ ಕೊಂಕಣಿ ಮಾತನಾಡುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಅಜ್ಜ ನಿರ್ಮಿಸಿದ ಕನ್ನಡ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯವರೆಗೆ ಅಧ್ಯಯನ ಮಾಡಿದರು. 1979 ರಲ್ಲಿ, ಕುಟುಂಬಕ್ಕೆ ಸಹಾಯ ಮಾಡಲು ಸ್ವಲ್ಪ ಹಣ ಸಂಪಾದಿಸಲು ಅವರ ತಂದೆ ಕೇಳಿದ ನಂತರ ಅವರು ಮುಂಬೈಗೆ ಬಂದರು. ಅವರು ಹೋಟೆಲ್ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದರು, ಹೋಟೆಲ್ನ ವರಾಂಡಾದಲ್ಲಿ ಮಲಗುತ್ತಿದ್ದರು. ಅವರು ಕೆಲಸ ಮಾಡುತ್ತಲೇ ಶಿಕ್ಷಣವನ್ನು ಮುಂದುವರೆಸಿದರು ಮತ್ತು 8 ವರ್ಷಗಳ ನಂತರ ಡಿ.ಎನ್. ನಗರದ ಸಿಇಎಸ್ ಕಾಲೇಜಿನಿಂದ ಪದವಿ ಪಡೆದರು. ಪದವಿ ಪಡೆದ ನಂತರ, ಅವರು ಪ್ಲಂಬರ್ನೊಂದಿಗೆ ಮೇಲ್ವಿಚಾರಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು, ಮಾಸಿಕ ₹ 3,000 ಸಂಬಳ ಗಳಿಸಿದರು. ಪೊಲೀಸ್ ಕೆಲಸ ಸಿಗುವವರೆಗೂ ಅವರು ಹೋಟೆಲ್ನಲ್ಲಿಯೇ ಇದ್ದರು.

news.ashwasurya.in
ಅಶ್ವಸೂರ್ಯ/ಮುಂಬೈ : ಮುಂಬೈ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಕೆಲವೇ ತಿಂಗಳುಗಳಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ, ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಹೆಮ್ಮೆಯ ಕನ್ನಡಿಗ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರು ತಮ್ಮ ಮೂವತ್ತು ವರ್ಷಗಳ ದಕ್ಷ ಖಡಕ್ ಸೇವೆಯ ನಂತರ ಈ ತಿಂಗಳ ಅಂತ್ಯಕ್ಕೆ ವೃತ್ತಿಯಿಂದ ನಿವೃತ್ತರಾಗಲಿದ್ದಾರೆ.
1995ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ ಸೇರ್ಪಡೆಗೊಂಡಿದ್ದ ದಯಾ ನಾಯಕ್, ಇದೀಗ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ACP) ಹುದ್ದೆಯಿಂದ ನಿವೃತ್ತಿಯಾಗಲಿದ್ದಾರೆ. ಮುಂಬೈ ಅಂಡರ್ವರ್ಲ್ಡ್ನ ಪಾಪಿಗಳಿಗೆ ಪೊಲೀಸ್ ಶಕ್ತಿ ಏನೆಂದು ತೋರಿಸಿಕೊಟ್ಟ ದಯಾ ನಾಯಕ್, “ಮುಂಬೈನಲ್ಲಿ ಇನ್ನೂ ಗ್ಯಾಂಗ್ಸ್ಟರ್ಗಳ ಅಟ್ಟಹಾಸ ನಡೆಯುವುದಿಲ್ಲ” ಎಂಬುದನ್ನು ತಮ್ಮ ಪ್ರಾಮಾಣಿಕ ದಕ್ಷತೆಯ ಜೋತೆಗೆ ರಿವಲ್ವಾರ್ ನಿಂದಲೇ ಖಡಕ್ ಸಂದೇಶ ರವಾನಿಸಿದ್ದರು.ದಯಾ ನಾಯಕ್ ಅವರ ನಡೆ ಭೂಗತ ಲೋಕವನ್ನೆ ಬೆಚ್ಚಿ ಬಿಳಿಸಿತ್ತು.
ಖಡಕ್ ಅಧಿಕಾರಿ ದಯಾ ನಾಯಕ್ ಅವರಿಂದ 85ಕ್ಕೂ ಹೆಚ್ಚು ಎನ್ಕೌಂಟರ್ಗಳು:

ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆಯ ಸದಸ್ಯರು ಸೇರಿದಂತೆ, ಕುಖ್ಯಾತ ಗ್ಯಾಂಗ್ಸ್ಟರ್ಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಚೋಟಾ ರಾಜನ್, ಅಬು ಸಲೇಂ, ಅರುಣ್ ಗೌಳಿ, ರವಿ ಪೂಜಾರಿ ಗ್ಯಾಂಗ್ಗಳಿಗೆ ಸೇರಿದ ಸುಮಾರು 85 ಜನರನ್ನು ಎನ್ಕೌಂಟರ್ ಮಾಡುವ ಮೂಲಕ ದಯಾ ನಾಯಕ್ ದೇಶಾದ್ಯಂತ ಸುದ್ದಿಯಾಗಿದ್ದರು.
ಸಾಮಾಜಿಕ ಕಾರ್ಯ ಮತ್ತು ಸಮರ್ಪಣೆ:
ಹುಟ್ಟೂರು ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿದ ದಯಾ ನಾಯಕ್, ಸಾವಿರಾರು ಮಕ್ಕಳ ಭವಿಷ್ಯ ರೂಪಿಸಲು ನೆರವಾಗಿದ್ದಾರೆ. ವೃತ್ತಿ ಜೀವನದ ಆರಂಭದಿಂದಲೂ ತಮ್ಮದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದ್ದ ಅವರು, ಭಾರತದ ಅತ್ಯುನ್ನತ ಬೇಹುಗಾರಿಕಾ ಸಂಸ್ಥೆ ‘ರಾ’ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಕಾರ್ಯಾಚರಣೆಗಳಿಗೂ ಸಹಕಾರ ನೀಡಿದ್ದಾರೆ. ವೃತ್ತಿಜೀವನದಲ್ಲಿ ಎದುರಾದ ಸೋಲು ಮತ್ತು ಅವಮಾನಗಳನ್ನು ಲೆಕ್ಕಿಸದೆ, ಅವರು ವಿಜಯದ ಹಾದಿಯಲ್ಲಿ ದಿಟ್ಟ ಹೆಜ್ಜೆ ಹಾಕಿದ ದಕ್ಷ ಅಧಿಕಾರಿ ದಯಾ ನಾಯಕ್. ಕೊಟ್ಟ ಮಾತಿಗೆ ತಪ್ಪದೆ, ಇಟ್ಟ ಹೆಜ್ಜೆಯಿಂದ ಎಂದಿಗೂ ಹಿಂದೆ ಸರಿದವರಲ್ಲ.



