
ಶಿವಮೊಗ್ಗ:ತುಂಗಾ ನಗರದಲ್ಲಿ ಮಲಗಿದಾಗಲೆ ಅಣ್ಣನ ಮರ್ಡರ್.!ಪಕ್ಕದಲ್ಲಿ ಮಲಗಿದ್ದ ತಮ್ಮ ನಾಪತ್ತೆ.!ಕೊಲೆ ಮಾಡಿದ ಹಂತಕರು ಯಾರು.? ತಮ್ಮ ಎಲ್ಲಿ.?

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ತುಂಗಾ ನಗರದಲ್ಲಿ ರಾತ್ರಿ ಮಲಗಿದಾಗಲೆ ಯುವಕನೊಬ್ಬನ ಭೀಕರ ಕೊಲೆಯಾಗಿದ್ದು, ಪಕ್ಕದಲ್ಲಿ ಮಲಗಿದ್ದ ತಮ್ಮ ನಾಪತ್ತೆಯಾಗಿದ್ದಾನೆ.! ರಾತ್ರಿ ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಣ್ಣ-ತಮ್ಮಂದಿರ ಪೈಕಿ ಬೆಳಗ್ಗೆ ಅಣ್ಣ ಮಣಿಕಂಠನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಣಿಕಂಠನ ಮೃತದೇಹದ ಬಳಿ ಕಲ್ಲು ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು ಹಂತಕರಿಗಾಗಿ ಭಲೇ ಬಿಸಿದ್ದಾರೆ.
ರಾತ್ರಿ ಊಟ ಮಾಡಿ ಮಲಗುವಾಗ ಅಣ್ಣ-ತಮ್ಮ ಇಬ್ಬರೂ ಎಂದಿನಂತೆ ಒಟ್ಟಿಗೆ ಮಲಗಿದ್ದರಂತೆ ಆದರೆ ಬೆಳಗಿನ ಜಾವ ಮನೆಯವರು ಬಂದು ನೋಡಿದಾಗ, ಅಣ್ಣನ ಮೃತದೇಹ ರಕ್ತ ಮಡುವಿನಲ್ಲಿ ಬಿದ್ದಿದ್ದರೆ.! ಆತನ ಪಕ್ಕದಲ್ಲಿ ರಾತ್ರಿ ವೇಳೆ ಮಲಗಿದ್ದ ತಮ್ಮ ನಾಪತ್ತೆಯಾಗಿದ್ದಾನೆ.!
ಈ ದೃಶ್ಯವು ಶಿವಮೊಗ್ಗದ ಮೇಲಿನ ತುಂಗಾನಗರದ ನಿವಾಸಿಗಳಿಗೆ ಆತಂಕ, ಅಚ್ಚರಿ ಹಾಗೂ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮನೆಯಲ್ಲಿ ಮಲಗಿದ್ದ ಅಣ್ಣನ ತಲೆಯ ಮೇಲೆ ದೊಡ್ಡಗಾತ್ರದ ಕಲ್ಲು ಎತ್ತಿಹಾಕಿದ್ದು ಈ ಹತ್ಯೆಯ ಹಿಂದೆ ಸಾಕಷ್ಟು ಕೂತಹಲ ಮೂಡಿದೆ. ಈ ಭೀಕರ ಕೊಲೆ ಕೇಸಿನ ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಮಣಿಕಂಠ ಎಂದು ಗುರುತಿಸಲಾಗಿದ್ದು, ಆತ ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಎಂದಿನಂತೆ ತಮ್ಮ ಸಂತೋಷ್ ಜೊತೆಯಲ್ಲಿ ಮಲಗಿದ್ದ ಮಣಿಕಂಠನ ಮೃತದೇಹ ಬೆಳಿಗ್ಗೆ ರಕ್ತದ ಮಡುವಿನಲ್ಲಿ ಪತ್ತೆಯಾದರೆ ಪಕ್ಕದಲ್ಲಿ ಮಲಗಿದ್ದ ತಮ್ಮ ನಾಪತ್ತೆಯಾಗಿರುವುದು ಸಾಕಷ್ಟು ಕೂತುಹಲ ಮೂಡಿಸಿದೆ.!? ಈ ಕೊಲೆ ಪ್ರಕರಣ ಸಾಕಷ್ಟು ನಿಗೂಢತೆಯನ್ನು ಮೂಡಿಸಿದೆ.
ಮಣಿಕಂಠನ ಸಹೋದರಿಯ ಮನೆ ಪಕ್ಕದಲ್ಲಿಯೇ ಇರುವ ಕಾರಣದಿಂದ, ಪ್ರತಿದಿನವೂ ಅಣ್ಣ ತಮ್ಮನಿಗೆ ಊಟ, ತಿಂಡಿ ಅವರೇ ತಂದು ಕೊಡುತ್ತಿದ್ದರಂತೆ. ಬೆಳಿಗ್ಗೆ ಸಹೋದರಿಯ ಚಿಕ್ಕ ಮಗ ಟೀ ಕೊಟ್ಟು ಬರುವುದಕ್ಕೆ ಮಾವನ ಮನೆಗೆ ಬಂದಾಗ, ಮನೆಯೊಳಗೆ ಮಾವನ ಹತ್ಯೆಯಾಗಿರುವುದನ್ನು ಕಂಡು ಬೆಚ್ಚಿಬಿದ್ದು ಗಾಬರಿಯಾಗಿ ಮನೆಗೆ ಓಡಿಹೋಗಿ ಮನೆಯವರಿಗೆ ವಿಷಯ ತಿಳಿಸಿದ್ದು, ತಕ್ಷಣ ಮನೆಯವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೊಲೆಯ ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಸ್ನೇಹಿತರೆ ಹತ್ಯೆ ಮಾಡಿರುವ ಶಂಕೆ.?
ಮಣಿಕಂಠನಿಗೆ ಕುಡಿಯುವ ಚಟವಿತ್ತು. ಆ ಮೂಲಕ ಸ್ನೇಹಿತರೊಂದಿಗೆ ಏನಾದರೂ ಗಲಾಟೆ ಮಾಡಿಕೊಂಡು ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಗೆ ಸಂಬಂಧಿಸಿದಂತೆ ಮಣಿಕಂಠನ ಸಹೋದರಿಯ ಹೇಳಿಕೆ ಪ್ರಕಾರ ಅಣ್ಣ-ತಮ್ಮಂದಿರ ನಡುವೆ ಯಾವುದೇ ಗಲಾಟೆ ಇರಲಿಲ್ಲ, ಆದರೆ ತಮ್ಮ ಸಂತೋಷ್ ಎಲ್ಲುಗೆ ಹೋಗಿದ್ದಾನೆ ಎನ್ನುವುದು ಅನುಮಾನ ಮೂಡಿಸುತ್ತದೆ’ ಎಂದು ಹೇಳುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ಅಣ್ಣನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ತಮ್ಮನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿರಬಹುದು ಎಂದು ಹೇಳಲಾಗುತ್ತಿದೆ.?
ಘಟನಾ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಉಪ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹಾಗೂ ತುಂಗಾನಗರ ಠಾಣೆಯ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಿಂದ ಸಾಕ್ಷ್ಯ ಸಂಗ್ರಹ ಹಾಗೂ ನಾಪತ್ತೆಯಾದ ತಮ್ಮ ಸಂತೋಷ್ ಶೋಧನೆ ಮುಂದುವರಿದಿದೆ. ಇದೇ ವೇಳೆ, ಮಣಿಕಂಠನ ಸ್ನೇಹಿತರು, ಅವರ ತಂಗಿಯರೊಂದಿಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ಪ್ರಕರಣವು ಶಿವಮೊಗ್ಗದಲ್ಲಿ ಭಾರಿ ಕೂತುಹಲ ಮೂಡಿಸಿದೆ.



